ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pak Admiral: ಭಾರತದ ಕಡಲ ತೀರದ ಗಡಿಗೆ ಭೇಟಿ ನೀಡಿದ ಪಾಕಿಸ್ತಾನದ ನೌಕಾಪಡೆ ಮುಖ್ಯಸ್ಥ

Pak Admiral Naveed Ashraf: ಭಾರತದ ಗಡಿಯಲ್ಲಿರುವ ವಿವಾದಿತ ಕ್ರೀಕ್ ಪ್ರದೇಶಗಳಿಗೆ ಪಾಕಿಸ್ತಾನದ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ನವೀದ್ ಅಶ್ರಫ್ ಭೇಟಿ ನೀಡಿದ್ದಾರೆ ಎಂದು ಉನ್ನತ ಗುಪ್ತಚರ ಮೂಲಗಳು ದೃಢಪಡಿಸಿವೆ. ಇದು ವಿವಾದಿತ ಕಡಲ ವಲಯಗಳಲ್ಲಿ ಮಿಲಿಟರಿ ಉಪಸ್ಥಿತಿಯನ್ನು ಪ್ರದರ್ಶಿಸುವ ಪ್ರಯತ್ನವಾಗಿದೆ ಎಂದು ಹೇಳಿರುವ ಭಾರತ ಪಾಕಿಸ್ತಾನದ ನಡೆಯನ್ನು ಖಂಡಿಸಿದೆ.

ನವದೆಹಲಿ: ಕಡಲ ಗಡಿಗಳ ಪ್ರತಿಯೊಂದು ಇಂಚನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿರುವ ಪಾಕಿಸ್ತಾನದ ನೌಕಾಪಡೆಯ ಮುಖ್ಯಸ್ಥ (Pakistan Navy Chief,) ಅಡ್ಮಿರಲ್ ನವೀದ್ ಅಶ್ರಫ್ (Admiral Naveed Ashraf) ಇದೀಗ ಭಾರತದ ಕಡಲ ಗಡಿ ಪ್ರದೇಶದಲ್ಲಿರುವ ವಿವಾದಿತ ಕ್ರೀಕ್ ಪ್ರದೇಶಗಳಲ್ಲಿನ (disputedCreek Areas) ಪಾಕಿಸ್ತಾನದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ. ಇದು ವಿವಾದಾತ್ಮಕ ಪ್ರದೇಶವನ್ನು ಪಡೆಯಲು ಪಾಕಿಸ್ತಾನ ನಡೆಸುತ್ತಿರುವ ಸಂಚು. ಇದಕ್ಕಾಗಿ ಅವರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿರುವ ಭಾರತ ಅಡ್ಮಿರಲ್ ಅವರ ಈ ನಡೆಯನ್ನು ಖಂಡಿಸಿದೆ.

ಕರಾವಳಿ ಪ್ರದೇಶದಲ್ಲಿ ಪಾಕಿಸ್ತಾನ ತನ್ನ ನೌಕಾಪಡೆಯ ಕಾರ್ಯಾಚರಣೆಯನ್ನು ಹೆಚ್ಚಿಸಿಕೊಂಡಿದೆ ಹಾಗೂ ಗಣನೀಯ ಪ್ರಮಾಣದಲ್ಲಿ ನವೀಕರಣವನ್ನೂ ಮಾಡಿದೆ. ಅಡ್ಮಿರಲ್ ಅಶ್ರಫ್ ಭೇಟಿಯ ವೇಳೆ ಅಧಿಕೃತವಾಗಿ ಮೂರು ಅತ್ಯಾಧುನಿಕ 2400 ಟಿಡಿ ಹೋವರ್‌ಕ್ರಾಫ್ಟ್‌ಗಳನ್ನು ಪಾಕ್ ಮೆರೈನ್‌ಗಳಿಗೆ ಸೇರಿಸಿಲಾಯಿತು. ಈ ಹೋವರ್‌ಕ್ರಾಫ್ಟ್‌ಗಳನ್ನು ವಿವಿಧ ಸವಾಲಿನ ಭೂಪ್ರದೇಶಗಳಲ್ಲಿ ಏಕಕಾಲದಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅಡ್ಮಿರಲ್ ಅಶ್ರಫ್, ಈ ಹೊಸ ಹೋವರ್‌ಕ್ರಾಫ್ಟ್‌ಗಳ ಸೇರ್ಪಡೆಯು ಪಾಕಿಸ್ತಾನ ನೌಕಾಪಡೆಯ ಶಕ್ತಿಯಾಗಿದೆ. ಇವು ದೇಶದ ಕಡಲ ಗಡಿಗಳು, ಕರಾವಳಿ ಪಟ್ಟಿ ವಿಶೇಷವಾಗಿ ಕ್ರೀಕ್ಸ್ ಪ್ರದೇಶದ ರಕ್ಷಣೆಯನ್ನು ಬಲಪಡಿಸುವಲ್ಲಿ ಅಚಲವಾದ ಸಂಕಲ್ಪವನ್ನು ಹೊಂದಿದೆ ಎಂದು ಅವರು ಹೇಳಿದರು.

