PM Modi: ವಿಶ್ವದಲ್ಲೇ ಭಾರತ ಈಗ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ- ಮೋದಿ
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೋಲ್ಕತ್ತಾದಲ್ಲಿ ಶುಕ್ರವಾರ ಬಹು ಮೆಟ್ರೋ ರೈಲು ಯೋಜನೆಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಗರಾಭಿವೃದ್ಧಿ ಮತ್ತು ಹಸುರೀಕರಣಕ್ಕೆ ಸರ್ಕಾರದ ಬದ್ಧತೆಯನ್ನು ಈ ಯೋಜನೆಗಳು ಪ್ರತಿಬಿಂಬಿಸುತ್ತವೆ. ಭಾರತವು ಇಂದು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿದೆ ಎಂದರು.


ಕೋಲ್ಕತ್ತಾ: ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನು (Metro network) ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು. ಅವರು ಕೋಲ್ಕತ್ತಾದಲ್ಲಿ (Kolkata) ಶುಕ್ರವಾರ ಬಹು ಮೆಟ್ರೋ ರೈಲು ಯೋಜನೆಗಳನ್ನು (Kolkata metro railway projects) ಉದ್ಘಾಟಿಸಿದರು ಮಾತನಾಡಿದರು. ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿರುವಂತೆ ಸರ್ಕಾರವು ಪ್ರತಿಯೊಂದು ನಗರದ ಅಭಿವೃದ್ಧಿಗಾಗಿ (Urban development and green mobility) ಕೆಲಸ ಮಾಡುತ್ತಿದೆ ಎಂದು ಈ ಯೋಜನೆಗಳು ತೋರಿಸಿವೆ ಎಂದು ಅವರು ತಿಳಿಸಿದರು.
ಬಹು ಮೆಟ್ರೋ ರೈಲು ಯೋಜನೆ ಉದ್ಘಾಟನೆ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರಾಭಿವೃದ್ಧಿ ಮತ್ತು ಹಸುರೀಕರಣಕ್ಕೆ ಸರ್ಕಾರದ ಬದ್ಧತೆಯನ್ನು ಈ ಯೋಜನೆಗಳು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಭಾರತವು ಇಂದು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿದೆ. ಇದರಲ್ಲಿ ಕೋಲ್ಕತ್ತಾದ ಪಾತ್ರವು ಮತ್ತಷ್ಟು ಹೆಚ್ಚಾಗಿದೆ. ಭಾರತವು ಪ್ರತಿಯೊಂದು ನಗರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಪ್ರತಿಯೊಂದು ನಗರದಲ್ಲಿಯೂ ಹಸಿರು ಚಲನಶೀಲತೆಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವಿದ್ಯುತ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಮೆಟ್ರೋ ಜಾಲವನ್ನು ವಿಸ್ತರಿಸಲಾಗುತ್ತಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಅಭಿವೃದ್ಧಿಯನ್ನು ವೇಗಗೊಳಿಸಲು ನನಗೆ ಅವಕಾಶ ಸಿಕ್ಕಿದೆ. ಕೋಲ್ಕತ್ತಾದ ಸಾರ್ವಜನಿಕ ಸಾರಿಗೆ ಪ್ರಗತಿ ಸಾಧಿಸಿರುವುದಕ್ಕೆ ಎಲ್ಲರೂ ಸಂತೋಷವಾಗಿದ್ದಾರೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ಕೋಲ್ಕತ್ತಾದ ಜನರನ್ನು ನಾನು ಅಭಿನಂದಿಸುತ್ತೇನೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಸಚಿವರಾದ ರವನೀತ್ ಸಿಂಗ್ ಮತ್ತು ಶಾಂತನು ಠಾಕೂರ್ ಅವರು ಸಮ್ಮಾನಿಸಿದರು.
Allow me to be a little nostalgic today.
