Dinesh Gundurao: ದಿವ್ಯಾಂಗರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಅನನ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ನಾರಾಯಣ ಸೇವಾ ಸಂಸ್ಥೆಯ ಮಾದರಿಯಲ್ಲಿ ಮಹೋನ್ನತ ಸೇವೆ ಸಲ್ಲಿಸುತ್ತಿರುವ ಮತ್ತೊಂದು ಸಂಸ್ಥೆ ಯನ್ನು ದೇಶವಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ನೋಡಿಲ್ಲ. ಬದ್ಧತೆ, ಪ್ರಮಾಣಿಕತೆಯಿಂದ ಕೆಲಸ ಮಾಡು ತ್ತಿದೆ. ಕಷ್ಟಪಡುವ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಜೊತೆಗೆ ಗುಣಮಟ್ಟದ ಅಂಗಾಂಗಳನ್ನು ಜೋಡಿ ಸುತ್ತಿದೆ. ಜೊತೆಗೆ ದಿವ್ಯಾಂಗರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತಿದೆ.

dinesh G
Profile Ashok Nayak Feb 2, 2025 4:57 PM

ಬೆಂಗಳೂರು: ಉದಯಪುರದ ನಾರಾಯಣ ಸೇವಾ ಸಂಸ್ಥಾನದ ಆಶ್ರಯದಲ್ಲಿ ಭಾನುವಾರ ಬೆಂಗ ಳೂರಿನ ಜಯನಗರದ ಚಂದ್ರಸಾಗರ ಕಲ್ಯಾಣ ಮಂಟಪದಲ್ಲಿ ನಾರಾಯಣ್ ಅಂಗಾಂಗ ಮತ್ತು ಕ್ಯಾಲಿಪರ್ಸ್ ಮಾಪನ ಮತ್ತು ಶಸ್ತ್ರ ಚಿಕಿತ್ಸೆಗಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸ ಲಾಗಿತ್ತು.

ರಾಜ್ಯವಷ್ಟೇ ಅಲ್ಲದೇ ದಕ್ಷಿಣ ಭಾರತದಿಂದ ದಿವ್ಯಾಂಗರು ಆಗಮಿಸಿದ್ದರು. ಅಂಗಾಂಗ ಮಾಪನ ಶಿಬಿರದಲ್ಲಿ ನಾರಾಯಣ ಸೇವಾ ಸಂಸ್ಥಾನದ ತಜ್ಞ ವೈದ್ಯರು ದಿವ್ಯಾಂಗರ ಅಳತೆ ತೆಗೆದುಕೊಂಡರು.

ಬಳ್ಳಾರಿ, ವಿಜಯನಗರ, ರಾಯಚೂರು, ಬೀದರ್, ಬೆಳಗಾವಿ, ಕೊಡಗು, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾವೇರಿ, ಉಡುಪಿ, ಬಾಗಲಕೋಟ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ದಕ್ಷಿಣ ಭಾರತದಿಂದ 1050 ದಿವ್ಯಾಂಗರು ಆಗಮಿಸಿದ್ದರು.

ಇದನ್ನೂ ಓದಿ: Dinesh Gundu Rao: ಜ.24ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನ: ನಾಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣುಮಗುವಿಗೆ ಸ್ಪೆಷಲ್ ಗಿಫ್ಟ್!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ದಿವ್ಯಾಂಗದೊಂದಿಗೆ ಸಮಾ ಲೋಚಿಸಿದರು. ನಂತರ ಶಿಬಿರ ಉದ್ಘಾಟಿಸಿ ಮಾತನಾಡಿ, ನಾರಾಯಣ ಸೇವಾ ಸಂಸ್ಥೆಯ ಮಾದರಿ ಯಲ್ಲಿ ಮಹೋನ್ನತ ಸೇವೆ ಸಲ್ಲಿಸುತ್ತಿರುವ ಮತ್ತೊಂದು ಸಂಸ್ಥೆಯನ್ನು ದೇಶವಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ನೋಡಿಲ್ಲ. ಬದ್ಧತೆ, ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ಕಷ್ಟಪಡುವ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಜೊತೆಗೆ ಗುಣಮಟ್ಟದ ಅಂಗಾಂಗಳನ್ನು ಜೋಡಿಸುತ್ತಿದೆ. ಜೊತೆಗೆ ದಿವ್ಯಾಂಗರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತಿದೆ. ಸಾಮಾಜಿಕ ಚಟುವಟಿಕೆ ಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.

ನಾರಾಯಣ ಸೇವಾ ಸಂಸ್ಥೆಗೆ ಬೆಂಗಳೂರಿನಲ್ಲಿ ತನ್ನ ಶಾಖೆ ತೆರೆಯಲು ಉಚಿತ ನಿವೇಶನ ದೊರಕಿಸಿ ಕೊಡುವ ಜವಾಬ್ದಾರಿ ತಮ್ಮದು. ಇದಕ್ಕಾಗಿ ಶೇ 100ಕ್ಕಿಂತ ಅಧಿಕ ಪ್ರಯತ್ನ ಮಾಡುತ್ತೇನೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಸರ್ಕಾರ ಮಾಡುವ ಕೆಲಸವನ್ನು ನಿಮ್ಮ ಸಂಸ್ಥೆ ಮಾಡುತ್ತಿದೆ. ಕರ್ನಾಟಕದಲ್ಲೂ ಒಳ್ಳೆಯ ಕೆಲಸ ಮಾಡುವಂತೆ ಕಿವಿ ಮಾತು ಹೇಳಿದರು.

