ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kotak: ಭಾರತೀಯ ಸ್ಟಾರ್ಟ್‌ ಅಪ್‌ ಗಳಿಗೆ ನೆರವಾಗಲು ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಪ್ರೋಗ್ರಾಮ್ ಆರಂಭಿಸಿದ ಕೋಟಕ್

Kotak: ಭಾರತೀಯ ಸ್ಟಾರ್ಟ್‌ ಅಪ್‌ ಗಳಿಗೆ ನೆರವಾಗಲು ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಪ್ರೋಗ್ರಾಮ್ ಆರಂಭಿಸಿದ ಕೋಟಕ್

ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಕಾರ್ಯಕ್ರಮದ ಮೂಲಕ ಸ್ಟಾರ್ಟ್‌ ಅಪ್‌ ಗಳಿಗೆ ಶಕ್ತಿ ತುಂಬುವ, ಬೆಳೆಸುವ ಮತ್ತು ಅಭಿವೃದ್ಧಿಗೊಳಿಸುವ ಕಾರ್ಯ ನಡೆಯಲಿದೆ.ಸಮುದಾಯ ತೊಡಗಿಸಿಕೊಳ್ಳುವಿಕೆಯ ಕಾರ್ಯಕ್ರಮಗಳ ಮೂಲಕ ಅಂದಾಜು 1000ಕ್ಕೂ ಹೆಚ್ಚಿನ ಸ್ಟಾರ್ಟ್ ಅಪ್ ಗಳಿಗೆ ಬಲ ತುಂಬುವ ಉದ್ದೇಶವನ್ನು ಕೋಟಕ್ ಹೊಂದಿದೆ.
ಬೆಂಗಳೂರು: ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ("ಕೆಎಂಬಿಎಲ್"/ "ಕೋಟಕ್") ತನ್ನ ಸಿಎಸ್ಆರ್ ವಿಭಾಗದ ಅಡಿಯಲ್ಲಿ ಹೊಸ ಯೋಜನೆಯಾದ ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲೇಟರ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಈ ಕಾರ್ಯಕ್ರಮದ ಮೂಲಕ ಆರಂಭಿಕ ಹಂತದ ಸ್ಟಾರ್ಟ್ ಅಪ್ ಗಳಿಗೆ ಬಲ ತುಂಬುವ ಉದ್ದೇಶ ಹೊಂದಲಾಗಿದೆ. ಬೆಳವಣಿಗೆ ಹಾದಿಯಲ್ಲಿನ ಸವಾಲುಗಳನ್ನು ಎದುರಿಸಲು ಮತ್ತು ತಮ್ಮ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ಬೆಳೆಸಲು ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಐಐಎಂಎ ವೆಂಚರ್ಸ್, ಎನ್ಎಸ್ಆರ್ಸಿಇಎಲ್ ಮತ್ತು ಟಿ-ಹಬ್ ನಂತಹ ಇನ್ಕ್ಯುಬೇಟರ್‌ ಗಳ ಸಹಯೋಗದೊಂದಿಗೆ ಕೋಟಕ್ ಬಿಸ್ ಲ್ಯಾಬ್ಸ್ ಕಾರ್ಯಕ್ರಮವು ಸ್ಟಾರ್ಟ್ ಅಪ್ ಗಳಿಗೆ ಮಾರ್ಗದರ್ಶನ, ಮಾರುಕಟ್ಟೆ ಪ್ರವೇಶ ಮತ್ತು ಸಲಹಾಸೂಚಿ ಇತ್ಯಾದಿ ಒಳಗೊಂಡಂತೆ ಸೂಕ್ತವಾದ ದಾರಿಯನ್ನು ತೋರಿಸಲಿದೆ.
