ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ, ಪ್ರಣಯ, ಬ್ರೇಕಪ್‌; ಅವಳಿ ಸಹೋದರಿಯನ್ನು 40 ಬಾರಿ ಇರಿದು ಕೊಂದ 25 ವರ್ಷದ ಎಂಜಿನಿಯರ್‌

Moradabad Horror: ತನ್ನ ಬ್ರೇಕಪ್‌ಗೆ ತಾಯಿ ಮತ್ತು ಸಹೋದರಿಯೇ ಕಾರಣ ಎಂದು ಭಾವಿಸಿ ಯುವಕನೊಬ್ಬ ಕ್ರೂರ ಕೃತ್ಯ ಎಸಗಿದ್ದಾನೆ. ಆತನ ಹಲ್ಲೆಯಿಂದ ಗಂಭೀರ ಗಾಯಗೊಂಡ ಸಹೋದರಿ ಮೃತಪಟ್ಟರೆ, ತಾಯಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ನೀಲಿಮಾ, ಹಿಂಶಿಖಾ ಮತ್ತು ಹಾರ್ದಿಕ್‌ (ಸಂಗ್ರಹ ಚಿತ್ರ)

ಲಖನೌ, ಮಾ. 8: ಆತ 25 ವರ್ಷದ ಎಂಜಿನಿಯರ್‌. ಕೈಯಲ್ಲಿ ಉತ್ತಮ ಉದ್ಯೋಗವಿತ್ತು. ಆರಾಮವಾಗಿ ಜೀವನ ಸಾಗಿಸಬಹುದಿತ್ತು. ಆದರೆ ಲವ್‌ ಬ್ರೇಕಪ್‌ ಆದ ಖಿನ್ನತೆಯಲ್ಲಿ ಮಾಡಬಾರದ್ದನ್ನು ಮಾಡಿ ಈಗ ಜೈಲಿನ ಕಂಬಿ ಎಣಿಸುತ್ತಿದ್ದಾನೆ (Moradabad Horror). ಆತ ತನ್ನ ಒಡಹುಟ್ಟಿದ ಅವಳಿ ಸಹೋದರಿಯನ್ನು ಕೊಂದಿದ್ದರೆ, ತಾಯಿಯ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಸಹೋದರಿಯನ್ನೇ ಕೊಲೆ ಮಾಡಿ ತಾಯಿಯನ್ನು ಗಾಯಗೊಳಿಸಿದ ಪಾಪಿಯನ್ನು ಹಾರ್ದಿಕ್‌ ಎಂದು ಗುರುತಿಸಲಾಗಿದೆ. ಆತನ ಸಹೋದರಿ ಹಿಂಶಿಖಾ ಮೃತಪಟ್ಟರೆ, ತಾಯಿ ನೀಲಿಮಾ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ (Crime News). ಸದ್ಯ ಹಾರ್ದಿಕ್‌ನನ್ನು ಬಂಧಿಸಲಾಗಿದೆ.

ʼʼಲವ್‌ ಬ್ರೇಕಪ್‌ನಿಂದ ಖಿನ್ನತೆಗೊಳಗಾಗಿದ್ದ ಹಾರ್ದಿಕ್‌ ಮನೆಯೊಳಗೆ ತನ್ನ ಸಹೋದರಿ ಹಿಂಶಿಕಾಳನ್ನು 40 ಬಾರಿ ಇರಿದುಕೊಂಡಿದ್ದಾನೆ. ಬಳಿಕ ತಾಯಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ಆತಬ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ದೇಶವೇ ಬೆಚ್ಚಿಬಿದ್ದಿದೆ.

ಸಹೋದರಿಯನ್ನೇ ಕೊಂದ ಎಂಜಿನಿಯರ್‌:



ಘಟನೆ ವಿವರ

ಹೆಲ್ತ್‌ ಇನ್ಶೂರೆನ್ಸ್‌ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನೀಲಿಮಾ ಅರಿಗೆ ಹಾರ್ದಿಕ್‌ ಮತ್ತು ಹಿಂಶಿಖಾ ಅವಳಿ ಮಕ್ಕಳು. ಉದ್ಯೋಗ ನಿಮಿತ್ತ ಹಾರ್ದಿಕ್‌ ಮತ್ತು ಹಿಂಶಿಖಾ ಗುರುಗ್ರಾಮದಲ್ಲಿ ವಾಸವಾಗಿದ್ದರು. ಕೆಲವು ತಿಂಗಳ ಹಿಂದೆ ಹಾರ್ದಿಕ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಬಳಿಕ ಆ ಪರಿಚಯ ಪ್ರಣಯಕ್ಕೆ ತಿರುಗಿತ್ತು. ಬಳಿಕ ಯುವತಿ ಬ್ರೇಕಪ್‌ ಮಾಡಿಕೊಂಡಿದ್ದಳು. ಈ ನೋವಿನಲ್ಲೇ ಹಾರ್ದಿಕ್‌ ಬಳಲುತ್ತಿದ್ದ.

ನೀರಿನ ಟ್ಯಾಂಕ್‌ನಲ್ಲಿ ಮೂವರು ಬಾಲಕಿಯರ ಶವ ಪತ್ತೆ; ತಂದೆಯೇ ಕೊಲೆಗಾರ?

