ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Bangalore News: ವಿಧಾನ ಪರಿಷತ್ ಗೆ ಕೆ.ಎಂ.ರಾಮಚಂದ್ರಪ್ಪ ನಾಮನಿರ್ದೇಶನಕ್ಕೆ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ

Bangalore News: ವಿಧಾನ ಪರಿಷತ್ ಗೆ ಕೆ.ಎಂ.ರಾಮಚಂದ್ರಪ್ಪ ನಾಮನಿರ್ದೇಶನಕ್ಕೆ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ

Profile Ashok Nayak Jan 10, 2025 10:39 AM
ಬೆಂಗಳೂರು: ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಸಮಾಜದ ಹಿರಿಯ ಮುಖಂಡರಾದ ಕೆ.ಎಂ. ರಾಮಚಂದ್ರಪ್ಪನವರನ್ನು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹಿಸಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ, ಕಾರ್ಯಾಧ್ಯಕ್ಷ ಬಸವರಾಜ ಲ ಬಸಲಿಗುಂದಿ, ಎಂ.ವಿ.ಸೋಮಶೇಖರ್ ಮಾತನಾಡಿ, ಕೆ.ಎಂ.ರಾಮ ಚಂದ್ರಪ್ಪನವರು ರಾಜ್ಯದ ಕುರುಬ ಸಮಾಜದ ಹಿರಿಯ ನಾಯಕರಾಗಿದ್ದು,ಕುರುಬರ ಸಂಘದ ಪ್ರಧಾನ ಕಾರ್ಯ ದರ್ಶಿಯಾಗಿ ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸಿ ಸಂಘವನ್ನು ಅಭಿವೃದ್ಧಿ ಪಡಿಸುವಲ್ಲಿ ಸಿಂಹಪಾಲು ಅವರಾದಾಗಿದೆ, 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗುವ ಅವಧಿಯಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡಿ ಸಮಾಜವನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಜಾಗೃತಿ ಮೂಡಿಸಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಶ್ರಮ ಹಾಕಿದ್ದಾರೆ ಅದೇ ರೀತಿ ಎರಡನೇ 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಮತ ಹಾಕುವಲ್ಲಿ ಪ್ರಮಾಣಕ ಪ್ರಯತ್ನ ನಡೆಸಿದ್ದಾರೆ ಎಂದರು.
ಕೆ.ಎಂ.ರಾಮಚಂದ್ರಪ್ಪನವರು ರಾಜ್ಯದ ಎಲ್ಲ ವರ್ಗದವರನ್ನು ವಿಶ್ಚಾಸಕ್ಕೆ ತೆಗೆದುಕೊಂಡು ರಾಜ್ಯ ಮಟ್ಟದ ಕಾರ್ಯಕ್ರಮ ಮತ್ತು ಹೋರಾಟಗಳನ್ನು ಮಾಡಿದ್ದಾರೆ ಈ ಹಿನ್ನಲೆಯಲ್ಲಿ ಅವರನ್ನು ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಢಿಯಲ್ಲಿ ಕೆ.ಎಂ.ಕೃಷ್ಣಮೂರ್ತಿ, ಕೆ.ವೆಂಕಟ ಸುಬ್ಬರಾಜು, ಆರ್.ರಾಮಕೃಷ್ಣಪ್ಪ, ಜಿ.ಡಿ.ಗೋಪಾಲ್, ಮಹಾಂತೇಶ್ ಕೌಲಗಿ ಮತ್ತಿತರರು ಹಾಜರಿದ್ದರು.