ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪತಿಯನ್ನು ಹುಡುಕಿಕೊಂಡು ಬಂದ ಗರ್ಭಿಣಿ ಮೇಲೆ ಮೆಣಸಿನ ಪುಡಿ ಎರಚಿದ ದುಷ್ಕರ್ಮಿಗಳು; ಸ್ಪಾದಲ್ಲಿ ಎಳೆದಾಡಿ ಹಲ್ಲೆ

Dehradun Shocker: ಸ್ಪಾ ಒಂದರಲ್ಲಿ ಗರ್ಣಿಣಿ ಮೇಲೆ ಮೆಣಸಿನ ಪುಡಿ ಎರಚಿ ಹಲ್ಲೆ ನಡೆಸಿ ಜೀವ ಬೆದರಿಕೆಯನ್ನೂ ಹಾಕಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಡೆಹ್ರಾಡೂನ್‌ನ ಖುರ್ಬುರಾದ ನಿವಾಸಿಯಾದ ಸೈಮಾ ಎಂದು ಗುರುತಿಸಲಾಗಿದೆ. ಅವರು ಮೂವರ ಮೇಲೆ ದೂರು ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಡೆಹ್ರಾಡೂನ್‌, ನ. 21: ಉತ್ತರಾಖಂಡದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಸ್ಪಾ ಒಂದರಲ್ಲಿ ಗರ್ಣಿಣಿ ಮೇಲೆ ಮೆಣಸಿನ ಪುಡಿ ಎರಚಿ ಹಲ್ಲೆ ನಡೆಸಲಾಗಿದೆ. ಜತೆಗೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ (Dehradun Shocker). ''ಡೆಹ್ರಾಡೂನ್‌ ಸ್ಪಾ ಸೆಂಟರ್‌ಗೆ 3 ತಿಂಗಳ ಗರ್ಭಿಣಿ ಪತಿಯನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿ, ಮೆಣಸಿನ ಪುಡಿಯನ್ನು ಎರಚಿ, ಕೊಲೆ ಬೆದರಿಕೆ ಹಾಕಲಾಗಿದೆ'' ಎಂದು ಶನಿವಾರ (ನವೆಂಬರ್‌ 21) ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಡೆಹ್ರಾಡೂನ್‌ನ ಖುರ್ಬುರಾದ ನಿವಾಸಿಯಾದ ಸೈಮಾ ಎಂದು ಗುರುತಿಸಲಾಗಿದೆ.

ಸೈಮಾ ಶುಕ್ರವಾರ ಸಂಜೆ ಪಟೇಲ್ ನಗರ ಪೊಲೀಸ್ ಠಾಣೆಯಲ್ಲಿ ನೇಹಾ ಎಂಬ ಮಹಿಳೆ ಹಾಗೂ ಗುರುತು ತಿಳಿಯದ ಇಬ್ಬರ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಪಟೇಲ್‌ ನಗರ ಸ್ಟೇಷನ್‌ ಹೌಸ್‌ ಆಫೀಸರ್‌ ನರೇಶ್‌ ರಾಥೋಡ್‌ ಮಾತನಾಡಿ, ʼʼಸೈಮಾ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ವಿವರವಾದ ತನಿಖೆ ನಡೆಸಲಾಗುತ್ತಿದೆʼʼ ಎಂದು ಹೇಳಿದ್ದಾರೆ. ನವೆಂಬರ್‌ 19ರಂದು ಹಲ್ಲೆ ನಡೆದಿದೆ ಎಂದು ಸೈಮಾ ತಿಳಿಸಿದ್ದಾರೆ.