ನಾರಾಯಣ ಸೇವಾ ಸಂಸ್ಥಾನದ ಉಚಿತ ಸೇವೆಗಳು ಮತ್ತು ಶಿಬಿರದಲ್ಲಿ ಅಗಾಧ ಭಾಗವಹಿಸುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಗವಿಕಲರಿಗೆ ಸೇವೆ ಸಲ್ಲಿಸಲು ಶ್ರಮಿಸಿದ ಅಧ್ಯಕ್ಷ ಪ್ರಶಾಂತ್ ಅಗ ರ್ವಾಲ್ ಮತ್ತು ನಾರಾಯಣ ಸೇವಾ ಸಂಸ್ಥಾನದ ಸಂಪೂರ್ಣ ತಂಡವನ್ನು ಅವರು ಶ್ಲಾಘಿಸಿದರು. ವಿಕಲಚೇತನರ ಕಲ್ಯಾಣಕ್ಕಾಗಿ ಸಂಸ್ಥೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗಣ್ಯರು ಅಂಗವಿಕಲರನ್ನು ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಸಬಲೀಕರಣಗೊಳಿಸುವ ಸಂಸ್ಥಾನದ ಬದ್ಧತೆಯನ್ನು ಶ್ಲಾಘಿಸಿದರು, ಸಮಾಜ ದಲ್ಲಿ ಗೌರವಾನ್ವಿತ ಸ್ಥಾನ ಕಲ್ಪಿಸುವ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿ ಹೇಳಿದರು.

ನಾರಾಯಣ ಸೇವಾ ಸಂಸ್ಥೆಯ ಟ್ರಸ್ಟಿ ಮತ್ತು ನಿರ್ದೇಶಕ ದೇವೇಂದ್ರ ಚೌಬಿಸಾ ಮಾತನಾಡಿ, ನಾರಾ ಯಣ ಸೇವಾ ಸಂಸ್ಥಾನ, ಉಚಿತ ಶಸ್ತ್ರಚಿಕಿತ್ಸೆಗಳು, ಅಂಗಾಂಗ ವಿತರಣೆ, 5,000 ವ್ಯಕ್ತಿಗಳಿಗೆ ದೈನಂ ದಿನ ಊಟ, ನಾರಾಯಣ ಮಕ್ಕಳ ಅಕಾಡೆಮಿಯಲ್ಲಿ 800 ಹಿಂದುಳಿದ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ಕಂಪ್ಯೂಟರ್‌ನಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ, ಮೊಬೈಲ್ ರಿಪೇರಿ, ಟೈಲರಿಂಗ್ ಮತ್ತು ವಿಕಲಾಂಗ ವ್ಯಕ್ತಿಗಳಿಗೆ ಮೆಹೆಂದಿ ಅಪ್ಲಿಕೇಶನ್ ಮತ್ತು ಸಾಮೂಹಿಕ ಸಂಘಟನೆಯನ್ನು ಒಳಗೊಂಡಿ ರುತ್ತದೆ. ಹೊಸ ಜೀವನವನ್ನು ಪ್ರಾರಂಭಿಸಲು ಅವರಿಗೆ ಸಹಾಯ ಮಾಡಲು ಮದುವೆ ಮತ್ತಿತರೆ ಚಟುವಟಿಕೆಗಳ ಕುರಿತು ಬೆಳಕು ಚೆಲ್ಲಿದರು.

ಬೆಂಗಳೂರು ಶಾಖೆಯ ಅಧ್ಯಕ್ಷ ವಿನೋದ್ ಜೈನ್ ಮಾತನಾಡಿ, ಮಕ್ಕಳು, ವಯಸ್ಕರು ಮತ್ತು ಎಲ್ಲಾ ವಯೋಮಾನದ ವ್ಯಕ್ತಿಗಳು ಭಾಗವಹಿಸಿದ್ದರು. ಇದು ಬೆಂಗಳೂರಿನಲ್ಲಿ ನಾರಾಯಣ ಸೇವಾ ಸಂಸ್ಥಾ ನದ ಮೂರನೇ ಶಿಬಿರವಾಗಿದ್ದು, ಜನರಲ್ ಮೋಟಾರ್ಸ್ ಸಿ.ಎಸ್.ಆರ್ ಉಪಕ್ರಮದ ಅಡಿಯಲ್ಲಿ ಬೆಂಬಲಿತವಾಗಿದೆ ಎಂದರು.

ಜನರಲ್ ಮೋಟಾರ್ಸ್‌ನ ಪ್ರತಿನಿಧಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಮುಂಬೈನ ಖುಬಿಲಾಲ್ ಮೆನಾರಿಯಾ ಮತ್ತು ಲಲಿತ್ ಲೋಹರ್, ಹರಿ ಪ್ರಸಾದ್ ಲಾಡ್ಡಾ, ಐಶ್ವರ್ಯಾ ತ್ರಿವೇದಿ ಮತ್ತಿತರರು ಶಿಬರದಲ್ಲಿ ಭಾಗವಹಿಸಿದ್ದರು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್