ಪರಿಶಿಷ್ಟ ಪಂಗಡ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ನಿಲ್ಲಲಿ : ಹಳ್ಳಿ ಮಕ್ಕಳ ಸಂಘದ ವೆಂಕಟರಮಣಪ್ಪ ಆಗ್ರಹ
ರಾಜ್ಯ ಮತ್ತು ಕೇಂದ್ರದಲ್ಲಿ ದಲಿತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ ಅತ್ಯಾಚಾರ ಮಾಡುತ್ತಿರು ವುದು ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿರುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಂದರೆ ಮಾದಿಗ ಜನಾಂಗಕ್ಕೆ ಬರುವ ಮೀಸಲಾತಿ ಜಾರಿಗೆ ಆಗ್ರಹಿಸಿ ಒಂದು ವರ್ಷದಿಂದ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರಕಾರ ಕಿವಿ ಕೇಳಿಸದಂತೆ ಮತ್ತು ಕಣ್ಣು ಕಾಣದಂತೆ ಅಂಧರಂತೆ ವರ್ತಿಸುತ್ತಿರು ವುದು ತುಂಬಾ ನೋವನ್ನು ಉಂಟು ಮಾಡಿದೆ

ಸುದ್ದಿಗೋಷ್ಟಿಯಲ್ಲಿ ವೆಂಕಟರಮಣಪ್ಪ ಮಾತನಾಡಿದರು

ಚಿಕ್ಕಬಳ್ಳಾಪುರ: ದೇಶಕ್ಕೆ ಸ್ವಾತಂತ್ರ‍್ಯ ಬಂದು ಸುಮಾರು ೭೮ ವರ್ಷಗಳು ಕಳೆದರೂ ದಲಿತರ ಹೆಸರು ಹೇಳಿಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದಲಿತರಿಗೆ ಮೋಸ ಮತ್ತು ವಂಚನೆ ಮಾಡಿ ಕೊಂಡು ಬರುತ್ತಿರುತ್ತಾರೆ ಎಂದು ಕರ್ನಾಟಕ ರಾಜ್ಯ ಹಳ್ಳಿ ಮಕ್ಕಳ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯನ್ನು ದ್ದೇಶಿಸಿ ಮಾತನಾಡಿ,ರಾಜ್ಯ ಮತ್ತು ಕೇಂದ್ರದಲ್ಲಿ ದಲಿತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ ಅತ್ಯಾಚಾರ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿರುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಂದರೆ ಮಾದಿಗ ಜನಾಂಗಕ್ಕೆ ಬರುವ ಮೀಸಲಾತಿ ಜಾರಿಗೆ ಆಗ್ರಹಿಸಿ ಒಂದು ವರ್ಷ ದಿಂದ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರಕಾರ ಕಿವಿ ಕೇಳಿಸದಂತೆ ಮತ್ತು ಕಣ್ಣು ಕಾಣದಂತೆ ಅಂಧರಂತೆ ವರ್ತಿಸುತ್ತಿರುವುದು ತುಂಬಾ ನೋವನ್ನು ಉಂಟು ಮಾಡಿದೆ. ಈ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿ ಮಾಡಲಿಲ್ಲ ಎಂದರೆ ಮುಂಬರುವ ಚುನಾವಣೆಗಳಲ್ಲಿ ನಮ್ಮ ಶಕ್ತಿ ತೋರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:Roopa Gururaj Column: ವೆಂಕಟೇಶ ಸುಪ್ರಭಾತದ ಹಿನ್ನೆಲೆ
ಚಿಕ್ಕಬಳ್ಳಾಪುರ ನಗರದ ಬಾಪೂಜಿ ನಗರದ ನಿವಾಸಿ ಮಾದಿಗ ಜಾತಿಯ ಬಾಬು ಎಂಬುವರು ಹಣಕಾಸಿನ ವಿಚಾರವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಮೃತಪಟ್ಟಿರುತ್ತಾರೆ. ಇದೇ ವಿಚಾರವನ್ನು ಮುಂದಿಟ್ಟುಕೊAಡು ಕಾಂಗ್ರೆಸ್ ಸರಕಾರ ಮತು ಶಾಸಕರು ಕೀಳು ರಾಜಕೀಯ ಮಾಡುತ್ತಿವೆ.ಇದು ಸರಿಯಲ್ಲ.ದಲಿತರ ಸಾವು ಮತ್ತು ಬದುಕನ್ನು ರಾಜಕೀಯಕ್ಕೆ ಬಳಸಿಕೊಂಡು ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ಶಾಸಕರು ಸಚಿವರಿಗೆ ನಮ್ಮ ಮೇಲೆ ಕಾಳಜಿಯಿದ್ದರೆ ಕ್ಷೇತ್ರದಲ್ಲಿ ದಲಿತರಿಗೆ ಆಗಿರುವ ಪ್ರಕರ ಸರ್ಕಾರಗಳು ಪ್ರಸ್ತುತ ಮೇಲ್ಕಂಡ ಮೃತ ಬಾಬು ರವರ ಹೆಸರನ್ನು ಹೇಳಿಕೊಂಡು ರಾಜಕೀಯಕ್ಕೋಸ್ಕರ ನಮ್ಮ ದಲಿತರ ಹೆಸರನ್ನು ಬಳಿಸಿಕೊಂಡು ಕೆಲವು ರಾಜಕೀಯ ವ್ಯಕ್ತಿಗಳು ನಮ್ಮ ದಲಿತ ಸಮುದಾಯವನ್ನು ವಂಚನೆ ಮಾಡುತ್ತಿದ್ದು. ಇಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಪ್ರಕರಣಗಳಿಗೆ ನ್ಯಾಯಕೊಡಿಸಲಿ ಎಂದು ಸವಾಲು ಹಾಕಿದರು.