ಹಾರ್ದಿಕ್‌ ಮತ್ತು ಹಿಂಶಿಖಾ ಹೋಳಿ ಆಚರಿಸಲು ತಾಯಿ ಇರುವ ಮೊರಾದಾಬಾದ್‌ಗೆ ಆಗಮಿಸಿದ್ದರು. ಮಾರ್ಚ್‌ 6ರಂದು ಇಬ್ಬರೂ ಗುರುಗ್ರಾಮಕ್ಕೆ ಹಿಂದಿರುಗಲು ಸಿದ್ಧತೆ ನಡೆಸುತ್ತಿದ್ದರು. ನೀಲಿಮಾ ಆಫೀಸ್‌ ಹೋದ ಬಳಿಕ ಅವರಿಬ್ಬರೇ ಮನೆಯಲ್ಲಿದ್ದರು.

ಈ ವೇಳೆ ಇದ್ದಕ್ಕಿದ್ದಂತೆ ಹಾರ್ದಿಕ್‌ ಚೂರಿ ತೆಗೆದು ಹಿಂಶಿಖಾ ಮೇಲೆ ದಾಳಿ ನಡೆಸಿದ. ಸುಮಾರು 40 ಬಾರಿ ಸಹೋದರಿಗೆ ಚುಚ್ಚಿದ್ದ. ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಹಾರ್ದಿಕ್‌ ತಾಯಿಯ ಕಚೇರಿಗೆ ತೆರಳಿದ.

ಬಳಿಕ ತಾಯಿಯನ್ನು ಕರೆದುಕೊಂಡು ಮನೆಗೆ ಬಂದಿದ್ದ. ಮಗಳು ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ ನೀಲಿಮಾ ಭೀತಿಯಿಂದ ಕಿರಿಚಾಡಿದ್ದರು. ನಂತರ ಹಾರ್ದಿಕ್‌ ತನ್ನ ತಾಯಿಯ ಮೇಲೂ ಹಲ್ಲೆ ನಡೆಸಿ ಸ್ಥಳದಿಂದ ಹೊರಟು ಹೋಗಿದ್ದ. ಕೂಡಲೇ ನೆರೆಮನೆಯವರು ಆಗಮಿಸಿ ನೀಲಿಮಾ ಮತ್ತು ಹಿಂಶಿಖಾ ಅವರನ್ನು ಆಸೊತ್ರೆಗೆ ಕರೆದೊಯ್ದರು. ಅದಾಗಲೇ ಹಿಂಶಿಖಾ ಮೃತಪಟ್ಟಿದ್ದರೆ ನೀಲಿಮಾ ಅವರನ್ನು ತುರ್ತುಚಿಕಿತ್ಸಾ ಘಟಕಕ್ಕೆ ದಾಖಲಿಸಲಾಯಿತು.

ಆತ್ಮಹತ್ಯೆ ಮಾಡಿಕೊಳ್ಳುವುದರ ಕುರಿತು ಸರ್ಚ್‌ ಮಾಡಿದ್ದ ವಿದ್ಯಾರ್ಥಿನಿಯರು ದೇವಾಲಯದ ಸ್ನಾನಗೃಹದಲ್ಲಿ ಶವವಾಗಿ ಪತ್ತೆ!

ಹಾರ್ದಿಕ್‌ ಕೃತ್ಯಕ್ಕೆ ಕಾರಣವೇನು?

ಬ್ರೇಕಪ್‌ಗೆ ತಾಯಿ ಮತ್ತು ಸಹೋದರಿಯೇ ಕಾರಣ ಎಂದು ಭಾವಿಸಿ ಹಾರ್ದಿಕ್‌ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಬ್ರೇಕಪ್‌ ಬಳಿಕ ಹಾರ್ದಿಕ್‌ ಸಾಕಷ್ಟು ಬದಲಾಗಿದ್ದ. ಸಣ್ಣ ಪುಟ್ಟ ವಿಚಾರಕ್ಕೂ ಕೋಪಗೊಳ್ಳುತ್ತಿದ್ದ ಎಂದು ನೀಲಿಮಾ ತಿಳಿಸಿದ್ದಾರೆ. ʼʼಸಂಬಂಧ ಮುರಿದುಬಿದ್ದ ಬಳಿಕ ತಾಯಿ ಮತ್ತು ಸಹೋದರಿ ನನ್ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಅವರೇ ನನ್ನ ಬ್ರೇಕಪ್‌ಗೆ ಕಾರಣ ಎನ್ನುವ ಕೋಪ ಮೊದಲಿನಿಂದಲೂ ಇತ್ತು. ಹೀಗಾಗಿ ಅಡುಗೆಮನೆಯಿಂದ ದೊಡ್ಡ ಚಾಕುವನ್ನು ಎತ್ತಿಕೊಂಡು ತನ್ನ ಸಹೋದರಿಗೆ ಹಲವು ಬಾರಿ ಇರಿದೆ. ತಾಯಿಯನ್ನು ಸಹ ಕೊಲ್ಲುವ ಉದ್ದೇಶವಿತ್ತುʼʼ ಎಂದು ಹಾರ್ದಿಕ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

Ramesh Ballamoole

View all posts by this author