Tribal girls kidnapped: ದೇಶವನ್ನೇ ಬೆಚ್ಚಿ ಬೀಳಿಸೋ ಪೈಶಾಚಿಕ ಕೃತ್ಯ! ಬುಡಕಟ್ಟು ಯುವತಿಯರನ್ನು ಕಿಡ್ನಾಪ್ ಮಾಡಿ ಗ್ಯಾಂಗ್‌ರೇಪ್
physical assault: ಇಬ್ಬರು ಬುಡಕಟ್ಟು ಜನಾಂಗದ ಯುವತಿಯರನ್ನು ಕಾಡಿಗೆ ಎಳೆದೊಯ್ದು ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ಹುಡುಗಿಯರನ್ನು ಮೊದಲು ಸ್ಕಾರ್ಪಿಯೋ ವಾಹನದಲ್ಲಿ ಅಪಹರಿಸಿ ನಂತರ ಕಾಡಿನಲ್ಲಿ ನಾಲ್ವರು ಕಿರಾತಕರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

-

ರಾಂಚಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸೋ ಪೈಶಾಚಿಕ ಘಟನೆಯೊಂದು ಜಾರ್ಖಂಡ್‌ನಲ್ಲಿ ನಡೆದಿದೆ. ಇಬ್ಬರು ಬುಡಕಟ್ಟು ಜನಾಂಗದ ಯುವತಿಯರನ್ನು ಕಾಡಿಗೆ ಎಳೆದೊಯ್ದು ನಾಲ್ವರು ಸಾಮೂಹಿಕ ಅತ್ಯಾಚಾರ(Physical Abuse) ಎಸಗಿರುವ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ಹುಡುಗಿಯರನ್ನು ಮೊದಲು ಸ್ಕಾರ್ಪಿಯೋ ವಾಹನದಲ್ಲಿ ಅಪಹರಿಸಿ ನಂತರ ಕಾಡಿನಲ್ಲಿ ನಾಲ್ವರು ಕಿರಾತಕರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ದೂರಿನಲ್ಲಿ ತಿಳಿಸಿರುವ ಪ್ರಕಾರ, ನವರಾತ್ರಿಯ ಸಮಯದಲ್ಲಿ ರಾಂಕಾ ಪೊಲೀಸ್ ಠಾಣೆ ವ್ಯಾಪ್ತಿಯ ನಗರಿ ಗ್ರಾಮದಲ್ಲಿ ಸ್ಥಳೀಯ ಜಾತ್ರೆಗೆ ಭೇಟಿ ನೀಡಲು ಮೂವರು ಹುಡುಗಿಯರು ಕೆಲವು ಪರಿಚಿತ ಹುಡುಗರೊಂದಿಗೆ ಹೋಗಿದ್ದರು. ಮನೆಗೆ ಹಿಂದಿರುಗುವಾಗ, ಸ್ಕಾರ್ಪಿಯೋ ಕಾರು ಅವರ ಬಳಿ ನಿಂತಿತು. ಅದರಲ್ಲಿದ್ದ ನಾಲ್ಕು ಪುರುಷರು ಹುಡುಗಿಯರನ್ನು ಬಲವಂತವಾಗಿ ವಾಹನದೊಳಗೆ ತಳ್ಳಿ ಕಾಡಿನ ಕಡೆಗೆ ತೆರಳಿದ್ದಾರೆ. ಹುಡುಗಿಯರ ಜೊತೆಗಿದ್ದ ಹುಡುಗರು ವಿರೋಧಿಸಲು ಪ್ರಯತ್ನಿಸಿದಾಗ, ಆರೋಪಿಗಳು ಅವರನ್ನು ಥಳಿಸಿ ಓಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ: Physical Abuse: ನಟಿಗೆ ಲೈಂಗಿಕ ಕಿರುಕುಳ, ಕನ್ನಡದ ನಟ- ನಿರ್ದೇಶಕ ಹೇಮಂತ್ ಬಂಧನ
ಹುಡುಗಿಯರಲ್ಲಿ ಒಬ್ಬಳನ್ನು ಆರೋಪಿಗಳು ಬಿಟ್ಟು ಕಳಿಸಿದ್ದಾರೆ. ಆದರೆ ಉಳಿದ ಇಬ್ಬರು ಹುಡುಗಿಯರನ್ನು ಕಾಡಿನ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದರು. ಮರುದಿನ ಬೆಳಿಗ್ಗೆ ಮನೆಗೆ ಮರಳಿದ ಅವರು ತಮ್ಮ ತಮ್ಮ ಕುಟುಂಬಗಳಿಗೆ ಈ ಘಟನೆಯ ಬಗ್ಗೆ ತಿಳಿಸಿದರು. ಇದರ ನಂತರ, ಕುಟುಂಬ ಸದಸ್ಯರು ರಾಂಕಾ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.
ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಸಂತ್ರಸ್ತರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಇನ್ನೂ ಮೂವರು ಪರಾರಿಯಾಗಿದ್ದಾರೆ. ಮಂಡೀಶ್ ಯಾದವ್, ಶಂಕರ್ ಯಾದವ್, ಓಂ ಪ್ರಕಾಶ್ ಯಾದವ್ ಮತ್ತು ಇನ್ನೋರ್ವ ಅಪರಿಚಿತ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.