Physical Assault: ಯುವತಿ ಪಕ್ಕ ಕುಳಿತು ಹಸ್ತಮೈಥುನ ಮಾಡಿಕೊಂಡ ಕಾಮುಕನಿಗೆ ಬಿತ್ತು ಗೂಸಾ! ವಿಡಿಯೋ ವೈರಲ್
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಮಹಿಳೆಯರೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದು, ಯುವತಿ ಎದುರಿಗೆ ಹಸ್ತ ಮೈಥುನ ಮಾಡಿಕೊಂಡಿದ್ದಾನೆ ಎಂದು ಮಹಿಳಾ ಪ್ರಯಾಣಿಕರೊಬ್ಬರು ದೂರು ನೀಡಿದ್ದಾಳೆ. ಯುವಕನೋರ್ವ ನನ್ನನ್ನೇ ನೋಡುತ್ತಿದ್ದ. ಹಾಗೆಯೇ ಸ್ವಲ್ಪ ಸಮಯದ ನಂತರ ನನ್ನ ಮುಂದೆಯೇ ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ, ಇದರಿಂದ ನಾನು ಭಯಭೀತಳಾಗಿದ್ದೆ ಎಂದಿದ್ದಾಳೆ.

ಸಾಂದರ್ಭಿಕ ಚಿತ್ರ -

ಮುಂಬೈ: ಥಾಣೆಯಿಂದ (Thane) ವಾಶಿಗೆ ತೆರಳುತ್ತಿದ್ದ ಹಾರ್ಬರ್ ಲೈನ್ (Harbour Line) ರೈಲಿನಲ್ಲಿ ಯುವಕನೊಬ್ಬ ಯುವತಿಯನ್ನು ಅಸಭ್ಯವಾಗಿ ನೋಡುತ್ತಲೇ ಹಸ್ತಮೈಥುನದಲ್ಲಿ (Masturbating) ತೊಡಗಿದ ಘಟನೆ ನಡೆದಿದೆ. ಈ ಅಸಹ್ಯಕರ ಘಟನೆಯನ್ನು ರೈಲಿನಲ್ಲಿದ್ದ ಇನ್ನೊಬ್ಬ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗಿದೆ.
ಇನ್ನೂ ವಿಡಿಯೋದಲ್ಲಿ, ಯುವಕನ ದುರ್ನಡತೆಯಿಂದ ಕೋಪಗೊಂಡ ಯುವತಿ ಆತನ ಕಪಾಳಕ್ಕೆ ಹೊಡೆಯುತ್ತಿರುವುದು ಮತ್ತು ಇತರ ಪ್ರಯಾಣಿಕರ ಮುಂದೆ ಆತನಿಗೆ ತೀವ್ರವಾಗಿ ಬೈಯುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇನ್ನೂ ಈ ವಿಡಿಯೋವನ್ನು ಅಬ್ರಾರ್ ಶೇಖ್ (abrar12shaikh) ಎಂಬುವವರ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ಘಟನೆಯ ಸಂದರ್ಭದಲ್ಲಿ, ಆರೋಪಿಯ ಪಕ್ಕದ ಸೀಟಿನಲ್ಲಿದ್ದ ಪ್ರಯಾಣಿಕನೊಬ್ಬ ಯುವತಿಗೆ ತನ್ನ ಸೀಟು ಬದಲಾಯಿಸಲು ಸೂಚಿಸಿದ್ದಾನೆ. ಕಾರಣ ಕೇಳಿದಾಗ, “ನಿನ್ನ ಪಕ್ಕದವನು ಅಸಭ್ಯ ಕೃತ್ಯದಲ್ಲಿ ತೊಡಗಿದ್ದಾನೆ” ಎಂದು ತಿಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಆರೋಪಿಯನ್ನು ಕಪಾಳಕ್ಕೆ ಹೊಡೆದಿದ್ದಾಳೆ. ದ್ವಾರದ ಬಳಿ ನಿಂತಿದ್ದ ಇನ್ನೊಬ್ಬ ವ್ಯಕ್ತಿಯೂ ಆರೋಪಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆದರೆ, ಇತರ ಪ್ರಯಾಣಿಕರು ಮೌನವಾಗಿ ಘಟನೆಯನ್ನು ವೀಕ್ಷಿಸುತ್ತಿದ್ದದ್ದು ಕಂಡುಬಂದಿದೆ.
ಈ ಸುದ್ದಿಯನ್ನು ಓದಿ: Viral News: ಎಲಾನ್ ಮಸ್ಕ್ ಜೊತೆ ಬೆಂಗಳೂರು ಮೂಲದ ಉದ್ಯಮಿಯ ಸೆಲ್ಫಿ-ಈ ಫೋಟೋದ ಅಸಲಿಯತ್ತೇನು?
ಇನ್ನೂ ಘಟನೆ ವೇಳೆ ತಪ್ಪಿಸಿಕೊಳ್ಳಲು ಆರೋಪಿ ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದಾನೆ. ವಿಡಿಯೊದಲ್ಲಿ, ಆತ ಪ್ಲಾಟ್‌ಫಾರ್ಮ್‌ನಲ್ಲಿ ಬಿದ್ದು ಗಾಯಗೊಂಡಿರುವುದು ಕಾಣಿಸುತ್ತದೆ. ಅಬ್ರಾರ್ ಶೇಖ್ ತಮ್ಮ ಮರಾಠಿ ಪೋಸ್ಟ್‌ನಲ್ಲಿ, “ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಭ್ಯ ಕೃತ್ಯಗಳು ಅಪರಾಧವಷ್ಟೇ ಅಲ್ಲ, ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ. ಇಂತಹ ದುಷ್ಟರಿಗೆ ಕಠಿಣ ಶಿಕ್ಷೆಯಾಗದಿದ್ದರೆ, ಯುವತಿಯರ ಸುರಕ್ಷತೆಯ ಮೇಲೆ ದೊಡ್ಡ ಪ್ರಶ್ನೆ ಎದುರಾಗುತ್ತದೆ” ಎಂದು ಬರೆದಿದ್ದಾರೆ.
ಈ ಘಟನೆಯು ಮುಂಬೈನ ಸಾರ್ವಜನಿಕ ಸಾರಿಗೆಯಲ್ಲಿ ಯುವತಿಯರ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಧ್ಯ ಪೊಲೀಸರು ಈ ವಿಡಿಯೋ ಆಧರಿಸಿ ತನಿಖೆ ಆರಂಭಿಸಿದ್ದು, ಆರೋಪಿಯನ್ನು ಗುರುತಿಸಿ ಕಾನೂನು ಕ್ರಮಕ್ಕೆ ಕೈಗೊಳ್ಳಲು ಮುಂದಾಗಿದ್ದಾರೆ.