ಸಮುದ್ರ ಸಂವಹನ ಮಾರ್ಗಗಳು (SLOC ಗಳು) ಮತ್ತು ಕಡಲ ಭದ್ರತೆಯು ಕೇವಲ ಮಿಲಿಟರಿ ಅವಶ್ಯಕತೆಯಲ್ಲ. ನಮ್ಮ ರಾಷ್ಟ್ರದ ಸಾರ್ವಭೌಮತ್ವದ ಮೂಲಾಧಾರ ಮತ್ತು ಆರ್ಥಿಕ ಸಮೃದ್ಧಿ ಮತ್ತು ಸ್ಥಿರತೆಯ ಪ್ರಮುಖ ಸ್ತಂಭ ಎಂದು ಅವರು ತಿಳಿಸಿದ್ದಾರೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯಲ್ಲಿ ಮುಂಚೂಣಿ ವಹಿಸಿರುವ ಪಾಕಿಸ್ತಾನ ಪ್ರಾದೇಶಿಕ ಕಡಲ ಭದ್ರತೆಗೂ ಗಮನಾರ್ಹ ಕೊಡುಗೆ ನೀಡುತ್ತಿದೆ. ಎಲ್ಲಾ ವಿರೋಧಿಗಳ ವಿರುದ್ಧ ಪರಿಣಾಮಕಾರಿ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡಲು ಹೊಸ ಹೋವರ್‌ಕ್ರಾಫ್ಟ್‌ನ ಸಮರ್ಥವಾಗಿದೆ ಎಂದು ಅವರು ತಿಳಿಸಿದರು.

ಭಾರತ ಖಂಡನೆ

ಅಡ್ಮಿರಲ್ ಅಶ್ರಫ್ ಅವರ ಭೇಟಿಯನ್ನು ಬಲವಾಗಿ ಖಂಡಿಸಿರುವ ಭಾರತ, ಇದು ವಿವಾದಿತ ಕಡಲ ವಲಯಗಳಲ್ಲಿ ಮಿಲಿಟರಿ ಉಪಸ್ಥಿತಿಯನ್ನು ಪ್ರದರ್ಶಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದು ಹೇಳಿದೆ. ಇದೊಂದು ಪ್ರಚೋದನಕಾರಿ ಕ್ರಮವೆಂದು ಪರಿಗಣಿಸಿ ತಕ್ಷಣವೇ ಭಾರತೀಯ ತ್ರಿಪಡೆಗಳ ಜಂಟಿಯಾಗಿ ತಾಲೀಮು ನಡೆಸಬೇಕಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: Dedollarisation: ಡಾಲರ್‌ ಪ್ರಾಬಲ್ಯ ಕ್ರಮೇಣ ತಗ್ಗಿಸಲು ಚೀನಾ ಮಾಸ್ಟರ್‌ ಪ್ಲ್ಯಾನ್‌

ಇಲ್ಲಿ ಪಾಕಿಸ್ತಾನದ ಉನ್ನತ ಮಟ್ಟದ ನೌಕಾ ಚಟುವಟಿಕೆಯು ಉದ್ವಿಗ್ನತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೇ ಸರ್ ಕ್ರೀಕ್ ವಿವಾದವನ್ನು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಬಿಂಬಿಸಲು ಇಸ್ಲಾಮಾಬಾದ್‌ನ ನಡೆಸುತ್ತಿರುವ ಕಾರ್ಯತಂತ್ರವಾಗಿದೆ. ಕಚ್ ಕೊಲ್ಲಿ ಮತ್ತು ವಿಶಾಲವಾದ ಅರೇಬಿಯನ್ ಸಮುದ್ರದ ಬಳಿ ಭಾರತ ನಡೆಸುತ್ತಿರುವ ನೌಕಾ ಚಟುವಟಿಕೆಗೆ ವಿರುದ್ಧವಾಗಿ ಪಾಕಿಸ್ತಾನ ತನ್ನ ಸಾಮರ್ಥ್ಯವನ್ನು ತೋರಿಸಲು ಇದನ್ನು ಮಾಡಿದೆ ಎನ್ನಲಾಗುತ್ತಿದೆ.

ವಿದ್ಯಾ ಇರ್ವತ್ತೂರು

View all posts by this author