ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Self Harming: ಹೆಂಡತಿ ಇದ್ದರೂ ತಂಗಿಯ ಸಂಗ ಬೆಳೆಸಿದ ಅಣ್ಣ, ಸಂಬಂಧ ದುರಂತದಲ್ಲಿ ಕೊನೆ

ರಾಮಲಕ್ಷ್ಮಿ ಹಾಗೂ ಕೃಷ್ಣ ಸಂಬಂಧದಲ್ಲಿ ಅಣ್ಣ ತಂಗಿ ಆಗಿದ್ದಾರೆ. ಆದರೆ ಇವರಿಬ್ಬರೂ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಗಂಡ ಹೆಂಡತಿ ಅಂತ ಹೇಳಿಕೊಂಡು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ನಿನ್ನೆ ಮನೆಯಲ್ಲಿ ರಾಮಲಕ್ಷ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವ ಪತ್ತೆಯಾಗಿದೆ.

ಕೃಷ್ಣ, ಮೃತ ರಾಮಲಕ್ಷ್ಮಿ

ಚಿಕ್ಕಬಳ್ಳಾಪುರ, ಜ.08: ಅವರಿಬ್ಬರು ಪರಸ್ಪರ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಅವನಿಗೆ 30 ವರ್ಷ, ಅವಳಿಗೆ 21 ವರ್ಷ ವಯಸ್ಸು. ಅವನಿಗೆ ಮದುವೆಯಾಗಿ ಮಗುವೂ ಇದೆ. ಅವರಿಬ್ಬರೂ ಸಂಬಂಧದಲ್ಲಿ ಅಣ್ಣ- ತಂಗಿ ಆಗಿದ್ದರೂ ಪರಸ್ಪರ ಪ್ರೀತಿಸಿ ಅಕ್ರಮ ಸಂಬಂಧ (illicit relationship) ಹೊಂದಿದ್ದರು. ಇದನ್ನು ಕಂಡ ಬಂಧು ಬಳಗದವರು ಬೈದು ಬುದ್ದಿ ಹೇಳಿದರೂ ಕೇಳದೆ ಲಿವ್‌ ಇನ್‌ ರಿಲೇಷನ್ ಶಿಪ್‌ನಲ್ಲಿ ಇದ್ದರು. ಇದೀಗ ಯುವತಿ ಶವವಾಗಿ (Self harming) ಪತ್ತೆಯಾಗಿದ್ದು, ಭಯದಿಂದ ಯುವಕ ಪರಾರಿಯಾಗಿದ್ದಾನೆ. ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.

ಆಕೆ ಹೆಸರು ರಾಮಲಕ್ಷ್ಮಿ (21), ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ತಂದೆ ಹೆಸರು ಆಂಜನಪ್ಪ, ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿ. ಯುವಕನ ಹೆಸರು ಕೃಷ್ಣ (30), ತಂದೆ ಹೆಸರು ರವಣಪ್ಪ. ಇಬ್ಬರದ್ದೂ ಒಂದೇ ಊರು, ಒಂದೇ ಮನೆ. ರಾಮಲಕ್ಷ್ಮಿ ತಂದೆ ಆಂಜನಪ್ಪ ಹಾಗೂ ಕೃಷ್ಣನ ತಂದೆ ರವಣಪ್ಪ ಇಬ್ಬರೂ ಒಂದೇ ತಾಯಿ ಮಕ್ಕಳು, ಅಣ್ಣ-ತಮ್ಮ. ರಾಮಲಕ್ಷ್ಮಿ ಹಾಗೂ ಕೃಷ್ಣ ಸಂಬಂಧದಲ್ಲಿ ಅಣ್ಣ ತಂಗಿ ಆಗಿದ್ದಾರೆ. ಆದರೆ ಇವರಿಬ್ಬರೂ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಗಂಡ ಹೆಂಡತಿ ಅಂತ ಹೇಳಿಕೊಂಡು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ನಿನ್ನೆ ಮನೆಯಲ್ಲಿ ರಾಮಲಕ್ಷ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವ ಪತ್ತೆಯಾಗಿದೆ.

ರಾಮಲಕ್ಷ್ಮಿ ಹಾಗೂ ಕೃಷ್ಣ ಕಳೆದ 3 ವರ್ಷಗಳಿಂದ ದೈಹಿಕ ಸಂಬಂಧದಲ್ಲಿ ತೊಡಗಿದ್ದರು. ಎರಡೂ ಕುಟುಂಬಗಳು ಹಾಗೂ ಬಂಧು ಬಳಗ, ಇದು ಸಲ್ಲದು ಎಂದು ಇಬ್ಬರಿಗೂ ಬೈದು ಬುದ್ಧಿವಾದ ಹೇಳಿದ್ದರು. ಕೊನೆಗೆ ರಾಮಕೃಷ್ಣಪುರದಲ್ಲಿ ಒಂದು ಕುಟುಂಬ, ಬಾಗೇಪಲ್ಲಿ ಪಟ್ಟಣದಲ್ಲಿ ಒಂದು ಕುಟುಂಬವಾಗಿ ಪ್ರತ್ಯೇಕವಾಗಿ ನೆಲೆಸಿದ್ದರು. ಮತ್ತೊಂದೆಡೆ ಕೃಷ್ಣನಿಗೆ ಬೇರೆ ಹುಡುಗಿಯೊಬ್ಬಳ ಜೊತೆ ಮದುವೆ ಮಾಡಿದರು. ಅವರಿಗೊಬ್ಬ ಮಗನೂ ಇದ್ದ. ಆದರೂ ಕೃಷ್ಣ ತನ್ನ ತಂಗಿ ರಾಮಲಕ್ಷ್ಮಿಯನ್ನು ಬಿಡದೇ ಅವಳ ತಲೆ ಕೆಡಿಸಿ ಪ್ರತ್ಯೇಕ ಮನೆ ಮಾಡಿ ಕಳ್ಳ ಸಂಸಾರ ಮಾಡುತ್ತಿದ್ದ. ಇದೀಗ ರಾಮಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದು, ಅವಳ ಸಾವಿಗೆ ಕೃಷ್ಣನೇ ಕಾರಣ ಎಂದು ಮೃತಳ ಅಕ್ಕ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅಣ್ಣ ಕೃಷ್ಣ, ಇದೀಗ ಪೊಲೀಸರ ಭಯದಿಂದ ನಾಪತ್ತೆಯಾಗಿದ್ದಾನೆ. ಪೆರೇಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Self Harming: ಇನ್ನೊಬ್ಬ ಪೇದೆಯಿಂದ ಕಿರುಕುಳ, ಪೊಲೀಸ್‌ ಪೇದೆ ಆತ್ಮಹತ್ಯೆ

ಹರೀಶ್‌ ಕೇರ

View all posts by this author