ಶಿವಮೊಗ್ಗ : ಮಕ್ಕಳ ಜಗಳವನ್ನು ಬಿಡಿಸಲು ಹೋಗಿ ಅಂಗನವಾಡಿ (Anganavadi) ಸಹಾಯಕಿ ಒಬ್ಬಳು ಬೆಂಕಿಯಲ್ಲಿ ಕಾಸಿದ ಚಾಕುವಿನಿಂದ ಮಗುವಿನ ಗಲ್ಲಕ್ಕೆ ಬರೆ (Assault) ಎಳೆದಿದ್ದಾಳೆ. ಹೌದು, ಇಂಥದೊಂದು ಬರ್ಬರ ಕೃತ್ಯ ಶಿವಮೊಗ್ಗ (Shivamogga news) ಜಿಲ್ಲೆ ಸೊರಬ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಮಗು ಯೋಧ ಮೂರ್ತಿ, ಬರೆಗೆ ತುತ್ತಾದ ಮಗು.
ಚಿಕ್ಕಸವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 10 ಮಕ್ಕಳಿದ್ದಾರೆ. ಗುರುವಾರ ಬೆಳಗ್ಗೆ ಎಂದಿನಂತೆ ಮಕ್ಕಳು ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಜಗಳವಾಡಿದ್ದಾರೆ. ಯೋಧಮೂರ್ತಿ ಇನ್ನೊಬ್ಬ ಮಗುವಿಗೆ ಕಚ್ಚಿದ್ದಾನೆ. ಪರಸ್ಪರ ಜಗಳವಾಡುತ್ತಿದ್ದ ಮಕ್ಕಳನ್ನು ಬಿಡಿಸಲು ಬಂದ ಅಂಗನವಾಡಿ ಸಹಾಯಕಿ ಹೇಮಮ್ಮ ಎಂಬಾಕೆ ಚಾಕುವನ್ನು ಬೆಂಕಿಯಲ್ಲಿ ಕಾಸಿ ಯೋಧಮೂರ್ತಿಯ ಗಲ್ಲಕ್ಕೆ ಬರೆ ಎಳೆದಿದ್ದಾಳೆ. ಬಿಸಿಯ ಉರಿಯಿಂದ ಅಳತೊಡಗಿದ ಮಗು ಅಸ್ವಸ್ಥಗೊಂಡಿದ್ದು, ಸೊರಬ ಸಾರ್ವಜನಿಕ ಆಸತ್ರೆಗೆ ದಾಖಲಿಸಲಾಗಿದೆ. ಮಗುವಿನ ಪೋಷಕರು ನೀಡಿದ ದೂರಿನನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಹೇಮಮ್ಮ ವಿರುದ್ಧ ದೂರು ದಾಖಲಾಗಿದೆ.
ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಫರಿದಾಬಾದ್: ಬಾಲಕಿಯೊಬ್ಬಳನ್ನು ಒತ್ತಯಾಳಾಗಿ ಇರಿಸಿಕೊಂಡು ಆಕೆಯ ಮೇಲೆ ನಾಲ್ಕು ಮಂದಿ ಸಾಮೂಹಿಕವಾಗಿ ಅತ್ಯಾಚಾರ (Physical abuse) ನಡೆಸಿರುವ ಘಟನೆ ಕಳೆದ ಭಾನುವಾರ ಫರಿದಾಬಾದ್‌ನಲ್ಲಿ (Faridabad) ನಡೆದಿದೆ. ವಾಹನದಲ್ಲಿ ಬಂದ 4 ಮಂದಿ ಅಕ್ಟೋಬರ್ 26ರಂದು ಸಂಜೆ 8ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾರೆ. ಬಳಿಕ ಒಂದು ದಿನ ಒತ್ತೆಯಾಳಾಗಿ (kidnap case) ಇರಿಸಿಕೊಂಡ ಅವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ (crime news) ನಡೆಸಿ ಮರುದಿನ ಬೆಳಗ್ಗೆ ಆಕೆಯನ್ನು ಮನೆಯ ಬಳಿ ಬಿಟ್ಟು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಫರಿದಾಬಾದ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇದನ್ನೂ ಓದಿ: Assault Case: ಚಿಕ್ಕಮಗಳೂರಿನಲ್ಲಿ ಅಮಾನವೀಯ ಘಟನೆ, ಶಿಕ್ಷಕಿಯ ನಗ್ನಗೊಳಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ
8ನೇ ತರಗತಿಯ 15 ವರ್ಷದ ಬಾಲಕಿಯನ್ನು ನಾಲ್ವರು ತಮ್ಮ ಕಾರಿನಲ್ಲಿ ಬಂದು ಅಪಹರಿಸಿಕೊಂಡು ಹೋಗಿದ್ದಾರೆ. ಅಕ್ಟೋಬರ್ 26ರಂದು ಸಂಜೆ 7 ಗಂಟೆ ಸುಮಾರಿಗೆ ಬಂದ ಆರೋಪಿಗಳು ಅಕ್ಟೋಬರ್ 27ರಂದು ಬೆಳಗ್ಗೆ 4 ಗಂಟೆಯವರೆಗೆ ಒತ್ತೆಯಾಳಾಗಿರಿಸಿಕೊಂಡು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಆರೋಪಿಗಳು ಆಕೆಯನ್ನು ಆಕೆಯ ಮನೆಯ ಬಳಿ ಬಿಟ್ಟು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ.
ಈ ಕುರಿತು ಬಾಲಕಿಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾಳೆ. ತನ್ನ ತಂಗಿ ಅಕ್ಟೋಬರ್ 26ರಂದು ಸಂಜೆ 7 ಗಂಟೆ ಸುಮಾರಿಗೆ ಸೆಕ್ಟರ್ 18 ಮಾರುಕಟ್ಟೆಗೆ ಹೋಗಿದ್ದಳು. ಆಕೆ ಹಿಂತಿರುಗದಿದ್ದಾಗ ಮನೆಯವರೆಲ್ಲ ಹುಡುಕಾಡಿದ್ದಾರೆ. ಆದರೂ ಆಕೆ ಸಿಗಲಿಲ್ಲ. ಮರುದಿನ ಬೆಳಗ್ಗೆ 4.30 ರ ಸುಮಾರಿಗೆ ಮನೆಗೆ ಬಂದಿದ್ದು, ಹಿಂದಿನ ಸಂಜೆ ಕಾರಿನಲ್ಲಿ ನಾಲ್ವರು ಯುವಕರು ಅವಳನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದಾಳೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮಾದಕ ದ್ರವ್ಯ ನೀಡಿ ಅತ್ಯಾಚಾರ ನಡೆಸಿರುವುದಾಗಿ ತಿಳಿಸಿದ್ದಾಳೆ ಎಂದು ಬಾಲಕಿಯ ಸಹೋದರಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಮಂಗಳವಾರ ಫರಿದಾಬಾದ್ ಹಳೆಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ನಾಲ್ವರು ಅಪರಿಚಿತ ಯುವಕರ ವಿರುದ್ಧ ಕೇಸು ದಾಖಲಿಸಲಾಗಿದೆ.