Murder Case: ಗಂಡನ ಜೊತೆ ಸೇರಿ ಲವ್ವರ್‌ಗೆ ಸ್ಕೆಚ್; ಪ್ರಿಯಕರನನ್ನು ಮನೆಗೆ ಕರೆಸಿ ಸ್ಕ್ರೂಡ್ರೈವರ್‌ನಿಂದ ಕೊಲೆ
ಪ್ರಿಯಕರನೊಟ್ಟಿಗೆ ಸೇರಿ ಪತಿಯನ್ನು ಕೊಂದ ಘಟನೆ ಇತ್ತೀಚೆಗೆ ಸಾಕಷ್ಟು ವರದಿಯಾಗಿದೆ. ಆದರೆ ಇಲ್ಲೊಂದು ಬೇರೆ ಘಟನೆ ನಡೆದಿದ್ದು, ಈ ಮಹಿಳೆ ಗಂಡನೊಟ್ಟಿಗೆ ಸೇರಿ ಪ್ರಿಯಕರನನ್ನೇ ಕೊಂದಿದ್ದಾಳೆ. ಕೊಲೆಯಾದ ವ್ಯಕ್ತಿಯನ್ನು ಅನೀಶ್ ಅವರನ್ನು ಕ್ರೂರವಾಗಿ ಕೊಲ್ಲಲಾಗಿದೆ ಎಂದು ಅವರ ತಂದೆ ಮುಸ್ತಾಕಿಮ್ ಹೇಳಿದ್ದಾರೆ.


ಲಖನೌ: ಪ್ರಿಯಕರನೊಟ್ಟಿಗೆ ಸೇರಿ ಪತಿಯನ್ನು ಕೊಂದ ಘಟನೆ ಇತ್ತೀಚೆಗೆ ಸಾಕಷ್ಟು ವರದಿಯಾಗಿದೆ. ಆದರೆ ಇಲ್ಲೊಂದು ಬೇರೆ ಘಟನೆ ನಡೆದಿದ್ದು, ಈ ಮಹಿಳೆ ಗಂಡನೊಟ್ಟಿಗೆ ಸೇರಿ ಪ್ರಿಯಕರನನ್ನೇ (Murder Case) ಕೊಂದಿದ್ದಾಳೆ. ಉತ್ತರ ಪ್ರದೇಶದ ( Uttar Pradesh) ಸಂಭಾಲ್‌ನಲ್ಲಿ 45 ವರ್ಷದ ವ್ಯಕ್ತಿಯನ್ನು ಸ್ಕ್ರೂಡ್ರೈವರ್ ಮತ್ತು ಪ್ಲಯರ್‌ನಂತಹ ಉಪಕರಣಗಳಿಂದ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 7 ಲಕ್ಷ ರೂ. ಸಾಲಕ್ಕಾಗಿ ಅನೀಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಕೊಲೆಯಾದ ವ್ಯಕ್ತಿಯ ಕುಟುಂಬ ಹೇಳಿದ್ದರೆ, ಪೊಲೀಸರು ಈ ಭಯಾನಕ ಅಪರಾಧಕ್ಕೆ ವಿವಾಹೇತರ ಸಂಬಂಧವೇ ಕಾರಣ ಎಂದು ಹೇಳಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಅನೀಶ್ ಅವರನ್ನು ಕ್ರೂರವಾಗಿ ಕೊಲ್ಲಲಾಗಿದೆ ಎಂದು ಅವರ ತಂದೆ ಮುಸ್ತಾಕಿಮ್ ಹೇಳಿದ್ದಾರೆ. ಆರೋಪಿಗಳು ತಮ್ಮ ಮನೆಗೆ ಕರೆಸಿ, ಕೈಕಾಲುಗಳನ್ನು ಮುರಿದು, ವಿವಸ್ತ್ರಗೊಳಿಸಿ ಕೊಂದಿದ್ದಾಗಿ ತಿಳಿದು ಬಂದಿದೆ. ಅನೀಶ್ ಮದುವೆ ಈಗಾಗಲೇ ನಿಶ್ಚಯವಾಗಿದ್ದು, ವರ್ಷಗಳ ಹಿಂದೆ ಆತ ಸಾಲವಾಗಿ ನೀಡಿದ್ದ 7 ಲಕ್ಷ ರೂ. ಕೇಳಲು ಪಕ್ಕದವರ ಮನೆಗೆ ಹೋಗಿದ್ದ ಎಂದು ಹೇಳಿದರು. "ಅವರು ನನ್ನ ಮಗನನ್ನು ಎಷ್ಟು ಕ್ರೂರವಾಗಿ ಕೊಂದರು ಎಂದರೆ ಅದನ್ನು ನಾನು ವಿವರಿಸಲು ಸಹ ಸಾಧ್ಯವಿಲ್ಲ" ಆತನ ತಂದೆ ಹೇಳಿದರು.
ಅನೀಶ್ ಅವರ ನೆರೆಮನೆಯವರಾದ ರಯೀಸ್ ಅಹ್ಮದ್ ಮತ್ತು ಅವರ ಪತ್ನಿ ಸಿತಾರ ಅನೀಶ್‌ನನ್ನು ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. ಅನೀಶ್, ಸಿತಾರ ಜೊತೆ ಸಂಬಂಧ ಹೊಂದಿದ್ದರು ಎಂದು ನಮಗೆ ತಿಳಿದುಬಂದಿದೆ. ರಯೀಸ್ ಮತ್ತು ಸಿತಾರ ಅನೀಶ್ ಅವರ ಕೊಲೆಗೆ ಸಂಚು ರೂಪಿಸಿ, ಅವರನ್ನು ಆಹ್ವಾನಿಸಿ ನಂತರ ಕೊಂದರು" ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ
ತೆಲಂಗಾಣದಲ್ಲಿ ಮಹಿಳೆಯೊಬ್ಬಳು ಗಂಡನನ್ನು ಯೂಟ್ಯೂಬ್ ವೀಡಿಯೋ ನೋಡಿ ಕೊಲೆ ಮಾಡಿದ್ದು, ಈ ಕೊಲೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ. ಅನೈತಿಕ ಸಂಬಂಧದ ಕಾರಣಕ್ಕೆ ಈ ಕೊಲೆ ನಡೆದಿದೆ. ಸಂಪತ್ ಕೊಲೆಯಾದ ಪತಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಂಪತ್ ಪತ್ನಿ ರಮಾದೇವಿ ಹಾಗೂ ಆಕೆಯ ಲವರ್ ರಾಜಯ್ಯ ಹಾಗೂ ಆತನ ಗೆಳೆಯ ಶ್ರೀನಿವಾಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ್ದ ವ್ಯಕ್ತಿ ಕುಡಿತದ ಚಟಕ್ಕೆ ದಾಸನಾಗಿದ್ದ ಎಂದು ತಿಳಿದು ಬಂದಿದೆ.