ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Murder Case: ಸೊಸೆಯನ್ನು ಕಾಮದಾಹಕ್ಕೆ ಬಳಸಿಕೊಂಡ ಅಪ್ಪ ಮಗನಿಂದಲೇ ಸುಪಾರಿ ಹತ್ಯೆ!

ಹಂಪಣ್ಣ ಮದ್ಯವ್ಯಸನಿಯೂ ಆಗಿದ್ದ. ತನ್ನ ಕಾಮತೃಷೆ ಈಡೇರಿಸಿಕೊಳ್ಳಲು ದುಡ್ಡು ಕೊಟ್ಟು ಬೇರೆ ಮಹಿಳೆಯರನ್ನು ಶೆಡ್​​ಗೆ ಕರೆಸಿಕೊಳ್ಳುತ್ತಿದ್ದ. ಮಗನ ಹೆಂಡತಿ ಅಂದರೆ ಸೊಸೆ, ಜಮೀನಿಗೆ ಕೆಲಸಕ್ಕೆ ಬಂದಾಗಲೂ ಬಿಡುತ್ತಿರಲಿಲ್ಲ. ತನ್ನ ಪತ್ನಿಯ ಜೊತೆಗೆ ತಂದೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಗೊತ್ತಾಗಿದ್ದೇ ತಡ ನರಸರೆಡ್ಡಿ ರೊಚ್ಚಿಗೆದ್ದಿದ್ದು, ತಂದೆಯನ್ನೇ ಮುಗಿಸಿಬಿಡುವ ಪ್ಲ್ಯಾನ್ ಮಾಡಿದ್ದ.

ಮೃತ ಹಂಪಣ್ಣ ಸಜ್ಜನ

ಯಾದಗಿರಿ, ಮಾರ್ಚ್ 20: ಜಿಲ್ಲೆಯ (yadagiri) ಗೋನಾಳ ಗ್ರಾಮದ ಮಗನಿಂದಲೇ (son) ತಂದೆ (father) ಕೊಲೆ ಪ್ರಕರಣಕ್ಕೆ (Murder Case) ಟ್ವಿಸ್ಟ್ ಸಿಕ್ಕಿದೆ. 75 ವಯಸ್ಸಾಗಿದ್ರೂ ಕಾಮದಾಟಕ್ಕಾಗಿ ಮಹಿಳೆಯರ ಜೊತೆ ಸಂಬಂಧ (illicit relationship) ಇಟ್ಟುಕೊಂಡು, ಸೊಸೆಯನ್ನೂ ಬಿಡದ ತಂದೆಯನ್ನು ಕಂಡು ಮಾರ್ಯಾದೆಗೆ ಹೆದರಿ ಮಗನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ.

ಗೋನಾಳ ಗ್ರಾಮದಲ್ಲಿ ಮಾರ್ಚ್ 12ರ ರಾತ್ರಿ 74 ವರ್ಷದ ಹಂಪಣ್ಣ ಸಜ್ಜನ ಎಂಬಾತನ ಕೊಲೆಯಾಗಿತ್ತು. ಕೊಲೆ ನಡೆದ ಬಳಿಕ ಈ ಹಂಪಣ್ಣ ಸಜ್ಜನ ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರಂಭದಲ್ಲಿ ಕೊಲೆ ಯಾರು ಮಾಡಿದ್ದಾರೆ ಎಂದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕೊಲೆ ನಡೆದ ನಾಲ್ಕು ದಿನಗಳ ಬಳಿಕ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಂತಕರಾದ ರಮೇಶ್, ಜಿ.ವಿರೇಶ್, ಎಂ.ವಿರೇಶ್ ಹಾಗೂ ಕೃಷ್ಟನನ್ನು ವಡಗೇರಾ ಪೊಲೀಸರು ಬಂಧಿಸಿದ್ದಾರೆ.

ಮಗನೇ ತಂದೆ ಹತ್ಯೆಗೆ ಸುಪಾರಿ ನೀಡಿದ

ಪೊಲೀಸರು ಆರೋಪಿಗಳನ್ನು ಆರೆಸ್ಟ್ ಮಾಡಿದ ಬಳಿಕ ಹಂಪಣ್ಣನ ಕೊಲೆ ಹಿಂದಿನ ರಹಸ್ಯ ಬಯಲಿಗೆ ಬಂದಿದೆ. ಕೊಲೆ ಮಾಡಿದವರು ತಿರುಪತಿ ಮೂಲದ ನಾಲ್ಕು ಜನರು. ಆದರೆ ಕೊಲೆಗೆ ಸುಪಾರಿ ಕೊಟ್ಟಿದ್ದು ಮಾತ್ರ ಹಂಪಣ್ಣ ಸಜ್ಜನ ಪುತ್ರ ನರಸರೆಡ್ಡಿ. ಮಗನೇ ತಂದೆಯನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದು ತನಿಖೆ ವೇಳೆ ಖಚಿತವಾಗಿದ್ದು, ಮೊದಲು ಆಸ್ತಿಗಾಗಿ ಕೊಲೆ ಮಾಡಿರುವುದಾಗಿ ಶಂಕಿಸಿದ್ದರು. ಆದರೆ ತನಿಖೆ ವೇಳೆ, ಕೊಲೆಯಾದ ತಂದೆಯ ಮೊಬೈಲ್‌ನಲ್ಲಿ ಫೋಟೋಗಳು ಸಿಕ್ಕಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಕೌಟುಂಬಿಕ ಕಲಹಕ್ಕೆ ಬಿತ್ತು 3 ಹೆಣ: ಪತ್ನಿ, ಸೊಸೆ, ಮೊಮ್ಮಗಳನ್ನು ಹತ್ಯೆಗೈದು ವೃದ್ಧ ಪರಾರಿ

ಮೃತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಜೊತೆ ತೆಗೆದುಕೊಂಡ ಫೋಟೋ ಸಿಕ್ಕಿದ್ದು, ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಕೊಲೆಯಾದ ವ್ಯಕ್ತಿ ತನ್ನ ಮಕ್ಕಳ ಜೊತೆ ಊರಲ್ಲಿ ಇರದೇ ಲೈಂಗಿಕ ಪಿಪಾಸೆಗಾಗಿ ಹೊಲದಲ್ಲಿ ವಾಸವಾಗಿದ್ದ. 48 ಎಕರೆ ಜಮೀನು ಹೊಂದಿದ್ದು, ಇದರಲ್ಲಿ ತನ್ನ ಮೂರು ಜನ ಮಕ್ಕಳಿಗೆ ತಲಾ 4 ಎಕರೆಯತೆ 12 ಎಕರೆ ಜಮೀನು ನೀಡಿದ್ದ. ಇನ್ನುಳಿದ 36 ಎಕರೆ ಜಮೀನು ತನ್ನ ಹೆಸರಿಗೆ ಇಟ್ಟುಕೊಂಡು ಬಂದ ಆದಾಯದಲ್ಲಿ ಶೋಕಿ ಮಾಡುತ್ತಿದ್ದ.

ಊರಲ್ಲಿ ಮೂರ ಜನ ಮಕ್ಕಳ ಮನೆ ಇದ್ದರೂ ಸಹ ಕಳೆದ 15 ವರ್ಷಗಳಿಂದ ಜಮೀನಲ್ಲಿ ಶೆಡ್ ಹಾಕಿಕೊಂಡು ಪತ್ನಿ ಜೊತೆ ವಾಸವಾಗಿದ್ದ. ಕಳೆದ 8 ವರ್ಷಗಳ ಹಿಂದೆ ಪತ್ನಿ ಸಾವನ್ನಪ್ಪಿದ ಬಳಿಕ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಹಂಪಣ್ಣ ಮದ್ಯವ್ಯಸನಿಯೂ ಆಗಿದ್ದ. ತನ್ನ ಕಾಮತೃಷೆ ಈಡೇರಿಸಿಕೊಳ್ಳಲು ದುಡ್ಡು ಕೊಟ್ಟು ಬೇರೆ ಮಹಿಳೆಯರನ್ನು ಶೆಡ್​​ಗೆ ಕರೆಸಿಕೊಳ್ಳುತ್ತಿದ್ದ. ಮಗನ ಹೆಂಡತಿ ಅಂದರೆ ಸೊಸೆ, ಜಮೀನಿಗೆ ಕೆಲಸಕ್ಕೆ ಬಂದಾಗಲೂ ಬಿಡುತ್ತಿರಲಿಲ್ಲ. ತನ್ನ ಪತ್ನಿಯ ಜೊತೆಗೆ ತಂದೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಗೊತ್ತಾಗಿದ್ದೇ ತಡ ನರಸರೆಡ್ಡಿ ರೊಚ್ಚಿಗೆದ್ದಿದ್ದು, ತಂದೆಯನ್ನೇ ಮುಗಿಸಿಬಿಡುವ ಪ್ಲ್ಯಾನ್ ಮಾಡಿದ್ದ. ನಾಲ್ವರನ್ನು ಕರೆಸಿ, 2 ಲಕ್ಷ ರೂ. ನೀಡಿ ಕೊಲೆ ಮಾಡುವಂತೆ ಸುಪಾರಿ ಕೊಟ್ಟಿದ್ದ ಎಂದು ತನಿಖೆ ವೇಳೆ ಬಯಲಿಗೆ ಬಂದಿದೆ.

ಕುಡಿದ ಮತ್ತಿನಲ್ಲಿ ಅಣ್ಣ, ತಂಗಿಯನ್ನೇ ಬರ್ಬರ ಹತ್ಯೆ ಮಾಡಿದ ವ್ಯಕ್ತಿ!

ಹರೀಶ್‌ ಕೇರ

View all posts by this author