ಎಂ.ಪಿ.ವಿರುದ್ಧ ಜಾತಿನಿಂಧನೆ ಕೇಸು ರಾತ್ರೋರಾಥ್ರಿ ದಾಖಲಿಸಿದಂತೆ, ದಲಿತರು ತಮ್ಮ ಮೇಲೆ ಮೇಲ್ವರ್ಗಗಳಿಂದ ಆಗುತ್ತಿರುವ ಜಾತಿನಿಂಧನೆ ಪ್ರಕರಣಗಳನ್ನು ಬೆಳಕಿಗೆ ತಂದಾಗಲೂ ಕೂಡಲೇ ಅಟ್ರಾಸಿಟಿ ಕೇಸು ದಾಖಲಿಸಿ ನ್ಯಾಯ ಕೊಡಲು ಪೊಲೀಸರಿಗೆ ತಾಕೀತು ಮಾಡಿ ಎಂದು ಹೇಳಿದರು.
ಕ್ಷೇತ್ರದಲ್ಲಿ ನೀವು ಅಧಿಕಾರಕ್ಕೆ ಬಂದ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಮತ್ತೆ-ಮತ್ತೆ ಅವರ ಹೆಸರುಗಳನ್ನು ಬಳಸಿಕೊಂಡು ಶಾಲುಗಳನ್ನು ಹಾಕಿಕೊಂಡು ವಂಚನೆ ಮಾಡುವುದಾಗಲೀ ಮಾಡಬಾರದು. ಪೋಲಿಸ್ ಠಾಣೆಗಳಲ್ಲಿ ಸುಮಾರು ಶೇ.೮೦ ರಷ್ಟು ದಲಿತರ ವಿರುದ್ದವೇ ಪ್ರಕರಣ ಗಳು ದಾಖಲಾಗಿರುತ್ತವೆ ಮತ್ತು ಜಿಲ್ಲಾ ಅಧಿಕಾರಿಗಳ ಕಛೇರಿಯಲ್ಲಿ ತಹಸೀಲ್ದಾರ್ ಕಛೇರಿಗಳಲ್ಲಿ, ಇ.ಓ. ಕಛೇರಿಯಲ್ಲಿ, ಗ್ರಾಮ ಪಂಚಾಯ್ತಿಯ ಕಛೇರಿಗಳಲ್ಲಿ, ಹಾಗೂ ಇನ್ನಿತರೆ ಇಲಾಖೆಗಳಲ್ಲಿ ದಲಿತರಿಗೆ ತುಂಬಾ ವಂಚನೆಯಾಗಿ ಮೋಸವಾಗಿರುತ್ತದೆ. ಇನ್ನು ಮುಂದೆಯಾದರೂ ದಲಿತರಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಯಾವುದೇ ರೀತಿಯಲ್ಲೂ ವಂಚನೆ, ಮೋಸ ಆಗದಂತೆ ಎಚ್ಚೆತ್ತುಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಹಕಾರ ನೀಡಿ, ಅವರಿಗೆ ಎಲ್ಲಾ ರೀತಿಯಲ್ಲೂ ಇರುವ ಮೀಸಲಾತಿಗಳು ಸಂಪೂರ್ಣವಾಗಿ ಬಳಸಿಕೊಳ್ಳಲು ಅನುವು ಮಾಡಿ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಹಳ್ಳಿ ಮಕ್ಕಳ ಸಂಘದ ಗೌರವಾಧ್ಯಕ್ಷ ಲಕ್ಷ್ಮಯ್ಯ, ಜಿಲ್ಲಾಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಗಂಗರಾಜು,ಪಧಾಧಿಕಾರಿಗಳಾದ ಗಂಗಾಧರಪ್ಪ,ನವನೀತ ಇದ್ದರು.