ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Investment scam: ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಪ್ರಸಾರವಾದ ನಕಲಿ ಜಾಹೀರಾತು ನಂಬಿ ಹೂಡಿಕೆ; 21.93 ಲಕ್ಷ ಕಳೆದುಕೊಂಡ ಬೆಳಗಾವಿಯ ವ್ಯಕ್ತಿ!

Online investment scam in Belagavi: ಕಳೆದ ಜೂನ್ 20ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಪ್ರಸಾರವಾಗಿದ್ದ ಷೇರು ಹೂಡಿಕೆ ಕುರಿತ ನಕಲಿ ಜಾಹೀರಾತನ್ನು ಬೆಳಗಾವಿ ವ್ಯಕ್ತಿಯೊಬ್ಬರು ವೀಕ್ಷಿಸಿದ್ದರು. ಜಾಹೀರಾತಿನಲ್ಲಿದ್ದ ಲಿಂಕ್ ಮೂಲಕ ಹೆಸರು, ವಿಳಾಸ ದಾಖಲಿಸಿ ನೋಂದಣಿ ಮಾಡಿಕೊಂಡಿದ್ದರು. ಬಳಿಕ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ.

ಬೆಳಗಾವಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ (Investment scam) ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂಬ ಯೂಟ್ಯೂಬ್ ನಕಲಿ ಜಾಹೀರಾತು ನಂಬಿದ ಹಿಂದವಾಡಿ ನಿವಾಸಿ ಕಿಶೋರ (60) ಎಂಬುವರು 21,93,999 ರೂ. ಕಳೆದುಕೊಂಡಿದ್ದಾರೆ. ಈ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಜೂನ್ 20ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಪ್ರಸಾರವಾಗಿದ್ದ ಷೇರು ಹೂಡಿಕೆ ಕುರಿತ ನಕಲಿ ಜಾಹೀರಾತನ್ನು ಕಿಶೋರ ವೀಕ್ಷಿಸಿದ್ದರು. ಜಾಹೀರಾತಿನಲ್ಲಿದ್ದ ಲಿಂಕ್ ಮೂಲಕ ಹೆಸರು, ವಿಳಾಸ ದಾಖಲಿಸಿ ನೋಂದಣಿ ಮಾಡಿಕೊಂಡಿದ್ದರು. ಬಳಿಕ ಸಂದೀಪ ಶರ್ಮಾ ಎಂಬಾತ ಕರೆ ಮಾಡಿ ಅವರನ್ನು ಟೆಲಿಗ್ರಾಮ್ ಗುಂಪಿಗೆ ಸೇರಿಸಿದ್ದ.

Sand Mining: ಹರಳಹಳ್ಳಿ ಬಳಿ 146 ಮೆಟ್ರಿಕ್ ಟನ್ ಮರಳು ಜಪ್ತಿ: ಮರಳು ಸಾಗಿಸಲು ವಾಹನಗಳಿಲ್ಲದೆ ರಾತ್ರಿಯಿಡೀ ನದಿತೀರದಲ್ಲೇ ಬೀಡುಬಿಟ್ಟ ಅಧಿಕಾರಿಗಳು

ನಂತರ ಪ್ರಿಯಾಂಶ ಶರ್ಮಾ ಎಂಬಾತ ಫೋನ್‌ಪೇ ಮೂಲಕ 22 ಸಾವಿರ ರೂ. ವರ್ಗಾಯಿಸಿಕೊಂಡಿದ್ದ. ಹೆಚ್ಚಿನ ಮೊತ್ತ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗಲಿದೆ ಎಂದು ನಂಬಿಸಿ, ವೆಬ್‌ಸೈಟ್ ಮೂಲಕ ಹಂತ ಹಂತವಾಗಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ಆದರೆ ಹೂಡಿಕೆ ಮಾಡಿದ ಹಣವನ್ನೂ ನೀಡದೆ, ಲಾಭವನ್ನೂ ಕೊಡದೆ ವಂಚಿಸಲಾಗಿದೆ ಎಂದು ಕಿಶೋರ ದೂರಿನಲ್ಲಿ ತಿಳಿಸಿದ್ದಾರೆ.

ಒಟ್ಟು 21,93,999 ವಂಚನೆಗೊಳಗಾಗಿರುವುದಾಗಿ ಅವರು ಆರೋಪಿಸಿದ್ದು, ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.