ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Belagavi Murder: ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಪ್ರೇಯಸಿಯನ್ನೇ ಉಸಿರುಗಟ್ಟಿಸಿ ಕೊಂದ ಪ್ರಿಯಕರ!

ಮದುವೆಯಾಗುವುದಾಗಿ ಹೇಳಿ ನಾಲ್ಕು ವರ್ಷ ಕಳೆದರೂ ಏಕೆ ಹಿಂದೇಟು ಹಾಕುತ್ತಿದ್ದೀಯಾ ಎಂದು ಯುವತಿ ಪ್ರಶ್ನಿಸಿದ್ದಾಳೆ. ಈ ವಿಚಾರವಾಗಿ ಯುವಕ ಮತ್ತು ಯುವತಿ ನಡುವೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಕ್ಟೋಬರ್ 28ಕ್ಕೆ ಸುತ್ತಾಡಲು ಅಂತ ಕರೆದು ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಪ್ರಿಯಕರ ಕೊಲೆ ಮಾಡಿದ್ದಾನೆ.

ಬೆಳಗಾವಿ: ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಪ್ರೀತಿಸಿದ ಯುವತಿಯನ್ನು ಪ್ರಿಯಕರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ (Belagavi Murder) ನಡೆದಿದೆ. ರಕ್ಷಿತಾ ಸರಿಕರ್ (23) ಕೊಲೆಯಾದ ಯುವತಿ. ಕೇಂದ್ರ ಸಶಸ್ತ್ರ ಸೀಮಾ ಬಲದ ಪೇದೆ ಬಸಪ್ಪ ಸಾತನ್ನವಣ್ಣರ್ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಹಾರೋಗೇರಿ ಗ್ರಾಮದ ರಕ್ಷಿತಾ ಜತೆಗೆ ಬಸಪ್ಪ ಪ್ರೀತಿಯಲ್ಲಿ ಬಿದ್ದಿದ್ದ. ಕಳೆದ ನಾಲ್ಕು ವರ್ಷಗಳಿಂದ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಅಕ್ಟೋಬರ್ 28ಕ್ಕೆ ಸುತ್ತಾಡಲು ಅಂತ ಕರೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ, ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

Belagavi murder  (1)

ಆರೋಪಿ ಬಸಪ್ಪ ಕಳೆದ ನಾಲ್ಕು ವರ್ಷಗಳಿಂದ ರಕ್ಷಿತಾಳನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ಆದರೆ ಮದುವೆ ವಿಚಾರ ಬಂದಾಗಲೆಲ್ಲ ಮುಂದೂಡುತ್ತಾ ಬಂದಿದ್ದ. ಇದರಿಂದ ಅಸಮಾಧಾನಗೊಂಡಿದ್ದ ರಕ್ಷಿತಾಳನ್ನು ಅಕ್ಟೋಬರ್ 28ರಂದು ಹಾರುಗೇರಿಯಿಂದ ಗೋಕಾಕ್ ಫಾಲ್ಸ್‌ಗೆ ಕರೆದುಕೊಂಡು ಹೋಗಿದ್ದಾನೆ.

ಸಂಜೆ ಸುಮಾರು 4 ಗಂಟೆ ವೇಳೆಗೆ ಫಾಲ್ಸ್ ರಸ್ತೆಯ ಪಕ್ಕದ ಕಟ್ಟೆಯ ಮೇಲೆ ಇಬ್ಬರೂ ಕುಳಿತು ಮಾತನಾಡುತ್ತಿದ್ದಾಗ, ಮದುವೆಯಾಗುವುದಾಗಿ ಹೇಳಿ ನಾಲ್ಕು ವರ್ಷ ಕಳೆದರೂ ಇದೀಗ ಮದುವೆಯಾಗಲು ಏಕೆ ಹಿಂದೇಟು ಹಾಕುತ್ತಿದ್ದೀಯಾ ಎಂದು ರಕ್ಷಿತಾ ಪ್ರಶ್ನಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಕೋಪಗೊಂಡ ಬಸಪ್ಪ, ರಕ್ಷಿತಾಳ ಕೆನ್ನೆಗೆ ಬಲವಾಗಿ ಹೊಡೆದು, ಬಳಿಕ ಕೈಯಿಂದ ಕುತ್ತಿಗೆ ಹಿಸುಕಿ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರದೀಪ್‌ ಪೂಜಾರಿ ಆತ್ಮಹತ್ಯೆ: ಮಧ್ಯ ಪ್ರದೇಶದಲ್ಲಿ ಇಬ್ಬರ ಬಂಧನ

ಕೊಲೆ ಮಾಡಿದ ಬಳಿಕ ಮೃತದೇಹವನ್ನು ಗೋಕಾಕ್ ಫಾಲ್ಸ್‌ನ ಗುಡ್ಡದ ಇಳಿಜಾರಿನಲ್ಲಿರುವ ಮುಳ್ಳಿನ ಪೊದೆಗಳ ಮಧ್ಯೆ ಎಸೆದು, ಸಾಕ್ಷ್ಯ ನಾಶಪಡಿಸಲು ಆರೋಪಿ ಯತ್ನಿಸಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಸಪ್ಪನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಮಾಡಿರೋದಾಗಿ ಬಸಪ್ಪ ಒಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.