ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಮುಕನಿಗೆ ತಕ್ಕ ಶಿಕ್ಷೆ; ಅತ್ಯಾಚಾರ ಎಸಗಲು ಬಂದ ವ್ಯಕ್ತಿಯ ಖಾಸಗಿ ಅಂಗವನ್ನೇ ಕತ್ತರಿಸಿದ ಮಹಿಳೆ

Crime News: ಜೂ. 11ರ ರಾತ್ರಿ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಎಗಿದ ವ್ಯಕ್ತಿಯ ಖಾಸಗಿ ಅಂಗವನ್ನು ಮಹಿಳೆಯೊಬ್ಬರು ಕತ್ತರಿಸಿ ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ. ಸದ್ಯ ಗಂಭೀರ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಪಾಟ್ನಾ: ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ, ಅತ್ಯಾಚಾರ ಎಸಗುವ ದುರುಳರು ಕನಸಿನಲ್ಲಿಯೂ ಬೆಚ್ಚಿ ಬೀಳುವ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಒಬ್ಬಂಟಿಯಾಗಿದ್ದ ಮಹಿಳೆ ಮೇಲೆ ಕಾಮಾಂಧನಾಗಿ ಎರಗಿದ ವ್ಯಕ್ತಿಯೊಬ್ಬ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸುತ್ತಿದ್ದಾನೆ. ಹೌದು, ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಖಾಸಗಿ ಅಂಗವನ್ನು ಮಹಿಳೆ ಹರಿತವಾದ ಚಾಕುವಿನಿಂದ ಕತ್ತರಿಸಿ ಹಾಕಿದ್ದಾಳೆ. ಆ ಮೂಲಕ ಅತನಿಗೆ ತಕ್ಕ ಪಾಠ ಕಲಿಸಿದ್ದಾಳೆ. ಗಂಭೀರ ಗಾಯಗೊಂಡಿರುವ ಆ ವ್ಯಕ್ತಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ (Crime News). ಬಿಹಾರದ ಮುಜಫರ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಜೂ. 11ರ ರಾತ್ರಿ ಪಾರು ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯ ಗ್ರಾಮವೊಂದರ ಒಬ್ಬಂಟಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಎಗಿದ ವ್ಯಕ್ತಿ ಇದೀಗ ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿ ಮಾಡಿದ ಕೃತ್ಯಕ್ಕೆ ಪ್ರಾಯಶ್ಚಿತ ಪಡುತ್ತಿದ್ದಾನೆ.

ಈ ಸುದ್ದಿಯನ್ನೂ ಓದಿ: Physical assault: ರಾಜ್ಯವನ್ನೇ ಬೆಚ್ಚಿ ಬೀಳಿಸೋ ಘಟನೆ; ಬಾಲಕಿ ಮೇಲೆ ಗ್ಯಾಂಗ್‌ರೇಪ್‌

ಘಟನೆ ವಿವರ

ಪಾರು ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಮಹಿಳೆ ಆ ವ್ಯಕ್ತಿಯ ಬಳಿಯಿಂದ ಸಾಲ ಪಡೆದುಕೊಂಡಿದ್ದಳು. ಆ ದಿನ ಹಣ ಹಿಂದಿರುಗಿಸುವುದಾಗಿ ತಿಳಿಸಿ ಮನೆಗೆ ಕರೆದಿದ್ದಳು. ಆತ ಆಗಮಿಸುವ ವೇಳೆ ಆಕೆಯೊಬ್ಬಳೇ ಮನೆಯಲ್ಲಿದ್ದಳು.

ಇದನ್ನು ಅರಿತ ಆತ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದ. ಈ ವೇಳೆ ಆಕೆ ಸ್ವಯಂ ರಕ್ಷಣೆಗಾಗಿ ಸಾಕಷ್ಟು ಹೋರಾಟ ನಡೆಸಿದ್ದಳು. ಆತ ಇದಕ್ಕೆಲ್ಲ ಜಗ್ಗದಿದ್ದಾಗ ಹರಿತವಾದ ಚಾಕು ತೆಗೆದು ಆತನ ಖಾಸಗಿ ಅಂಗವನ್ನೇ ಕತ್ತರಿಸಿ ಹಾಕಿದ್ದಳು. ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ.

ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಆ ವ್ಯಕ್ತಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಚಿಕಿತ್ಸೆ ಮುಂದುವರಿಸಿದೆ. ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಆ ವ್ಯಕ್ತಿ ಹೇಳಿದ್ದೇನು?

ಗಾಯಗೊಂಡಿರುವ ವ್ಯಕ್ತಿಯನ್ನು ರಾಜ ಠಾಕೂರ್‌ ಎಂದು ಗುರುತಿಸಲಾಗಿದೆ. ಆತ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ʼʼಬಾಕಿ ಇರುವ ಹಣ ಪಡೆದುಕೊಳ್ಳಲು ಆಕೆಯ ಮನೆಗೆ ತೆರಳಿದ್ದೆ. ಈ ವೇಳೆ ಇದ್ದಕ್ಕಿದ್ದಂತೆ ಆಕೆ ದಾಳಿ ನಡೆಸಿದ್ದಾಳೆ. ಹಣ ಹಿಂದಿರುಗಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಆಕೆ ಸುಳ್ಳು ಆರೋಪ ಹೊರಿಸುತ್ತಿದ್ದಾಳೆʼʼ ಎಂದಿದ್ದಾನೆ.

ಪೊಲೀಸರು ಹೇಳಿದ್ದೇನು?

ರೂರಲ್‌ ಎಸ್‌ಪಿ ವಿದ್ಯಾಸಾಗರ್ ಮಾತನಾಡಿ, ʼʼವ್ಯಕ್ತಿಯೊಬ್ಬನ ಮೇಲೆ ಮಹಿಳೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಆದರೆ ಯಾವುದೇ ದೂರು ದಾಖಲಾಗಿಲ್ಲ. ದೂರು ಬಂದರೆ ತನಿಖೆ ನಡೆಸಲಾಗುವುದುʼʼ ಎಂದು ತಿಳಿಸಿದ್ದಾರೆ. ಅದೇನೆ ಇರಲಿ ಒಟ್ಟಿನಲ್ಲಿ ಈ ಘಟನೆ ಭಾರಿ ಸದ್ದು ಮಾಡುತ್ತಿದ್ದು, ಮತ್ತೊಮ್ಮೆ ಮಹಿಳೆಯರ ಸುರಕ್ಷತೆ ಬಗೆ ಚರ್ಚೆ ಹುಟ್ಟು ಹಾಕಿದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಘಟನೆ ಅಂತಹವರಿಗೊಂದು ಎಚ್ಚರಿಕೆಯ ಗಂಟೆಯಾಗಲಿ ಎನ್ನುವುದು ನೆಟ್ಟಿಗರ ಆಶಯ. ಇನ್ನು ಮುಂದೆ ಯಾರೂ ಮಹಿಳೆಯರ ತಂಟೆಗೆ ಹೋಗಬಾರದು ಎಂದು ಕೆಲವರು ಹೇಳಿದರೆ, ಆತನಿಗೆ ತಕ್ಕ ಪಾಠ ಕಲಿಸಿದ್ದಾಳೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

Ramesh Ballamoole

View all posts by this author