ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honeymoon Murder Case: ತಾನೇ ಹತ್ಯೆ ಮಾಡಿದ್ದ ರಾಜಾ ರಘುವಂಶಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸೋನಂ ಲವರ್‌! ವಿಡಿಯೊ ವೈರಲ್‌

ಇಂದೋರ್‌ ಮೂಲದ ದಂಪತಿ ಹನಿಮೂನ್‌ಗಾಗಿ ಮೇಘಾಲಯಕ್ಕೆ ಹೋಗಿ ಕಾಣೆಯಾಗಿದ್ದ ಪ್ರಕರಣದಲ್ಲಿ ಬಗೆದಷ್ಟು ಆಘಾತಕಾರಿ ಸಂಗತಿಗಳು ಹೊರ ಬೀಳುತ್ತಿವೆ. ಹಂತಕಿ ಸೋನಂ ಪ್ರಿಯಕರ ರಾಜ್‌ ಕುಶ್ವಾಹಾ, ಹತ್ಯೆಗೀಡಾದ ರಾಜಾ ರಘುವಂಶಿಯ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಿದ್ದ. ಅಲ್ಲದೇ ಆತನ ರಾಜಾ ರಘುವಂಶಿಯ ತಂದೆಯನ್ನು ಸಂತೈಸುತ್ತಿರುವ ವಿಡಿಯೊ ಭಾರೀ ವೈರಲ್‌ ಆಗುತ್ತಿದೆ.

ಶಿಲ್ಲಾಂಗ್‌: ಮೇಘಾಲಯದಲ್ಲಿ ಕಾಣೆಯಾಗಿದ್ದಇಂದೋರ್‌ ಮೂಲದ ದಂಪತಿಯ ಪ್ರಕರಣ(Indore couple missing) ದಿನಕ್ಕೊಂದು ರೂಪ ಪಡೆಯುತ್ತಿದೆ. ಪತಿ ರಾಜ ರಘುವಂಶಿಯನ್ನು ಸ್ವತಃ ಸೋನಂ ಹತ್ಯೆ ಮಾಡಿಸಲು ಸಂಚು ರೂಪಿಸಿದ್ದಳು ಎನ್ನುವ ರಹಸ್ಯ ಹೊರಬಿದ್ದ ಬೆನ್ನಲ್ಲೇ ಇದೀಗ ಪ್ರಕರಣಕ್ಕೆ ಸಂಬಂಧಸಿದ ಮತ್ತೊಂದು ವಿಡಿಯೊವೊಂದು ಭಾರೀ ವೈರಲ್‌ ಆಗುತ್ತಿದೆ. ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಸೋನಂಳ ಪ್ರಿಯಕರ ಮಧ್ಯಪ್ರದೇಶದ ರಾಜ ಕುಶ್ವಾಹಾ, ರಾಜಾ ರಘುವಂಶಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ವಿಡಿಯೊ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ವಿಷಯದ ಕುರಿತು ರಘುವಂಶಿಯ ತಾಯಿ ಮತ್ತು ಸಹೋದರಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ರಾಜ ರಘುವಂಶಿಯ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ರಾಜಾ ಅವರ ಮೃತದೇಹ ಮನೆಗೆ ಬಂದಾಗ ರಾಜ ಕುಶ್ವಾಹಾ ಅವರು ತಂದೆಯನ್ನೂ ಸಮಾಧಾನಪಡಿಸುತ್ತಿದ್ದ ಎಂದು ತಿಳಿಸಿದ್ದಾರೆ. ತಾಯಿ ಉಮಾ ರಘುವಂಶಿಯವರೂ ಕೂಡ ತಮ್ಮ ಮಗನ ಅಂತ್ಯಕ್ರಿಯೆಯಲ್ಲಿ ಈತನನ್ನು ನೋಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.