— Mamata Banerjee (@MamataOfficial) August 22, 2025
As the Railways Minister of India, I was fortunate in planning and sanctioning series of Metro Railway corridors in metropolitan Kolkata. I had drawn the blueprints, arranged the funds, initiated the works and ensured that the different…
ವಿವಿಧ ಮೆಟ್ರೋ ರೈಲ್ವೆ ಯೋಜನೆ
ಕೋಲ್ಕತ್ತಾದಲ್ಲಿ ವಿವಿಧ ಮೆಟ್ರೋ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ ನರೇಂದ್ರ ಮೋದಿ ಅವರು ಜೆಸ್ಸೋರ್ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದರು. ಜೆಸ್ಸೋರ್ ರಸ್ತೆ ಮೆಟ್ರೋ ನಿಲ್ದಾಣದಿಂದ ನೋಪರಾ-ಜೈ ಹಿಂದ್ ಬಿಮನ್‌ಬಂದರ್ ಮೆಟ್ರೋ ಸೇವೆ ಮತ್ತು ಸೀಲ್ಡಾ-ಎಸ್‌ಪ್ಲನೇಡ್ ಮೆಟ್ರೋ ಸೇವೆ ಮತ್ತು ಬೇಲೆಘಾಟಾ-ಹೇಮಂತ ಮುಖೋಪಾಧ್ಯಾಯ ಮೆಟ್ರೋ ಸೇವೆಯನ್ನು ಉದ್ಘಾಟಿಸಿದ ಅವರು, ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸೀಲ್ಡಾ ಎಸ್‌ಪ್ಲನೇಡ್ ಮೆಟ್ರೋ ಸೇವೆ ಮತ್ತು ಬೇಲೆಘಾಟಾ- ಹೇಮಂತ ಮುಖೋಪಾಧ್ಯಾಯ ಮೆಟ್ರೋ ಸೇವೆಗೆ ಹಸಿರು ನಿಶಾನೆ ತೋರಿದರು. ಬಳಿಕ ಜೆಸ್ಸೋರ್ ರಸ್ತೆ ಮೆಟ್ರೋ ನಿಲ್ದಾಣದಿಂದ ಜೈ ಹಿಂದ್ ಬಿಮನ್‌ಬಂದರ್‌ಗೆ ಪ್ರಯಾಣ ಮಾಡಿ ಮೆಟ್ರೋ ಮೂಲಕವೇ ಹಿಂದಿರುಗಿದರು.
ಏನು ವಿಶೇಷ ?
ಸೀಲ್ಡಾ-ಎಸ್‌ಪ್ಲನೇಡ್ ಮೆಟ್ರೋ ಎರಡು ನಿಲ್ದಾಣಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು 40 ನಿಮಿಷಗಳಿಂದ ಕೇವಲ 11 ನಿಮಿಷಗಳಿಗೆ ಇಳಿಸೈಡ್. ಇದು ಬೆಲೆಘಾಟಾ-ಹೇಮಂತ ಮುಖ್ಯೋಪಾಧ್ಯಾಯ ಮೆಟ್ರೋ ವಿಭಾಗವು ಐಟಿ ಕೇಂದ್ರದೊಂದಿಗೆ ಸಂಪರ್ಕವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಮೆಟ್ರೋ ಮಾರ್ಗಗಳು ಕೋಲ್ಕತ್ತಾದ ಕೆಲವು ಜನನಿಬಿಡ ಪ್ರದೇಶಗಳನ್ನು ಸಂಪರ್ಕಿಸುತ್ತವೆ. ಮಲ್ಟಿಮೋಡಲ್ ಸಂಪರ್ಕವನ್ನು ಬಲಪಡಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೋಲ್ಕತ್ತಾದ ಮೆಟ್ರೋ ವಿಸ್ತರಣೆಗೆ ತಮ್ಮ ಕೊಡುಗೆಯನ್ನು ವಿವರಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಕೋಲ್ಕತ್ತಾದಲ್ಲಿ ಮೂರು ಮೆಟ್ರೋ ಸೇವೆಗಳು ಸೇರಿದಂತೆ ಪ್ರಧಾನ ಮಂತ್ರಿಯವರ ಮೂಲಸೌಕರ್ಯ ಯೋಜನೆಗಳ ಅನಾವರಣಕ್ಕೆ ಅವರು ಹಾಜರಾಗಲಿಲ್ಲ.