ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬೀದಿ ಬದಿ ರೊಟ್ಟಿ ತಿಂತೀರಾ? ...... ಹಾಗಾದ್ರೆ ಈ ವಿಡಿಯೋ ನೋಡಿ

ಬೀದಿ ಬದಿ ಆಹಾರ ಸೇವಿಸುವ ಎಷ್ಟು ಎಚ್ಚರವಿದ್ದರೂ ಸಾಲದು. ಯಾಕೆಂದರೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಯ ಆತಂಕ ಒಂದೆಡೆಯಾದರೆ, ಸ್ವಚ್ಛತೆ ಪಾಲನೆಯಲ್ಲಿ ನಿರ್ಲಕ್ಷ್ಯ ಇನ್ನೊಂದೆಡೆ. ಇದೀಗ ಉತ್ತರ ಪ್ರದೇಶದ ಈ ವೈರಲ್ (Viral Video) ಸುದ್ದಿ ಬೀದಿ ಬದಿ ಆಹಾರದ ಬಗ್ಗೆ ಎಲ್ಲರಲ್ಲೂ ಆತಂಕ ಮೂಡಿಸದೆ ಇರಲಾರದು.

ಡಾಬಾದಲ್ಲಿ ರೊಟ್ಟಿ ತಯಾರಿಸುವಾಗ ಈತ ಮಾಡಿದ್ದೇನು?

ಬಾಗಪತ್: ಬೀದಿ ಬದಿಯ ಆಹಾರ (Street food) ಸುರಕ್ಷಿತವಲ್ಲ, ಕಳಪೆ ಸಾಮಗ್ರಿಗಳಿಂದ ತಯಾರಿಸಲಾಗುತ್ತದೆ ಎನ್ನುವ ಆರೋಪಗಳು ಬಹಳ ಹಿಂದಿನಿಂದಲೂ ಇದೆ. ಇದರೊಂದಿಗೆ ಸ್ವಚ್ಛತೆ ಬಗ್ಗೆ ನಿರ್ಲಕ್ಷವೂ ಕೆಲವೊಮ್ಮೆ ವರದಿಯಾಗುತ್ತದೆ. ಆದರೆ ಕೆಲವರು ಬೇಕುಬೇಕೆಂದೇ ಆಹಾರವನ್ನು ಕಲುಷಿತಗೊಳಿಸಿ ಮಾರುತ್ತಾರೆ. ಇಂತಹ ಒಂದು ಘಟನೆ ಈಗ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ವ್ಯಕ್ತಿಯೊಬ್ಬ ರೊಟ್ಟಿ ತಯಾರಿಸುವಾಗ ಅದಕ್ಕೆ ಉಗುಳುತ್ತಿರುವ (Spitting On Rotis) ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಉತ್ತರಪ್ರದೇಶದ ಬಾಗಪತ್ ನ ಪಾಠಶಾಲಾ ರಸ್ತೆಯಲ್ಲಿರುವ ದಾಬಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ದಾಬಾದಲ್ಲಿರುವ ಒಬ್ಬ ವ್ಯಕ್ತಿ ರೊಟ್ಟಿಗಳನ್ನು ಒಲೆಯ ಮೇಲೆ ಇಡುವ ಮೊದಲು ಉಗುಳುತ್ತಿರುವುದನ್ನು ಕಾಣಬಹುದು.



ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಶುಕ್ರವಾರ ಪೊಲೀಸರು ಆರೋಪಿಯನ್ನು ಬಂಧಿಸಿದರು.

ಇದನ್ನೂ ಓದಿ: NIA Raid: ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮಂಗಳೂರಿನ 14 ಕಡೆ ಎನ್‌ಐಎ ದಾಳಿ

ಈ ಕುರಿತು ಮಾಹಿತಿ ನೀಡಿದ ವೃತ್ತ ಅಧಿಕಾರಿ (ಸಿಒ) ಖೇಕ್ರಾ ರೋಹನ್ ಚೌರಾಸಿಯಾ, ಪಾಠಶಾಲಾ ರಸ್ತೆಯಲ್ಲಿರುವ ದಾಬಾದ ವಿಡಿಯೊವೊಂದರಲ್ಲಿ ಒಬ್ಬ ವ್ಯಕ್ತಿ ರೊಟ್ಟಿಗಳನ್ನು ತಯಾರಿಸುವಾಗ ಅವುಗಳನ್ನು ಒಲೆಯ ಮೇಲೆ ಇಡುವ ಮೊದಲು ಉಗುಳುತ್ತಿರುವುದನ್ನು ತೋರಿಸಲಾಗಿದೆ. ಇದಕ್ಕೆ ಸಂಬಂಧಿಸಿ ಒಬ್ಬನನ್ನು ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.