Police Suspend: ಲಾಕಪ್ ಡೆತ್ ಪ್ರಕರಣ; ನಾಲ್ವರು ಪೊಲೀಸರು ಸಸ್ಪೆಂಡ್
ಚನ್ನಪಟ್ಟಣದ (Channapatna) ಎಂಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ (Lockup Death) ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಕಳ್ಳತನ ಕೇಸ್ಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಆರೋಪಿ ರಮೇಶ್ ಸ್ಟೇಶನ್‌ನಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.


ರಾಮನಗರ: ಚನ್ನಪಟ್ಟಣದ (Channapatna) ಎಂಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಕಳ್ಳತನ ಕೇಸ್ಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಆರೋಪಿ ರಮೇಶ್ ಸ್ಟೇಶನ್‌ನಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಕರ್ತವ್ಯ ಲೋಪದ ಹಿನ್ನಲೆ ಎಎಸ್ಐ ನಾಗರಾಜು, ಕಾನ್ ಸ್ಟೇಬಲ್ ಗಳಾದ ಲಕ್ಷ್ಮಿನಾರಾಯಣ, ಪ್ರತಾಪ್, ಸೋಮನಾಥ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಂಕೆ ದೊಡ್ಡಿಯ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದ 60 ವರ್ಷದ ರಮೇಶ್ ಮೂಲತಃ ಮದ್ದೂರಿನ ದುಂಡನಹಳ್ಳಿ ನಿವಾಸಿಯಾಗಿದ್ದು, ಕಳ್ಳತನ ಕೇಸ್ ನಲ್ಲಿ ಅಂದರ್ ಆಗಿದ್ದ. ಆದರೆ ಆಗಸ್ಟ್ 20ನೇ ತಾರೀಕಿನಂದು ಪೊಲೀಸ್ ಠಾಣೆಯ ಶೌಚಾಲಯದಲ್ಲೇ ಈತ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ. ಈ ಆರೋಪ ಹಿನ್ನೆಲೆ ಠಾಣೆಯ ನಾಲ್ವರು ಪೊಲೀಸರನ್ನ ಸಸ್ಪೆಂಡ್ ಮಾಡಿ ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Darshan Case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 262 ಸಾಕ್ಷಿ; ವಿಚಾರಣೆ ಮುಗಿಯಲು ಎಷ್ಟು ವರ್ಷ ಬೇಕು?
ಗುಟ್ಕಾ ತಿನ್ನಬೇಡ ಎಂದು ಹೇಳಿದ್ದಕ್ಕೆ ಆತ್ಮಹತ್ಯೆ
ಗುಟ್ಕಾ ತಿನ್ನಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಗುಟ್ಕಾ ತಿನ್ನಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ 16 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೋಹಿತ್ ಮಣ್ಣಾಂಕಲಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ ಕರ್ಜಗಿ ಗ್ರಾಮದ ರೋಹಿತ್ 9ನೇ ತರಗತಿಯಲ್ಲಿ ಓದುತ್ತಿದ್ದ. ಅಜ್ಜಿ ಮನೆಯಲ್ಲಿದ್ದ ರೋಹಿತ್ ಗುಟ್ಕಾ ತಿನ್ನುವ ವಿಚಾರ ಅಜ್ಜಿಗೆ ಗೊತ್ತಾಗಿದ್ದು, ಗುಟ್ಕಾ ತಿನ್ನಬೇಡ ಎಂದು ಬುದ್ಧಿವಾದದ ಹೇಳಿದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.