ಭಾರತೀಯ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ಆಕರ್ಷಕವಾಗಿದ್ದರೂ, ಮಾರುಕಟ್ಟೆ ವಿಸ್ತರಣೆ, ಗ್ರಾಹಕರ ನಂಬಿಕೆ, ಕಾರ್ಯಾಚರಣೆ ಬೆಳವಣಿಗೆ ಮತ್ತು ಪಾಲುದಾರಿಕೆ ಸಾಧಿಸುವ ನಿಟ್ಟಿನಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸು ತ್ತಿದೆ. ಅನೇಕ ಇನ್ಕ್ಯುಬೇಟರ್ ಕಾರ್ಯಕ್ರಮಗಳು ಆರಂಭಿಕ ಹಂತಗಳ (ಐಡಿಯಾ ಮತ್ತು ಕಾನ್ಸೆಪ್ಟ್) ಮೇಲೆ ಮಾತ್ರ ಗಮನಹರಿಸುತ್ತವೆ. ಕೆಲವೇ ಕೆಲವು ಕಾರ್ಯಕ್ರಮಗಳು ಆರಂಭಿಕ ಹಂತದ ಸ್ಟಾರ್ಟಪ್ ಗಳು ಎದುರಿಸುವ ಸ್ಪರ್ಧೆ ಯಲ್ಲಿ ಮುಂದುವರಿಯುವ, ಉತ್ಪನ್ನಗಳನ್ನು ಮಾರುಕಟ್ಟೆಗೆ ತಕ್ಕಂತೆ ಪರಿಷ್ಕರಿಸುವ, ವಿಸ್ತರಣೆಗೆ ಫಂಡಿಂಗ್ ಪಡೆಯುವ ಮತ್ತು ಕಾರ್ಯಾಚರಣೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುತ್ತವೆ.
ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಈ ಸವಾಲುಗಳಿಗೆ ಪರಿಹಾರ ಒದಗಿಸುತ್ತದೆ. ಈ ಕಾರ್ಯಕ್ರಮವು ಅತ್ಯಾಧುನಿಕ ರೀತಿಯ ವೆರವು, ವಿಷಯಾಧಾರಿತ ಕಾರ್ಯಾಗಾರಗಳು, ಪರಿಸರ ವ್ಯವಸ್ಥೆಯ ಮಾಹಿತಿ, ಸ್ಪರ್ಧೆಗಳು, ಮಾರ್ಗದರ್ಶನ, ಪಾಲುದಾರಿಕೆಗಳು, ವ್ಯಾಪಾರ ಅಭಿವೃದ್ಧಿ, ಖಾತರಿ ಸೀಡ್ ಫಂಡಿಂಗ್ ಮತ್ತು ಡೆಮೇ ದಿನಗಳು ಇತ್ಯಾದಿ ವಿಭಾಗಗಳಲ್ಲಿ ಮಾರ್ಗದರ್ಶನ ನೀಡುವ ಮೂಲಕ ನೆರವಾಗಲಿದೆ.
ಕೋಟಕ್ ಬಿಸ್ ಲ್ಯಾಬ್ಸ್ ಅಗ್ರಿಟೆಕ್, ಕ್ಲೈಮೇಚ್, ಫಿನ್‌ಟೆಕ್, ಎಜುಟೆಕ್, ಹೆಲ್ತ್‌ ಕೇರ್ ಮತ್ತು ಸುಸ್ಥಿರತೆಯಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮವು ಅದರ ಸಮಗ್ರ ಸಮುದಾಯ ತೊಡಗಿಸಿಕೊಳ್ಳುವಿಕೆ ಕಾರ್ಯಕ್ರಮಗಳ ಮೂಲಕ ಮಹತ್ವದ ನೆರವನ್ನು ಒದಗಿಸಲಿದೆ.
ಈ ಯೋಜನೆಯು ಅಮೂಲ್ಯವಾದ ನೆಟ್‌ವರ್ಕಿಂಗ್ ಅವಕಾಶಗಳು, ವರ್ಚುವಲ್ ಜ್ಞಾನ ಕೇಂದ್ರ ವ್ಯವಸ್ಥೆ ಲಭ್ಯವಾಗಲಿದೆ. ವಿಶೇಷವಾಗಿ ಸುಮಾರು 1,000 ಸ್ಟಾರ್ಟ್‌ಅಪ್‌ಗಳಿಗೆ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡಿನಾದ್ಯಂತ ಹೈಬ್ರಿಡ್ ಕಾರ್ಯಾಗಾರಗಳನ್ನು ನಡೆಸಲಿದೆ. ಹೆಚ್ಚುವರಿಯಾಗಿ, ಸುಮಾರು 50 ಉನ್ನತ-ಸಾಮರ್ಥ್ಯದ ಸ್ಟಾರ್ಟ್‌ಅಪ್‌ಗಳಿಗೆ ಅತ್ಯುನ್ನತ ಮಟ್ಟದ ನೆರವನ್ನು ಪಡೆಯಲಿವೆ. ಅದರಲ್ಲಿ 30 ಆಯ್ದ ಸ್ಟಾರ್ಟ್‌ಅಪ್‌ಗಳಿಗೆ ತಲಾ ₹15 ಲಕ್ಷದವರೆಗಿನ ಅನುದಾನ ಕೂಡ ದೊರೆಯಲಿದೆ.
