ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶ್ರೀಮಂತ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ; ಬೆಳಗಾವಿಯಲ್ಲಿ ಖತರ್ನಾಕ್‌ ಮಹಿಳೆ ಅರೆಸ್ಟ್

Belagavi Honey trap Case: ಆರೋಪಿ ಮಹಿಳೆಯು, ಶ್ರೀಮಂತ ವ್ಯಕ್ತಿಗಳನ್ನು‌ ಪರಿಚಯ ಮಾಡಿಕೊಂಡು ಲಾಡ್ಜ್‌ಗೆ ಆಹ್ವಾನಿಸುತ್ತಿದ್ದಳು. ಲಾಡ್ಜ್‌ಗೆ ಬಂದ ವ್ಯಕ್ತಿಗಳಿಗೆ ಸ್ನಾನ ಮಾಡಿ ಬರುವಂತೆ ಹೇಳಿ, ಅವರು ಬಾತ್‌ರೂಮ್‌ಗೆ ಹೋದ ತಕ್ಷಣ ಹೊರಗಿನಿಂದ ಬಾಗಿಲು ಲಾಕ್ ಮಾಡಿ, ಅವರ ಹಣ, ಮೊಬೈಲ್ ಕದ್ದು ಎಸ್ಕೆಪ್ ಆಗುತ್ತಿದ್ದಳು.

ಬಂಧಿತ ಆರೋಪಿ ದೀಪಾ ಅವಟಗಿ.

ಬೆಳಗಾವಿ: ಶ್ರೀಮಂತ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ (Honey trap Case) ಖೆಡ್ಡಾಗೆ ಕೆಡವಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಖತರ್ನಾಕ್ ಫ್ಯಾಷನ್ ಡಿಸೈನರ್ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಬಂಧಿತ ಆರೋಪಿ. ಈಕೆಯ ಸ್ನೇಹಿತ ಶಿವಾನಂದ ಮಠಪತಿ ಎಸ್ಕೆಪ್ ಆಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿ ಶಿವಾನಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿವಾಸಿ. ಆತ ಶ್ರೀಮಂತ ವ್ಯಕ್ತಿಗಳ ಬಗ್ಗೆ ದೀಪಾಳಿಗೆ ಮಾಹಿತಿ ನೀಡುತ್ತಿದ್ದ. ದೀಪಾ ಫೇಸ್ ಬುಕ್, ಇನ್ಸ್‌ಸ್ಟಾಗ್ರಾಂ ಲಕ ಶ್ರೀಮಂತ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು, ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಬಳಿಕ ಅಶ್ಲೀಲ ಚಾಟ್, ಫೋ ಸಂಭಾಷಣೆಗಳ ಮೂಲಕ ಲಾಡ್ಜ್‌ಗೆ ಕರೆಯುತ್ತಿದ್ದಳು.

ಬೆಳಗಾವಿ ನಗರದ ಲಾಡ್ಜ್‌ಗೆ ಭೇಟಿ ನೀಡುವಂತೆ ಶ್ರೀಮಂತ ಕುಳಗಳನ್ನು ಆಹ್ವಾನಿಸುತ್ತಿದ್ದಳು. ಲಾಡ್ಜ್‌ಗೆ ಬಂದ ವ್ಯಕ್ತಿಗಳಿಗೆ ಸ್ನಾನ ಮಾಡಿ ಬರುವಂತೆ ಹೇಳಿ, ಅವರು ಬಾತ್‌ರೂಮ್‌ಗೆ ಹೋದ ತಕ್ಷಣ ಹೊರಗಿನಿಂದ ಬಾಗಿಲು ಲಾಕ್ ಮಾಡುತ್ತಿದ್ದಳು. ನಂತರ ಆಕೆಯಿಂದ ಬಂದ ವ್ಯಕ್ತಿಗಳ ಮೊಬೈಲ್, ಹಣ ಹಾಗೂ ಕಾರಿನ ಕೀಲಿಗಳನ್ನು ತೆಗೆದುಕೊಂಡು ಎಸ್ಕೆಪ್ ಆಗುತ್ತಿದ್ದಳು. ಬಳಿಕ ಬೇರೆ ನಂಬರ್‌ನಿಂದ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು.

ದೀಪಾಳ ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ವ್ಯಕ್ತಿಯೊಬ್ಬನಿಗೆ ಇದೇ ರೀತಿ ವಂಚಿಸಿದ್ದಳು. ಈ ಘಟನೆಗಳ ಕೆಲವು ದೃಶ್ಯಗಳು ಲಾಡ್ಜ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಬೆಳಗಾವಿಯ ಟಿಳಕವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್ ಪರಶುರಾಮ ಪೂಜಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ದೀಪಾಳನ್ನು ಬಂಧಿಸಿದ್ದಾರೆ.

ನಟ ದ್ವಾರಕೀಶ್‌ ಸೊಸೆ ವಿರುದ್ಧ ಹಲವರಿಗೆ ವಂಚನೆ; ಹಣ ವಾಪಸ್‌ ಕೇಳಿದ್ದಕ್ಕೆ ಪೊರಕೆಯಿಂದ ಹಲ್ಲೆ!

ಬಂಧಿತ ದೀಪಾಳಿಂದ ಒಟ್ಟು 32.86 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರಲ್ಲಿ ಒಂದು ಫಾರ್ಚುನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರಿನ ಕೀಗಳು ಹಾಗೂ 14 ಸಾವಿರ ರೂಪಾಯಿ ನಗದು ಸೇರಿವೆ. ಮತ್ತೊಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದ್ದು, ತನಿಖೆ ಮುಂದುವರಿದಿದೆ.