ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder case: ಅಕ್ರಮ ಸಂಬಂಧ- ಪತ್ನಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಪಾಪಿ ಪತಿ

Illicit relationship: ಅಕ್ರಮ ಸಂಬಂಧಕ್ಕೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಬಲಿಯಾಗಿದೆ. ದೂರದೂರಿನಲ್ಲಿ ಕೆಲಸಕ್ಕಿದ್ದ ಪತಿ ಮನೆಗೆ ಮರಳಿದಾಗ ಪತ್ನಿ ನೆರೆಮನೆಯತನೊಂದಿಗೆ ಅಕ್ರಮ ಸಂಬಂಧದಲ್ಲಿರುವುದು ತಿಳಿದು ಆಕೆಯನ್ನು ಕೊಂದು ಕೋಣೆಯ ಹಾಸಿಗೆಯಡಿಯಲ್ಲಿ ಹೂತಿಟ್ಟಿದ್ದಾನೆ. ಬಳಿಕ ಅದರ ಮೇಲೆಯೇ 12 ದಿನಗಳ ಕಾಲ ಮಲಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಪತ್ನಿಯನ್ನು ಕೊಂದು ಹಾಸಿಗೆಯಡಿ ಹೂತಿಟ್ಟ ಪತಿ

-

ಉತ್ತರಪ್ರದೇಶ: ಪತ್ನಿಯನ್ನು ಕೊಂದು (Murder Case) ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಪತಿಯನ್ನು ಉತ್ತರ ಪ್ರದೇಶದ ಪೊಲೀಸರು (Uttar Pradesh Police) ಬಂಧಿಸಿದ್ದಾರೆ. ಹರಿಯಾಣದಲ್ಲಿ (Haryana) ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹರಿಕಿಶನ್ ಎಂಬಾತ ಪತ್ನಿ ಪುಲಾ ದೇವಿಯನ್ನು ಕೊಂದು ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟಿದ್ದ. ಬಳಿಕ ಸುಮಾರು 12 ದಿನಗಳ ಕಾಲ ಅದೇ ಹಾಸಿಗೆಯ ಮೇಲೆ ಮಲಗಿದ್ದನು. ಪುಲಾ ದೇವಿ ಸಹೋದರ ನಾಪತ್ತೆ ದೂರು (Missing case) ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಅನೈತಿಕ ಸಂಬಂಧದ ಆರೋಪದಲ್ಲಿ ಹರಿ ಕಿಶನ್ ತನ್ನ ಪತ್ನಿಯನ್ನು ಕೊಂದು ಹಾಕಿದ್ದಾನೆ. ಹರಿಯಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹರಿಕಿಶನ್ ಇತ್ತೀಚೆಗೆ ಮನೆಗೆ ಮರಳಿದ್ದನು. ಬಳಿಕ ಅಕ್ಟೋಬರ್ 6 ರಿಂದ ಆತನ ಪತ್ನಿ ಫೂಲಾ ದೇವಿ (45) ನಾಪತ್ತೆಯಾಗಿದ್ದಳು. ಈ ಕುರಿತು ಅಕ್ಟೋಬರ್ 13ರಂದು ಆಕೆಯ ಸಹೋದರ ನಾಪತ್ತೆ ದೂರು ದಾಖಲಿಸಿದ್ದನು. ಈ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಹರಿಕಿಶನ್ (48) ಎಂಬಾತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Love Jihad: ಬೆಂಗಳೂರಿನಲ್ಲೊಂದು ʼಲವ್‌ ಜಿಹಾದ್‌ʼ ಪ್ರಕರಣ, ಆರೋಪಿ ಮೊಹಮ್ಮದ್‌ ಇಶಾಕ್‌ ಬಂಧನ

ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ರಮಾನಂದ ಪ್ರಸಾದ್ ಕುಶ್ವಾಹ, ಬಹ್ರೈಚ್ ಜಿಲ್ಲೆಯ ಅಹತಾ ಗ್ರಾಮದ ನರಪತ್‌ಪುರ್ವಾ ಪ್ರದೇಶದ ಹರಿಕಿಶನ್ ನನ್ನು ಬಾರಾಬಂಕಿ ಜಿಲ್ಲೆಯ ದುರ್ಗಾಪುರ ತಪೇಸಿ ಗ್ರಾಮದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದರು.

ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ ಬಳಿಕ ತನಿಖೆಗೆ ಆಗಮಿಸಿದ ಪೊಲೀಸರು ಹಾಸಿಗೆಯ ಕೆಳಗೆ ಮಣ್ಣನ್ನು ಅಗೆದಿರುವ ಗುರುತನ್ನು ಗಮನಿಸಿ ಅದನ್ನು ಅಗೆದಿದ್ದಾರೆ. ಇದರಲ್ಲಿ ಫೂಲಾ ದೇವಿಯ ಕೊಳೆತ ಶವ ಸುಮಾರು ಐದರಿಂದ ಆರು ಅಡಿ ಆಳದಲ್ಲಿ ಕಂಡು ಬಂದಿದೆ. ಈ ವೇಳೆ ಆರೋಪಿ ಮನೆಯಿಂದ ಪರಾರಿಯಾಗಿದ್ದ. ಆತನ ಪತ್ತೆಗೆ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು ಎಂದು ತಿಳಿಸಿದರು.

ಇದನ್ನೂ ಓದಿ: Assault Case: ಅಮಾನವೀಯ ಕೃತ್ಯ, ಅನೈತಿಕ ಸಂಬಂಧ ಆರೋಪಿಸಿ ಮಹಿಳೆಯ ನಗ್ನಗೊಳಿಸಿ, ತಲೆ ಬೋಳಿಸಿ ಹಲ್ಲೆ

ಬಾರಾಬಂಕಿ ಜಿಲ್ಲೆಯ ದುರ್ಗಾಪುರ ತಪೇಸಿ ಗ್ರಾಮದಲ್ಲಿ ಆತನನ್ನು ಬಂಧಿಸಲಾಗಿದ್ದು, ಹರಿಕಿಶನ್ ಹರಿಯಾಣದಿಂದ ಹಿಂದಿರುಗಿದಾಗ ಗುಡ್ಡು ಎಂಬಾತನೊಂದಿಗೆ ಪುಲಾ ದೇವಿ ಅಕ್ರಮ ಸಂಬಂಧ ಹೊಂದಿರುವುದು ತಿಳಿದು ಬಂದಿದೆ. ಇದನ್ನು ಕಣ್ಣಾರೆ ನೋಡಿದ ಬಳಿಕ ಕೋಪಗೊಂಡ ಹರಿಕಿಶನ್ ಆಕೆಯನ್ನು ಕೊಂದು ಶವವನ್ನು ಕೋಣೆಯಲ್ಲಿ ಹೂತು ಹಾಕಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಎಎಸ್ಪಿ ಹೇಳಿದರು. ಆರೋಪಿ ಹರಿ ಕಿಶನ್ ಅನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಎಎಸ್ಪಿ ರಮಾನಂದ ಪ್ರಸಾದ್ ಕುಶ್ವಾಹ ತಿಳಿಸಿದ್ದಾರೆ.