ಈ ಕುರಿತು ಮಾತನಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ ನ ಸಿಎಸ್‌ಆರ್ ಮತ್ತು ಇಎಸ್‌ಜಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಹಿಮಾಂಶು ನಿವ್‌ಸರ್ಕರ್ ಮಾತನಾಡಿ, "ಪ್ರಾರಂಭಿಕ ಹಂತದ ಸ್ಟಾರ್ಟ್‌ ಅಪ್‌ ನಿಂದ ಶುರುವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಉದ್ದಿಮೆ ಎಂದು ಕರೆಸಿಕೊಳ್ಳುವವರೆಗಿನ ಪ್ರಯಾಣವು ಬಹಳ ಸವಾಲಿನಿಂದ ಕೂಡಿರುತ್ತದೆ. ಫಂಡಿಂಗ್ ಅನ್ನು ಮೀರಿ, ಸ್ಟಾರ್ಟ್‌ಅಪ್‌ಗಳಿಗೆ ತಮ್ಮ ಬೆಳವಣಿಗೆ ಸಾಧಿಸಲು ಬೇಕಾದ ವಿಶೇಷ ಬೆಂಬಲ, ಮಾರ್ಗದರ್ಶನ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳ ಅಗತ್ಯವಿದೆ ಎಂದು ಕೋಟಕ್‌ ನಂಬುತ್ತದೆ.
ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಕಾರ್ಯಕ್ರಮವು ಭಾರತದಲ್ಲಿ ಸ್ವಯಂ ಉದ್ಯೋಗಿ ವಿಭಾಗದ ಉತ್ಸಾಹ ವನ್ನು ಪ್ರೋತ್ಸಾಹಿಸುವ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಬದ್ಧತೆಗೆ ಸಾಕ್ಷಿಯಾಗಿದೆ. ಈ ಯೋಜನೆಯು ಮಹತ್ವಾಕಾಂಕ್ಷಿ ಭಾರತೀಯರ ಕನಸುಗಳಿಗೆ ಉತ್ತೇಜನ ನೀಡಲು, ಹೊಸತನಕ್ಕೆ ಪ್ರೋತ್ಸಾಹ ನೀಡಲು ಮತ್ತು ಸ್ವಯಂ-ಉದ್ಯೋಗಿ ವಿಭಾಗಕ್ಕೆ ಅತ್ಯುತ್ತಮ ವ್ಯವಸ್ಥೆಯನ್ನು ಒದಗಿಸುವ ಕೋಟಕ್‌ನ ದೃಷ್ಟಿಗೆ ಪೂರಕವಾಗಿ ರೂಪುಗೊಂಡಿದೆ. ಉನ್ನತ ಇನ್ಕ್ಯುಬೇಟರ್‌ಗಳ ಸಹಯೋಗದೊಂದಿಗೆ, ಕೋಟಕ್ ಬಿಸ್ ಲ್ಯಾಬ್ಸ್ 1000 ಸ್ಟಾರ್ಟ್‌ ಅಪ್‌ಗಳಿಗೆ ನೆರವಾಗುವ ಗುರಿಯನ್ನು ಹೊಂದಿದೆ ಮತ್ತು ಮುಂದಿನ ಉದ್ಯಮದ ನಾಯಕರನ್ನು ಬೆಂಬಲಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಈ ಮೂಲಕ ಭಾರತದ ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಸಮೃದ್ಧಿಗೆ ಕೊಡುಗೆ ನೀಡುತ್ತದೆ" ಎಂದು ಹೇಳಿದರು.
