ಸಿಂಗಾಪುರ: ಆಸ್ಪತ್ರೆಯಲ್ಲಿ (Singapore premium hospital) ಸಂದರ್ಶಕ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ ಆರೋಪದಲ್ಲಿ ಭಾರತೀಯ ನರ್ಸ್ ಗೆ (Indian Nurse) ಜೈಲು ಶಿಕ್ಷೆ ವಿಧಿಸಲಾಗಿದೆ. ಕಳೆದ ಜೂನ್‌ನಲ್ಲಿ ವ್ಯಕ್ತಿಯೊಬ್ಬರ ಮೇಲೆ 34 ವರ್ಷದ ಎಲಿಪೆ ಶಿವಾ ನಾಗು ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಸಿಂಗಾಪುರ ಪ್ರೀಮಿಯಂ ಆಸ್ಪತ್ರೆಯಲ್ಲಿ ಎಲಿಪೆ ಶಿವಾ ನಾಗು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಆತ ಆಸ್ಪತ್ರೆಗೆ ಬಂದಿದ್ದ ಸಂದರ್ಶಕನೊಬ್ಬನಿಗೆ ಲೈಂಗಿಕ ಕಿರುಕುಳದ ನೀಡಿದ್ದ ಎನ್ನಲಾಗಿದೆ.
ಸಿಂಗಾಪುರದ ರಫೆಲ್ಸ್ ಪ್ರೀಮಿಯಂ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಎಲಿಪೆ ಶಿವಾ ನಾಗು ತಪ್ಪೊಪ್ಪಿಕೊಂಡ ಬಳಿಕ ಆತನಿಗೆ ಒಂದು ವರ್ಷ ಮತ್ತು ಎರಡು ತಿಂಗಳ ಜೈಲು ಶಿಕ್ಷೆ ಹಾಗೂ ಎರಡು ಲಾಠಿ ಪ್ರಹಾರ ಶಿಕ್ಷೆಯನ್ನು ವಿಧಿಸಲಾಗಿದೆ.
ಸಂತ್ರಸ್ತನನ್ನು ಸೋಂಕು ರಹಿತಗೊಳಿಸುವುದಾಗಿ ಹೇಳಿ ಎಲಿಪೆ ಶಿವಾ ನಾಗು ಆಸ್ಪತ್ರೆಯಲ್ಲಿ ಪುರುಷ ಸಂದರ್ಶಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಎಲಿಪೆ ಶಿವಾ ನಾಗು ವಿರುದ್ಧ ಆರೋಪ ಕೇಳಿ ಬಂದ ಬಳಿಕ ಆತನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಈ ಘಟನೆಯಿಂದ ಸಂತ್ರಸ್ತನಿಗೆ ಹಿಂದಿನ ನೆನಪುಗಳು ಕಾಡುವಂತೆ ಮಾಡಿದೆ. ಸಂತ್ರಸ್ತನ ವಯಸ್ಸು ಸೇರಿದಂತೆ ವಿವರಗಳನ್ನು ನ್ಯಾಯಾಲಯದ ದಾಖಲೆಗಳಿಂದ ಅಳಿಸಲಾಯಿತು.
ಏನಾಗಿತ್ತು?
ಜೂನ್ 18 ರಂದು ನಾರ್ತ್ ಬ್ರಿಡ್ಜ್ ರಸ್ತೆಯಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತ ಸಂಜೆ 7.30 ರ ಸುಮಾರಿಗೆ ಶೌಚಾಲಯಕ್ಕೆ ಹೋಗಿದ್ದಾನೆ. ಆಗ ಎಲಿಪೆ ಅದನ್ನು ನೋಡಿ ನಿನ್ನನ್ನು ಸೋಂಕುರಹಿತ ಮಾಡುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಯುಜೀನ್ ಫುವಾ ತಿಳಿಸಿದ್ದಾರೆ.
ಘಟನೆಯಿಂದ ಆಘಾತಕ್ಕೊಳಗಾದ ಸಂತ್ರಸ್ತ ಅಲ್ಲಿಂದ ತೆರಲಿಲ್ಲ. ಬಳಿಕ ಆತ ತನ್ನ ಅಜ್ಜನ ಬಳಿಗೆ ತೆರಳಿದನು. ಈ ಕುರಿತು ಜೂನ್ 21 ರಂದು ದೂರು ನೀಡಲಾಗಿದ್ದು, ಎರಡು ದಿನಗಳ ನಂತರ ಎಲಿಪೆಯನ್ನು ಬಂಧಿಸಲಾಯಿತು. ಶುಕ್ರವಾರ ನ್ಯಾಯಾಲಯವು ಎಲಿಪೆಗೆ ಲಾಠಿ ಪ್ರಹಾರದೊಂದಿಗೆ ಒಂದು ವರ್ಷ ಮತ್ತು ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: Murder case: ಅಕ್ರಮ ಸಂಬಂಧ- ಪತ್ನಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಪಾಪಿ ಪತಿ
ಮಲತಂದೆಯಿಂದಲೇ ಮಗಳ ಹತ್ಯೆ
ಮಲತಂದೆಯೊಬ್ಬ ಮಗಳನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುಂಬಳಗೋಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ದರ್ಶನ್ ಎಂಬಾತ 7 ವರ್ಷದ ಸಿರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ದರ್ಶನ್ ಪರಾರಿಯಾಗಿದ್ದಾನೆ. ಕೊಲೆಯಾದ ಬಾಲಕಿ ಸಿರಿಯ ತಾಯಿ ಮೊದಲ ಪತಿ ಮೃತಪಟ್ಟ ಬಳಿಕ ದರ್ಶನ್‌ನನ್ನು ಎರಡನೇ ಮದುವೆಯಾಗಿದ್ದರು. ಆದರೆ ಇದೀಗ ದರ್ಶನ್ ಪತ್ನಿ ಜೊತೆ ಗಲಾಟೆ ಮಾಡಿ ಅದೇ ಕೋಪದಲ್ಲಿ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ. ಸಿರಿಯು ಶಿಲ್ಪಾಳ ಮೊದಲ ಪತಿಯ ಮಗಳು. ಮೊದಲ ಪತಿ ಮೃತಪಟ್ಟ ಬಳಿಕ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ದರ್ಶನ್ ನನ್ನು ಶಿಲ್ಪಾ ಮದುವೆಯಾಗಿದ್ದಳು. ಈ ಕುರಿತು ಕುಂಬಳಗೊಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.