ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru: ಬೆಂಗಳೂರಿನಲ್ಲಿ ಭಯ ಮೂಡಿಸಿದ ಬಿಳಿ ಬೊಲೆರೋ ಅನುಮಾನಾಸ್ಪದ ಸಂಚಾರ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದ್ದು, ಕಾರಿನ ಚಲನಚಲನ ಅನುಮಾನ ಮೂಡಿಸಿದೆ. ಈ ಕಾರು ಕರ್ನಾಟಕದ್ದಲ್ಲ, ಉತ್ತರ ಪ್ರದೇಶದ ನೋಂದಣಿ ನಂಬರ್ ಇರುವ ಬಿಳಿ ಬೊಲೆರೋ ಕಾರು ಅನ್ನೋದು ಗೊತ್ತಾಗಿದೆ. ವಾಹನದ ಬಗ್ಗೆ ಅನುಮಾನ ಬರುವ ರೀತಿಯಲ್ಲಿ ವಿಡಿಯೋ ಇದ್ದು, ವಿಡಿಯೋ ಬಗ್ಗೆ ಬನಶಂಕರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಅನುಮಾನಾಸ್ಪದ ಕಾರು

ಬೆಂಗಳೂರು, ಏ.03: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಬಿಳಿ ಬಣ್ಣದ ಬೊಲೆರೊ (white bolero) ವಾಹನವೊಂದರ ಅನುಮಾನಾಸ್ಪದ ಸಂಚಾರ ಕಂಡುಬಂದಿದ್ದು, ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವೈರಲ್‌ ಸುದ್ದಿ ಹಾಗೂ ವಿಡಿಯೋ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಅಲರ್ಟ್‌ (police alert) ಆಗಿದ್ದಾರೆ.

ಬೆಂಗಳೂರಿನ ಬನಶಂಕರಿಯಲ್ಲಿ ಅನುಮಾನಾಸ್ಪದ ಕಾರು ಓಡಾಡುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಪೊಲೀಸರೂ ಪರಿಶೀಲಿಸಿದ್ದಾರೆ.

ಬೊಲೆರೊ ಕಾರು ಬೀದಿಯಲ್ಲಿ ನಿಧಾನವಾಗಿ ಚಲಿಸುತ್ತದೆ. ಅದರೊಳಗಿದ್ದವರು ಅಕ್ಕಪಕ್ಕದ ಮನೆಗಳನ್ನು ಗಮನಿಸುತ್ತಿದ್ದಾರೆ ಎಂಬುದು ತಿಳಿಯುತ್ತಿದೆ. ಒಂದು ಮನೆಯ ಗೇಟ್‌ನ ಮುಂದೆ ಆಗಷ್ಟೇ ಶಾಲೆ ಮುಗಿಸಿಕೊಂಡು ಬಂದ ಬಾಲಕಿ ಗೇಟ್ ತೆಗೆದಿದ್ದಾಳೆ. ಅದೇ ರಸ್ತೆಯಲ್ಲಿ ಬಂದ ಬೊಲೆರೊ ಕಾರಿನ ಒಳಗೆ ಕೂತಿದ್ದವರು ಹುಡುಗಿಯನ್ನು ಕಾರು ನಿಲ್ಲಿಸಿ ಕರೆದಿದ್ದಾರಂತೆ. ಆಶೀರ್ವಾದ ಮಾಡ್ತೀವಿ ಬಾ ಎಂದು ಕರೆದಿದ್ದಾರೆ ಎನ್ನಲಾಗ್ತಿದೆ.

ಕಾವಿ, ವಿಭೂತಿ ಹಾಕಿಕೊಂಡು ಕಾರಿನಲ್ಲಿ ಬಂದವರನ್ನು ಕಂಡು ಬಾಲಕಿ ಗಾಬರಿಯಾಗಿದ್ದಾಳೆ. ತಕ್ಷಣ ತಂದೆಯನ್ನು ಕರೆದಿದ್ದಾಳಂತೆ. ತಂದೆ ಮನೆಯಿಂದ ಹೊರಗೆ ಬಂದು ವಿಚಾರಿಸಲು ಹೋಗುತ್ತಿದ್ದಂತೆ ಕಾರಿನಲ್ಲಿ ಬಂದವರು ವೇಗವಾಗಿ ಹೊರಟುಹೋಗಿದ್ದಾರೆ ಎನ್ನಲಾಗ್ತಿದೆ. ಇದು ಸುತ್ತಮುತ್ತಲಿನ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕಾರಿನಲ್ಲಿದ್ದವರ ಸಂಶಯಾಸ್ಪದ ನಡವಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಉಪನ್ಯಾಸಕ ಸಾವು; ಅಡಿಕೆ ತೋಟದಲ್ಲಿ ಶವಕ್ಕೆ ಬೆಂಕಿ!

ಸಿಲಿಕಾನ್ ಸಿಟಿಯಲ್ಲಿ ಅಪರಾಧ ಕೃತ್ಯಗಳಿಗೇನೂ ಕಡಿಮೆ ಇಲ್ಲ. ಕೊಲೆ-ಸುಲಿಗೆ, ಕಿಡ್ನ್ಯಾಪ್​​ನಂತಹ ಘಟನೆಗಳು ನಡೆಯುತ್ತಲೇ ಇವೆ. ಹೆಣ್ಣುಮಕ್ಕಳು ಒಂಟಿಯಾಗಿ ಓಡಾಡುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಬಿಳಿ ಬೊಲೆರೋ ನಗರದಲ್ಲಿ ಭಯ ಹುಟ್ಟಿಸಿದೆ. ಶಾಲಾ ಪರೀಕ್ಷೆಗಳು ಮುಗಿಯುತ್ತಿದ್ದು, ಮಕ್ಕಳು ಬೀದಿಗಳಲ್ಲಿ ಆಟವಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವುದು ಆತಂಕದ ವಿಚಾರವಾಗಿದೆ. ಹೆಣ್ಣು ಮಕ್ಕಳು ಇವರ ಟಾರ್ಗೆಟ್‌ ಎಂಬ ಗಾಳಿಸುದ್ದಿಗೆ ರೆಕ್ಕೆಪುಕ್ಕ ಮೂಡಿದೆ. ಇವರು ಸಂಶಯಿತ ವ್ಯಕ್ತಿಗಳೇ ಅಥವಾ ನಿಜವಾಗಿಯೂ ಸನ್ಯಾಸಿಗಳೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

ಉತ್ತರ ಪ್ರದೇಶದ ನಂಬರ್?

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಕಾರು ಕರ್ನಾಟಕದ್ದಲ್ಲ, ಉತ್ತರ ಪ್ರದೇಶದ ನೋಂದಣಿ ನಂಬರ್ ಇರುವ ಬಿಳಿ ಬೊಲೆರೋ ಕಾರು ಅನ್ನೋದು ಗೊತ್ತಾಗಿದೆ. ವಾಹನದ ಬಗ್ಗೆ ಅನುಮಾನ ಬರುವ ರೀತಿಯಲ್ಲಿ ವಿಡಿಯೋ ಇದ್ದು, ವಿಡಿಯೋ ಬಗ್ಗೆ ಬನಶಂಕರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಹರೀಶ್‌ ಕೇರ

View all posts by this author