Winter Cape Dress Fashion: ಹೊಸ ವಿನ್ಯಾಸದಲ್ಲಿ ಎಂಟ್ರಿ ಕೊಟ್ಟ ಕೇಪ್ ಡಿಸೈನರ್‌ವೇರ್ಸ್
ಬದಲಾದ ಈ ಸೀಸನ್‌ನ ಫ್ಯಾಷನ್‌ನಲ್ಲಿ ಹೊಸ ವಿನ್ಯಾಸದಲ್ಲಿ, ಕೇಪ್ ಡ್ರೆಸ್‌ಗಳು ಎಂಟ್ರಿ ನೀಡಿವೆ. ಹಾಗಾದರೆ ಯಾವ್ಯಾವ ಡಿಸೈನ್‌ನವು ಚಾಲ್ತಿಯಲ್ಲಿವೆ? ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು? ಈ ಬಗ್ಗೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್ ಫ್ಯಾಷನ್‌ನಲ್ಲಿ ಹೊಸ ವಿನ್ಯಾಸದ ಕೇಪ್ ಡ್ರೆಸ್‌ಗಳು (Winter Cape Dress Fashion) ಎಂಟ್ರಿ ನೀಡಿವೆ. ಕೇಪ್ ಡ್ರೆಸ್‌ಗಳು (Cape Dress) ಸೆಲೆಬ್ರೆಟಿ ಲುಕ್ ನೀಡುತ್ತವೆ ಎಂಬ ಕಾರಣದಿಂದಾಗಿ ಈ ಸೀಸನ್‌ನಲ್ಲಿ ಇವುಗಳ ಮಾರಾಟ ಹೆಚ್ಚಾಗಿದೆ. ನೋಡಲು ಆಕರ್ಷಕವಾಗಿ ಕಾಣುವ ಇವು ಎಲ್ಲ ವರ್ಗದ ಮಹಿಳೆಯರು ಹಾಗೂ ಯುವತಿಯರಿಗೆ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಶಿ. ಅವರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಇವುಗಳ ಅತಿ ಹೆಚ್ಚು ಡಿಸೈನ್‌ಗಳು ಬಂದಿದ್ದು, ಯುವತಿಯರನ್ನು ಸೆಳೆಯುತ್ತಿವೆ ಎನ್ನುತ್ತಾರೆ.

ಕೇಪ್ ಡಿಸೈನರ್‌ವೇರ್ಸ್ ಹಿನ್ನೆಲೆ
ಡಿಸೈನರ್‌ಗಳು ಹೇಳುವಂತೆ, ಕೇಪ್ ವಿನ್ಯಾಸ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಟ್ರೆಂಡಿಯಾಗಿತ್ತು. ಬರಬರುತ್ತಾ ಈ ವಿನ್ಯಾಸದಲ್ಲಿ ಬದಲಾವಣೆಗಳು ಹೆಚ್ಚಾಗಿ, ಹೊಸ ರೂಪ ಪಡೆದವು. 19 ಹಾಗೂ 20ನೇ ಶತಮಾನದಲ್ಲಿಆರಂಭಗೊಂಡ ಈ ವಿನ್ಯಾಸದ ಉಡುಪುಗಳು ರಾಯಲ್ ಫ್ಯಾಮಿಲಿಯ ಮಹಿಳೆಯರ ಭುಜವನ್ನು ಸುತ್ತುವರಿದಿರುತ್ತಿದ್ದವು. ಕೇಪ್ ಶೈಲಿಯಲ್ಲಿ, ರೆಕ್ಕೆಯಂತೆ ಕಾಣುವ ಸ್ಲೀವ್ ಡಿಸೈನ್‌ಗಳು ಪ್ರತಿಷ್ಠಿತ ಮಹಿಳೆಯರ ವಾರ್ಡ್ರೋಬ್‌ನಲ್ಲಿ ಜಾಗ ಪಡೆದುಕೊಂಡಿದ್ದವು. ಅಂದು, ಒಂದು ಸಮುದಾಯದವರು ಧರಿಸುತ್ತಿದ್ದ ಈ ಉಡುಪು ಇದೀಗ ರೂಪು-ರೇಷೆ ಬದಲಿಸಿಕೊಂಡು, ಹೊಸತನ ರೂಢಿಸಿಕೊಂಡು ನಯಾ ಡಿಸೈನ್‌ನಲ್ಲಿ, ಎಲ್ಲರೂ ಧರಿಸುವಂತಹ ಡಿಸೈನ್‌ನಲ್ಲಿ ಮೂಡಿ ಬರತೊಡಗಿವೆ. ಇದು ಕೇಪ್ ಡ್ರೆಸ್ ಜನಪ್ರಿಯವಾಗಲು ಕಾರಣ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.

ಫ್ಯಾಷನ್ ಶೋಗಳ ಮೂಲಕ ಪಾಪುಲರ್ ಆದ ಕೇಪ್ ಗೌನ್ಸ್
ಅಂದಹಾಗೆ, ಫ್ಯಾಷನ್ ರ‍್ಯಾಂಪ್ ಶೋಗಳ ಮೂಲಕ ಕೇಪ್ ಡ್ರೆಸ್‌ಗಳು ಪಾಪುಲರ್ ಆದವು. ನಂತರ, ಫ್ಯಾಷನ್ ಪ್ರಿಯರು ಇವುಗಳನ್ನು ತಮ್ಮದೇ ಆದ ಶೈಲಿಯಲ್ಲಿ ಡಿಸೈನ್ ಮಾಡಿಸಿ, ಧರಿಸಲಾರಂಭಿಸಿದರು. ಡಿಸೈನ್‌ಗೆ ನಾನಾ ಆಯಾಮಗಳನ್ನು ನೀಡಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿ ಬಿಡುಗಡೆಗೊಳ್ಳಲು ಕಾರಣವಾಯಿತು ಎನ್ನುತ್ತಾರೆ ಡಿಸೈನರ್‌ಗಳು.
ಈ ಸುದ್ದಿಯನ್ನೂ ಓದಿ: Jewel Fashion 2025: ಸೆಲೆಬ್ರಿಟಿ ಲುಕ್‌ಗಾಗಿ ಶಾಂಡೆಲಿಯರ್ ಇಯರಿಂಗ್ಸ್ ಧರಿಸಿ
ಕೇಪ್ ಡಿಸೈನರ್‌ವೇರ್ ಸ್ಟೈಲಿಂಗ್‌ಗೆ ಸಿಂಪಲ್ ಟಿಪ್ಸ್
* ಉದ್ದವಾಗಿರುವವರಿಗೆ ಕೇಪ್ ಡ್ರೆಸ್‌ಗಳು ಆಕರ್ಷಕವಾಗಿ ಕಾಣುತ್ತವೆ.
* ಹೈಟ್‌ಗೆ ತಕ್ಕಂತೆ ಕೇಪ್ ಲೆಂಥ್ ಇರುವುದು ಅಗತ್ಯ.
* ಯಾವುದೇ ಕಾರಣಕ್ಕೂ ಈ ಉಡುಪಿನ ಜತೆ ಫ್ಲ್ಯಾಟ್ ಧರಿಸಬೇಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)