ಎನ್‌ಎಸ್‌ಆರ್‌ಸಿಇಎಲ್‌ ಸಿಇಓ ಶ್ರೀ ಆನಂದ್ ಶ್ರೀ ಗಣೇಶ್ ಮಾತನಾಡಿ, “ಹೊಸತನವನ್ನು ಪ್ರೋತ್ಸಾಹಿಸುವ ಮತ್ತು ಸುಸ್ಥಿರ ಬೆಳವಣಿಗೆಯನ್ನು ಆಗುಗೊಳಿಸುವ ಕೆಲಸವು ಭಾರಿ ಸಾಮರ್ಥ್ಯವನ್ನು ಹೊಂದಿರುವ ಸ್ಟಾರ್ಟಪ್ ಗಳನ್ನು ಪ್ರೋತ್ಸಾಹಿಸುವುದರಲ್ಲಿ ಇದೆ ಎಂದು ಎನ್‌ಎಸ್‌ಆರ್‌ಸಿಇಎಲ್‌ ನಂಬುತ್ತದೆ. ಹಾಗಾಗಿ ಅವುಗಳಿಗೆ ಸೂಕ್ತ ಪ್ರಮಾಣದ ಸಂಪನ್ಮೂಲಗಳು, ಮಾರ್ಗದರ್ಶನ ಮತ್ತು ಪಾಲುದಾರಿಕೆಗಳ ಅಗತ್ಯ ಇರುತ್ತದೆ. ಮುಂದಿನ ಪೀಳಿಗೆಯ ದಾರ್ಶನಿಕ ಉದ್ಯಮಿಗಳನ್ನು ಬೆಂಬಲಿಸುವಲ್ಲಿ ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಕಾರ್ಯಕ್ರಮದೊಂದಿಗೆ ಸಹಯೋಗ ಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಇನ್ ಕ್ಯುಬೇಷನ್ ಪರಿಣತಿ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಸಶಕ್ತಗೊಳಿಸುವ ಕೋಟಕ್‌ನ ಬದ್ಧತೆಯು ಪರಿಸ್ಪರ ಹೊಂದಿಕೊಂಡು ಸ್ಟಾರ್ಟಪ್ ಗಳನ್ನು ಸಬಲೀಕರಣಗೊಳಿಸುವ
ಕೆಲಸ ಮಾಡಲಿದೆ. ಈ ಮೂಲಕ ಐಡಿಯಾಗಳನ್ನು ಬೆಳೆಸಲು, ಉದ್ದಿಮೆ ಅಭಿವೃದ್ಧಿ ಹೊಂದಲು ಮತ್ತು ನಾಳಿನ ನಾಯಕರು ಹೊರಹೊಮ್ಮಲು ಸೂಕ್ತ ವಾತಾವರಣವನ್ನು ಸೃಷ್ಟಿಸಲಾಗುತ್ತದೆ" ಎಂದು ಹೇಳಿದರು.
ಐಐಎಂಎ ವೆಂಚರ್ಸ್‌ ನ ಇನ್‌ಕ್ಯುಬೇಶನ್‌ನ ಪಾಲುದಾರರಾದ ಚಿಂತನ್ ಬಕ್ಷಿ ಮಾತನಾಡಿ , “ಭಾರತದ ಬೆಳೆಯುತ್ತಿರುವ ಸ್ಟಾರ್ಟ್‌ಅಪ್ ಹಬ್‌ಗಳಾದ ಟೈರ್ 2 ಮತ್ತು 3 ಕೇಂದ್ರಗಳಿಂದ ಅದರಲ್ಲೂ ವಿಶೇಷವಾಗಿ ಸಶಕ್ತ ಸ್ಟಾರ್ಟಪ್ ವಾತಾವರಣ ಹೊಂದಿರುವ ಅಹಮದಾಬಾದ್, ಇಂದೋರ್ ಮತ್ತು ಜೈಪುರದಿಂದ ಬರುತ್ತಿರುವ ಉದ್ಯಮಶೀಲ ಶಕ್ತಿ ಮತ್ತು ಪ್ರತಿಭೆಗಳನ್ನು ನಾವು ಐಐಎಂಎ ವೆಂಚರ್ಸ್‌ನಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಟೈರ್-2 ಮತ್ತು ಟೈರ್-3 ಪ್ರದೇಶಗಳ ಬಳಕೆಯಾಗದ ಸಾಮರ್ಥ್ಯವನ್ನು ಬಳಸುತ್ತಿರುವುದಕ್ಕೆ ಈ ನಗರಗಳು ಉತ್ತಮ ಉದಾಹರಣೆಯಾಗಿದ್ದು, ಅಲ್ಲಿನ ಸ್ಟಾರ್ಟಪ್ ಗಳ ಸಂಸ್ಥಾಪಕರು ಸ್ಥಳೀಯ ಮತ್ತು ಜಾಗತಿಕ ಸವಾಲುಗಳಿಗೆ ನವೀನ ಪರಿಹಾರಗಳನ್ನು ಒದಗಿಸುತ್ತಿದ್ದಾರೆ.
ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಕಾರ್ಯಕ್ರಮವು ಈ ಪ್ರದೇಶಗಳಲ್ಲಿನ ಆರಂಭಿಕ ಹಂತದ ಉದ್ಯಮಿಗಳಿಗೆ ಅವಶ್ಯ ಮತ್ತು ಉದ್ದೇಶಿತ ನೆರವನ್ನು ಒದಗಿಸಲಿದೆ. ಮಹಾನಗರಗಳ ಆಚೆ ನೋಡುವ ಮೂಲಕ ಈ ಯೋಜನೆಯು ಸಂಪನ್ಮೂಲಗಳು ಮತ್ತು ಮಾರ್ಗದರ್ಶನ ಅವಕಾಶ ಹೊಂದಿರದ ಸ್ಟಾರ್ಟ್‌ ಅಪ್‌ ಗಳಿಗೆ ಒಳಗೊಳ್ಳುವಿಕೆ ಅವಕಾಶ ಮತ್ತು ಮಾರ್ಗದರ್ಶನ, ನೆರವು ಒದಗಿಸುತ್ತದೆ. ಜೊತೆಯಾಗಿ ನಾವು ಹೊಸ ಆಲೋಚನೆಗಳಿಗೆ, ಪರಿಕಲ್ಪನೆಗಳಿಗೆ ಬಲ ತುಂಬುವ ಗುರಿಯನ್ನು ಹೊಂದಿದ್ದೇವೆ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿ ಹೊಂದಲು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಅರ್ಥಪೂರ್ಣ ಕೊಡುಗೆ ನೀಡಲು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಟಿ-ಹಬ್‌ನ ಹಂಗಾಮಿ ಸಿಇಓ ಸುಜಿತ್ ಜಾಗೀರದಾರ್ ಅವರು , "ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಕಾರ್ಯಕ್ರಮಕ್ಕಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್‌ ನೊಂದಿಗೆ ಪಾಲುದಾರಿಕೆ ಹೊಂದಲು ಟಿ-ಹಬ್ ಉತ್ಸುಕವಾಗಿದೆ. ಈ ಯೋಜನೆಯು ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಪರಿವರ್ತಕ ಯೋಜನೆಯಾಗಿದೆ. ಕೋಟಕ್‌ ನ ದೃಷ್ಟಿ ಮತ್ತು ಟಿ-ಹಬ್ ನ ಪರಿಣತಿಯನ್ನು ಬಳಸಿ ಸ್ಟಾರ್ಟ್‌ಅಪ್‌ಗಳಿಗೆ ಸೂಕ್ತ ಸಂಪನ್ಮೂಲಗಳನ್ನು ಪಡೆಯಲು, ಮಾರ್ಗದರ್ಶನ ನೀಡಲು, ಉತ್ತಮ ಸಂಪರ್ಕ ಒದಗಿಸಲವು ಮತ್ತು ಉತ್ತಮ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಜೊತೆಯಾಗಿ ಸುಸ್ಥಿರ ವ್ಯವಹಾರಗಳನ್ನು ಸಾಧಿಸಲು ಮತ್ತು ಭಾರತದ ನಾವೀನ್ಯತೆಯ ಕ್ಷೇತ್ರಕ್ಕೆ ಕೊಡುಗೆ ನೀಡಲು ನಾವು ಸ್ಟಾರ್ಟ್‌ಅಪ್‌ಗಳನ್ನು ಸಜ್ಜುಗೊಳಿಸಲು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.
ಮಹತ್ವಾಕಾಂಕ್ಷಿ ಸ್ಟಾರ್ಟ್‌ಅಪ್‌ಗಳು ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಪ್ರೋಗ್ರಾಂಗೆ ಇಲ್ಲಿ ಅರ್ಜಿ ಸಲ್ಲಿಸಬಹುದು- https://kotakbizlabs.accubate.app/ext/form/2802/1/apply