-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಸಾಫ್ಟ್ ಸ್ಯಾಟಿನ್‌ನಲ್ಲಿ ಕೋ ಆರ್ಡ್ ಸೆಟ್‌ಗಳು ಬಂದಿವೆ. ಸೆಲೆಬ್ರೆಟಿ ಸ್ಟಾರ್‌ಗಳಂತೆ ಬಿಂಬಿಸುವ ಸ್ಯಾಟಿನ್ ಕೋ ಆರ್ಡ್ ಸೆಟ್‌ಗಳು (Satin Co-ord Set Fashion 2026), ಈ ಸೀಸನ್‌ನ ಪಾರ್ಟಿ ಪ್ರಿಯರನ್ನು ಮಾತ್ರ ಸೆಳೆದಿರುವುದಲ್ಲದೇ ಜೆನ್ ಜಿ ಯುವತಿಯರನ್ನು ಆಕರ್ಷಿಸಿವೆ. ಸೆಲೆಬ್ರೆಟಿ ಲುಕ್ ಬಯಸುವವರನ್ನು ಸಖತ್ತಾಗಿ ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್ ರಿಚಾ.
ಆಮ್ನಾ ಷರೀಫ್ ಸ್ಯಾಟಿನ್ ಕೋ ಆರ್ಡ್ ಸೆಟ್
ಇದಕ್ಕೆ ಪೂರಕ ಎಂಬಂತೆ, ನಟಿ ಆಮ್ನಾ ಷರೀಫ್‌ರ ಫ್ಯಾಷನ್ ಫೋಟೋ ಶೂಟ್‌ನಲ್ಲಿ, ಅವರು ಧರಿಸಿದ್ಧ ಡಿಸೈನರ್ ಸ್ಯಾಟಿನ್ ಕೋ ಆರ್ಡ್ ಸೆಟ್ ಇದೀಗ ಫ್ಯಾಷನ್ ಲೋಕದಲ್ಲಿ ವೈರಲ್ ಆಗಿದೆ. ಅಲ್ಲದೇ, ಪಾರ್ಟಿ ಪ್ರಿಯರನ್ನು ಸೆಳೆದಿದೆ. ಪರಿಣಾಮ, ಈಗಾಗಲೇ ಆನ್‌ಲೈನ್ ಶಾಪ್‌ಗಳಲ್ಲೂ ಬಿಕರಿಗೊಳ್ಳಲು ಕಾರಣವಾಗಿದೆ. ಅದರಲ್ಲೂ ಈ ಡಿಸೈನರ್ ಮೆಟಾಲಿಕ್ ಶೇಡ್ ಕೋ ಆರ್ಡ್ ಸೆಟ್ ಸದ್ಯ ಟ್ರೆಂಡ್ ಲಿಸ್ಟ್‌ನಲ್ಲೂ ನುಸುಳಿದೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರಾದ ಮಿಂಚು.
ಮೆಟಾಲಿಕ್ ಸ್ಯಾಟಿನ್ ಕೋ ಆರ್ಡ್ ಸೆಟ್ ಮ್ಯಾಜಿಕ್
ಅಂದಹಾಗೆ, ನಟಿ ಆಮ್ನಾ ಧರಿಸಿದ್ದ ಮೆಟಾಲಿಕ್ ಶೇಡ್‌ನ ಸ್ಯಾಟಿನ್ ಕೋ ಆರ್ಡ್ ಸೆಟ್ ಹೈಲೈಟ್ ಆಗಲು ಕಾರಣ, ಡ್ರೆಸ್‌ನ ಸಿಂಪಲ್ ಡಿಸೈನ್ ಹಾಗೂ ಮೆಟೀರಿಯಲ್ ಎನ್ನುತ್ತಾರೆ ಸ್ಟೈಲಿಸ್ಟ್ ಜಿನ್.
ಸ್ಯಾಟಿನ್ ಕೋ ಆರ್ಡ್ ಸೆಟ್ ವಿಶೇಷತೆ
ಎಲ್ಲರಿಗೂ ಗೊತ್ತಿರುವಂತೆ, ನಟಿ ಅಮ್ನಾ ಧರಿಸಿರುವ ಸ್ಯಾಟಿನ್ ಕೋ ಆರ್ಡ್ ಸೆಟ್ ಬ್ರಾನ್ಜ್ ಶೇಡ್‌ನದ್ದಾಗಿದ್ದು, ವಿ ನೆಕ್‌ಲೈನ್, ಫ್ಲೇರ್ ಸ್ಲೀವ್ ಜೊತೆಗೆ ಟಾಪ್ ಟೈ ಮಾಡುವಂತಹ ಕ್ರಾಪ್ ಟಾಪ್ ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇದರೊಂದಿಗೆ ಅಮ್ನಾ ಧರಿಸಿರುವ ಹೈ ವೇಸ್ಟ್ ಮ್ಯಾಕ್ಸಿ ಸ್ಕರ್ಟ್, ಇಡೀ ಲುಕ್‌ನ ಅಂದ ಮತ್ತಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
Saree Fashion 2026: ಪಾರ್ಟಿ ಪ್ರಿಯ ಯುವತಿಯರಿಗಾಗಿ ಬಂತು ಓಂಬ್ರೆ ಸಿಕ್ವೀನ್ಸ್ ಸೀರೆಗಳು
ಸ್ಯಾಟಿನ್ ಕೋ ಆರ್ಡ್ ಸೆಟ್ ಪ್ರಿಯರ ಗಮನದಲ್ಲಿರಲಿ
- ಸಾಫ್ಟ್ ಫ್ಯಾಬ್ರಿಕ್‌ನ ಈ ಸೆಟ್ ಬಾಡಿ ಮಾಸ್ ಇಂಡೆಕ್ಸನ್ನು ಹೈಲೈಟ್ ಮಾಡುತ್ತದೆ.
- ಪಾರ್ಟಿ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಡ್ರೆಸ್.
- ಹೆಚ್ಚು ಮೆಕೋವರ್ ಬೇಕಾಗಿಲ್ಲ!
- ಸಿಂಪಲ್ ಆಕ್ಸೆಸರೀಸ್ ಧರಿಸಿದರೇ ಸಾಕು!
- ಫಿಟ್ಟಿಂಗ್ ಇರುವ ಸೆಟ್ ಆಯ್ಕೆ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)