ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೃದಯಾಘಾತದಿಂದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ನಿಧನ

ಹೃದಯಾಘಾತದಿಂದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ನಿಧನ

ಮುಂಬೈ: ಆಸ್ಟ್ರೇಲಯಾದ ಮಾಜಿ ಕ್ರಿಕೆಟಿಗ, ಪ್ರಸಿದ್ದ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್(59) ಅವರು ಗುರುವಾರ ಮಧ್ಯಾಹ್ನ ಮುಂಬೈನಲ್ಲಿ ನಿಧನ ಹೊಂದಿದರು. ಐಪಿಎಲ್ ನ ಕಾಮೆಂಟರಿಗಾಗಿ ಮುಂಬೈಗೆ ಬಂದಿದ್ದ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಡೀನ್ ಜೋನ್ಸ್ ಅವರು ಆಸೀಸ್ ಪರ 52 ಟೆಸ್ಟ್ ಪಂದ್ಯ ಮತ್ತು 164 ಏಕದಿನ ಪಂದ್ಯಗಳನ್ನು ಆಡಿದ್ದರು. 1986ರ ಭಾರತ ವಿರುದ್ದ ಟೈ ಆದ ಟೆಸ್ಟ್ ಪಂದ್ಯದಲ್ಲಿ ಡೀನ್ ಜೋನ್ಸ್ ದ್ವಿಶತಕ ಬಾರಿಸಿದ್ದರು. ಕ್ರಿಕೆಟ್ ವಿಶ್ಲೇಷಣೆ ಮತ್ತು ವೀಕ್ಷಕ ವಿವರಣೆಯಲ್ಲಿ ಪ್ರಸಿದ್ದರಾಗಿದ್ದ ಡೀನ್ ಜೋನ್ಸ್ ಈ ಬಾರಿಯ ಐಪಿಎಲ್ ನ ಸ್ಟುಡಿಯೋ ಕಾಮೆಂಟರಿಗಾಗಿ ಮುಂಬೈಗೆ ಆಗಮಿಸಿದ್ದರು. ಸಹ ಕಾಮೆಂಟೇಟರ್ಸ್ ಗಳಾದ ಬ್ರೆಟ್ ಲಿ ಮತ್ತು ನಿಖಿಲ್ ಚೋಪ್ರಾ ಅವರೊಂದಿಗೆ ಉಪಹಾರ ಸೇವಿಸಿದ್ದ ಡೀನ್ ಜೋನ್ಸ್ ನಂತರ ಹೋಟೆಲ್ ಲಾಬಿಯಲ್ಲಿ ಕುಸಿದು ಬಿದ್ದು ನಿಧನರಾದರು.