ರಾಜಾ ರಘುವಂಶಿಯ ಕುಟುಂಬದವರನ್ನು ಅಂತ್ಯಕ್ರಿಯೆಗೆ ಕರೆದೊಯ್ಯಲು ಬಳಸಲಾಗಿದ್ದ ಕಾರು ಚಾಲಕನಾಗಿ ಈತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇನ್ನು ಈ ಕುರಿತು ಪ್ರತ್ಯಕ್ಷದರ್ಶಿ ಲಕ್ಷ್ಮಣ್ ಸಿಂಗ್ ರಾಠೋರ್ ಮಾಹಿತಿ ಹಂಚಿಕೊಂಡಿದ್ದು, "ಆ ಕಾರಿನಲ್ಲಿ ನಾನೂ ಇದ್ದೆ, ಆದರೆ ನಾನು ಆತನ ಬಳಿ ಮಾತನಾಡಿಲ್ಲ. ನಂತರ ಮಾಧ್ಯಮದಲ್ಲಿ ಕುಶ್ವಾಹಾ ಬಂಧಿತನಾಗಿರುವ ಸುದ್ದಿ ಮತ್ತು ಫೋಟೋ ನೋಡಿ ನನಗೆ ನೆನಪಾಯಿತು" ಎಂದು ಅವರು ತಿಳಿಸಿದ್ದಾರೆ. ಈ ಹತ್ಯೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ರಾಜಾ ರಘುವಂಶಿಯ ಪತ್ನಿ ಸೋನಂ ಸೇರಿದಂತೆ ಆಕೆಯ ಸಹಚರರಾದ ಆಕಾಶ್ ರಾಜ್ಪುತ್ (19), ವಿಶಾಲ್ ಸಿಂಗ್ ಚೌಹಾನ್ (22), ರಾಜ್ ಸಿಂಗ್ ಕುಶ್ವಾಹಾ (21)ರನ್ನು ಮೇಘಾಲಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: UP Couple missing: ಇಂದೋರ್‌ ಕೇಸ್‌ ಬೆನ್ನಲ್ಲೇ ಹನಿಮೂನ್‌ಗೆ ಹೋಗಿದ್ದ ಮತ್ತೊಂದು ಜೋಡಿ ಮಿಸ್ಸಿಂಗ್‌! ಏನಿದು ಘಟನೆ?

ಘಟನೆಯ ಹಿನ್ನೆಲೆ

ಮೇ 11ರಂದು ಇಂದೋರ್‌ನಲ್ಲಿ ವಿವಾಹವಾದ ರಾಜಾ ರಘುವಂಶಿ ಮತ್ತು ಸೋನಂ ಅವರು ಮೇ 23ರಂದು ಹನಿಮೂನ್‌ಗೆ ಮೇಘಾಲಯಕ್ಕೆ ಹೋಗಿದ್ದರು. ನಂತರ ಕಾಣೆಯಾಗಿದ್ದ ಈ ಜೋಡಿಯನ್ನು ಹುಡುಕಲು ಪೋಲಿಸರು ಕಾರ್ಯಚರಣೆ ನಡೆಸಿದ್ದರು. ಜೂನ್ 2ರಂದು ರಾಜಾ ರಘುವಂಶಿಯ ಶವವನ್ನು ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ವೈಸಾಡಾಂಗ್ ಜಲಪಾತದ ಸಮೀಪ ಪತ್ತೆಯಾಗಿತ್ತು. ಈಸ್ಟ್ ಖಾಸಿ ಹಿಲ್ಸ್ ಎಸ್‌ಪಿ ವಿವೇಕ್ ಸೈಯಂ ತಿಳಿಸಿರುವಂತೆ, ಮೊದಲ ಆರೋಪಿ ಆಕಾಶ್ ರಾಜ್ಪುತ್ ಅನ್ನು ಉತ್ತರ ಪ್ರದೇಶದ ಲಲಿತ್ಪುರದಲ್ಲಿ ಬಂಧಿಸಲಾಗಿದೆ. ಎರಡನೇ ಆರೋಪಿ ಚೌಹಾನ್ ಮತ್ತು ಮೂರನೇ ಆರೋಪಿ ಕುಶ್ವಾಹಾ ಇಬ್ಬರೂ ಇಂದೋರ್‌ ಮೂಲದವರು ಎನ್ನಲಾಗಿದೆ. ನಂತರ ಹಂತಕಿ ಸೋನಂ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ನಂದಗಂಜ್ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.