ಗರ್ಭಿಣಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಹೆರಿಗೆಯಾದ ಕೂಡಲೇ ಮಗು ಸಾವು

ಘಟನೆ ವಿವರ

ʼʼಪತಿಯನ್ನು ಹುಡುಕಿಕೊಂಡು ನವೆಂಬರ್‌ 19ರ ಮಧ್ಯಾಹ್ನ ಸುಮಾರು 1 ಗಂಟೆಗೆ ನಿರಂಜನಪುರ ಮಂಡಿಯಲ್ಲಿರುವ ಅಮೆಂಜ್‌ ಸ್ಪಾ ಸೆಂಟರ್‌ಗೆ ತೆರಳಿದ್ದೆ. ಆದರೆ ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಲು ನೀರಾಕರಿಸಿದರು. ಹೀಗಾಗಿ ಹಿಂದಿರುಗಲು ಮುಂದಾದೆ. ಈ ವೇಳೆ ಹಲ್ಲೆ ನಡೆದಿದೆʼʼ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ

"ನಾನು ಹೊರಡುತ್ತಿದ್ದಾಗ ಪಾರ್ಕಿಂಗ್ ಗೇಟ್ ಬಳಿ ಕಪ್ಪು ಬಣ್ಣದ ಕಾರೊಂದು ಬಂದು ನಿಂತಿತು. ಅದರಿಂದ ಇಬ್ಬರು ವ್ಯಕ್ತಿಗಳು ಮತ್ತು ಓರ್ವ ಮಹಿಳೆ ಹೊರಬಂದು, ನನ್ನನ್ನು ನಿಂದಿಸಿ ಹಲ್ಲೆ ನಡೆಸಿದರು. ನಂತರ ನನ್ನ ಕಣ್ಣುಗಳಿಗೆ ಮೆಣಸಿನ ಪುಡಿಯನ್ನು ಎರಚಿದರು. ಬಳಿಕ ಅವರು ನನ್ನನ್ನು ಬಲವಂತವಾಗಿ ಮೇಲಿನ ಮಹಡಿಯಲ್ಲಿದ್ದ ಸ್ಪಾ ಸೆಂಟರ್‌ಗೆ ಎಳೆದುಕೊಂಡು ಹೋಗಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು" ಎಂದು ಸೈಮಾ ವಿವರಿಸಿದ್ದಾರೆ.

ಪ್ರಜ್ಞೆ ತಪ್ಪಿದ ಗರ್ಭಿಣಿಯನ್ನು 275 ಕಿಲೋ ಮೀಟರ್‌ ದೂರ ಕರೆದೊಯ್ದು ಜೀವಂತವಾಗಿ ಸುಟ್ಟ ಪಾಪಿಗಳು

ಸ್ಪಾಗೆ ಸೇರಿದ ಇಬ್ಬರು ಪುರುಷರು ಮತ್ತುಓರ್ವ ಮಹಿಳೆ ಈ ಹಲ್ಲೆಯಲ್ಲಿ ಭಾಗಿಯಾಗಿದ್ದರು ಎಂದು ಅವರು ಹೇಳಿದ್ದಾರೆ. "ತಕ್ಷಣವೇ ಪೊಲೀಸ್ ಠಾಣೆಗೆ ಹೋಗುವ ಸ್ಥಿತಿಯಲ್ಲಿ ನಾನಿರಲಿಲ್ಲ. ನನಗೆ ತುಂಬಾ ಭಯವಾಗಿದ್ದರಿಂದ, ನಡೆದ ಘಟನೆಯ ಬಗ್ಗೆ ನನ್ನ ಪತಿಯ ಬಳಿ ಹೇಳಿದೆ. ಅವರು ನನ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು" ಎಂದು ತಿಳಿಸಿದ್ದಾರೆ. ಸೈಮಾ ಅವರಿಂದ ದೂರು ಸ್ವೀಕರಿಸಿದ ನಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಯಾಕಾಗಿ ಈ ಹಲ್ಲೆ ನಡೆದಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಮಹಿಳೆಯ ಪತಿ ಆ ಸ್ಪಾದಲ್ಲೇ ಕೆಲಸ ನಿರ್ವಹಿಸುತ್ತಿದ್ದರೆ ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author