ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indians Missing: ದೇವಸ್ಥಾನಕ್ಕೆ ಹೋದವರು ತಿರುಗಿ ಬರಲೇ ಇಲ್ಲ... ಅಮೆರಿಕದಲ್ಲಿ ಭಾರತೀಯ ಮೂಲದ ನಾಲ್ವರು ಮಿಸ್ಸಿಂಗ್‌!

Indian-origin senior citizens Missing: ನ್ಯೂಯಾರ್ಕ್‌ನ ಬಫೆಲೋ ಪ್ರದೇಶದಿಂದ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ಗೆ ರಸ್ತೆ ಮೂಲಕ ತೆರಳಿದ್ದ ನಾಲ್ವರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದ್ದಾರೆ. ಇನ್ನು ಕಳೆದ ಆರು ದಿನಗಳಿಂದ ನಾಪತ್ತೆಯಾಗಿರುವ ನಾಲ್ವರನ್ನು ಆಶಾ ದಿವಾನ್‌(85), ಕಿಶೋರ್‌ ದಿವಾನ್‌(89), ಶೈಲೇಶ್‌ ದಿವಾನ್‌(86) ಮತ್ತು ಗೀತಾ ದಿವಾನ್‌(84) ಎಂದು ಗುರುತಿಸಲಾಗಿದೆ.

ನ್ಯೂಯಾರ್ಕ್‌: ಅಮೆರಿಕದಲ್ಲಿ ದೇವಸ್ಥಾನಕ್ಕೆಂದು ಹೋದ ನಾಲ್ವರು ಭಾರತೀಯ ಮೂಲದ ವೃದ್ಧರು(Indians Missing) ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ನ್ಯೂಯಾರ್ಕ್‌ನ ಬಫೆಲೋ ಪ್ರದೇಶದಿಂದ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ಗೆ ರಸ್ತೆ ಮೂಲಕ ತೆರಳಿದ್ದ ನಾಲ್ವರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದ್ದಾರೆ. ಇನ್ನು ಕಳೆದ ಆರು ದಿನಗಳಿಂದ ನಾಪತ್ತೆಯಾಗಿರುವ ನಾಲ್ವರನ್ನು ಆಶಾ ದಿವಾನ್‌(85), ಕಿಶೋರ್‌ ದಿವಾನ್‌(89), ಶೈಲೇಶ್‌ ದಿವಾನ್‌(86) ಮತ್ತು ಗೀತಾ ದಿವಾನ್‌(84) ಎಂದು ಗುರುತಿಸಲಾಗಿದೆ. ಇನ್ನು ನಾಪತ್ತೆಯಾಗಿರುವ ವ್ಯಕ್ತಿಯೊಬ್ಬರ ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಈ ನಾಲ್ವರು ಕೊನೆಯದಾಗಿ ಪೆನ್ಸಿಲ್ವೇನಿಯಾದ ಎರಿಯಲ್ಲಿರುವ ಪೀಚ್ ಸ್ಟ್ರೀಟ್‌ನಲ್ಲಿರುವ ಬರ್ಗರ್‌ ಕಿಂಗ್‌ ಶಾಪ್‌ನಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Student Missing: ಆರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವ ಯಮುನಾ ನದಿಯಲ್ಲಿ ಪತ್ತೆ

ಅವರು ನ್ಯೂಯಾರ್ಕ್‌ನ ಬಫಲೋದಿಂದ ಪಶ್ಚಿಮ ವರ್ಜೀನಿಯಾದ ಮಾರ್ಷಲ್ ಕೌಂಟಿಯಲ್ಲಿರುವ ಪ್ರಭುಪಾದರ ಪ್ಯಾಲೇಸ್ ಆಫ್ ಗೋಲ್ಡ್‌ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇನ್ನು ಅವರು ನ್ಯೂಯಾರ್ಕ್ ಪರವಾನಗಿ ಫಲಕ EKW2611 2009 ರ ಲೈಮ್ ಗ್ರೀನ್ ಟೊಯೋಟಾ ಕಾರಿನಲ್ಲಿ ತೆರಳಿದ್ದರು.

ಅವರನ್ನು ಕೊನೆಯ ಬಾರಿಗೆ ಪೆನ್ಸಿಲ್ವೇನಿಯಾದ ಬರ್ಗರ್ ಕಿಂಗ್‌ನಲ್ಲಿ ಅನೇಕ ನೋಡಿದ್ದಾರೆ. ಅಲ್ಲಿಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಇಬ್ಬರು ರೆಸ್ಟೋರೆಂಟ್‌ಗೆ ಪ್ರವೇಶಿಸುವುದನ್ನು ಕಂಡು ಬಂದಿದೆ. ಅಲ್ಲದೇ ಅವರ ಕ್ರೆಡಿಟ್ ಕಾರ್ಡ್ ಕೊನೆಯ ವಹಿವಾಟು ಕೂಡ ಅದೇ ಸ್ಥಳದಲ್ಲಿ ಪತ್ತೆಯಾಗಿದೆ. ಇನ್ನು ನಾಪತ್ತೆಯಾಗಿರುವ ವೃದ್ಧರಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ.

ಸ್ಥಳೀಯ ಅಧಿಕಾರಿ ಮೈಕ್ ಡೌಘರ್ಟಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಜುಲೈ 31, 2025 ರಿಂದ ‍ನಾಲ್ವರು ವೃದ್ಧರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ನಾಪತ್ತೆಯಾಗಿರುವ ನಾಲ್ವರ ಬಗ್ಗೆ ನಮಗೆ ಕೆಲವು ಸುಳಿವುಗಳು ಸಿಕ್ಕಿವೆ. ನಾವು ಮತ್ತು ಸುತ್ತಮುತ್ತಲಿನ ಕಾನೂನು ಜಾರಿ ಸಂಸ್ಥೆಗಳು ತನಿಖೆ ನಡೆಸುತ್ತಿವೆ, ಆದರೆ ಕಾಣೆಯಾದ ವ್ಯಕ್ತಿಗಳನ್ನು ಇನ್ನೂ ಪತ್ತೆ ಮಾಡಿಲ್ಲ. ಹೆಲಿಕಾಪ್ಟರ್‌ಗಳು ಮತ್ತು ಶೋಧ ತಂಡಗಳು ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಕಾಣೆಯಾದ ನಾಲ್ವರು ಜನರ ಬಗ್ಗೆ ಮಾಹಿತಿ ಇರುವ ಯಾರಾದರೂ ಮಾರ್ಷಲ್ ಕೌಂಟಿ ಶೆರಿಫ್ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.