Dedollarisation: ಡಾಲರ್ ಪ್ರಾಬಲ್ಯ ಕ್ರಮೇಣ ತಗ್ಗಿಸಲು ಚೀನಾ ಮಾಸ್ಟರ್ ಪ್ಲ್ಯಾನ್
Donald Trump: ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಬಹುಕಾಲದಿಂದ ಪ್ರಾಬಲು ಸಾಧಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಡಾಲರ್ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಚೀನಾ ತನ್ನ ಕರೆನ್ಸಿಯಾದ ಯುವಾನ್ ಅನ್ನು ಮುನ್ನೆಲೆಗೆ ತರುತ್ತಿದೆ.
-
Ramesh B
Oct 25, 2025 9:02 PM
ವಾಷಿಂಗ್ಟನ್, ಅ. 25: ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ (Dollar) ಬಹುಕಾಲದಿಂದ ಕಿಂಗ್. ಆದರೆ ನಿಧಾನವಾಗಿ ಡಾಲರ್ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಂಕ ಸಮರದ ಪರಿಣಾಮ ಮತ್ತೆ Dedollarisation ಚರ್ಚೆ ನಡೆಯುತ್ತಿದೆ. ಚೀನಾ ತನ್ನ ಕರೆನ್ಸಿಯಾದ ಯುವಾನ್ ಅನ್ನು ಮುನ್ನೆಲೆಗೆ ತರುತ್ತಿದೆ. ಇದರ ಉದ್ದೇಶ ಡಾಲರ್ ಪ್ರಾಬಲ್ಯವನ್ನು ಹತ್ತಿಕ್ಕುವುದು. ಇದು ಹೇಗೆ ಸಾಧ್ಯ?
ಬಹುತೇಕ ರಾಷ್ಟ್ರಗಳು ಅಂತಾರಾಷ್ಟ್ರೀಯ ವ್ಯಾಪಾರಗಳಲ್ಲಿ ಡಾಲರ್ ಬಳಸುತ್ತವೆ. ಆದರೆ ಚೀನಾ ಇದೀಗ ನಾನಾ ದೇಶಗಳ ಜತೆಗೆ ಕರೆನ್ಸಿ ವಿನಿಮಯ ಒಪ್ಪಂದಗಳನ್ನು (Currency swap) ಮಾಡಿಕೊಳ್ಳುತ್ತಿದೆ. ಇದರ ಉದ್ದೇಶ ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆಗಳಲ್ಲಿ ಡಾಲರ್ ಅನ್ನು ಕೈ ಬಿಡುವುದು.
ಹಲವು ದೇಶಗಳ ಜತೆಗೆ ಚೀನಾ ಈಗಾಗಲೇ ಯುವಾನ್ ಅನ್ನು ಬಳಸುತ್ತಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಜತೆಗೆ ಕೂಡ ಈ ಬಗ್ಗೆ ಮಾತುಕತೆ ನಡೆಸುತ್ತಿದೆ. ಪ್ರಾದೇಶಿಕ ವ್ಯಾಪಾರಗಳಲ್ಲಿ ಯುವಾನ್ ಕರೆನ್ಸಿಯನ್ನು ಪ್ರಮೋಟ್ ಮಾಡುವುದು ಮತ್ತೊಂದು ಉದ್ದೇಶ. ಈ ಕರೆನ್ಸಿ ಸ್ವಾಪ್‌ನಲ್ಲಿ ಸೆಂಟ್ರಲ್ ಬ್ಯಾಂಕ್‌ಗಳು ಪರಸ್ಪರ ಅವರವರ ದೇಶಗಳ ಕರೆನ್ಸಿಯಲ್ಲಿ ಹಣಕಾಸು ವರ್ಗಾವಣೆಗಳನ್ನು ನಡೆಸುತ್ತವೆ. ಡಾಲರ್ ಅನ್ನು ಬಳಸುವುದಿಲ್ಲ.
ಈ ಸುದ್ದಿಯನ್ನೂ ಓದಿ: Google investment: ಗೂಗಲ್‌ನಂತಹ ಇಂಟರ್ ನೆಟ್ ಕಂಪನಿಗಳು ಭಾರತದಲ್ಲಿ ಭಾರಿ ಹೂಡಿಕೆ ಮಾಡುತ್ತಿರುವುದೇಕೆ? ವಿಶ್ಲೇಷಣೆಗೆ ಈ ಲೇಖನ ಓದಿರಿ.
ಟ್ರಂಪ್ ಸುಂಕ ಸಮರದ ಪರಿಣಾಮ ಡಾಲರ್ ನಿಧಾನವಾಗಿ ವಿಶ್ವಾಸ ಕಳೆದುಕೊಳ್ಳುತ್ತಿದೆ. ಇದರ ಪ್ರಯೋಜನ ಪಡೆಯಲು ಚೀನಾ ಕಾಯುತ್ತಿದೆ. ಇಥಿಯೋಪಿಯಾ, ಕೀನ್ಯಾ, ಶ್ರೀಲಂಕಾ ಮುಂತಾದ ಸಣ್ಣ ಪುಟ್ಟ ರಾಷ್ಟ್ರಗಳು ಡಾಲರ್‌ನಲ್ಲಿ ಪಡೆದಿರುವ ಸಾಲವನ್ನು ಯುವಾನ್ ಕರೆನ್ಸಿಗೆ ಬದಲಿಸಲು ಚೀನಾ ಡೀಲ್ ಮಾಡಿದೆ. ಇದರಿಂದ ಈ ರಾಷ್ಟ್ರಗಳಿಗೆ ಸಾಲದ ಬಡ್ಡಿ ದರ ಕಡಿಮೆಯಾಗಲಿದೆ. ಚೀನಾಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವಾನ್ ಕರೆನ್ಸಿಯ ಬಳಕೆ ಹೆಚ್ಚಿಸಲು, ಡಾಲರ್ ಪ್ರಾಬಲ್ಯ ತಗ್ಗಿಸಲು ಅವಕಾಶ ಸೃಷ್ಟಿಯಾಗಲಿದೆ.
ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ಮತ್ತಷ್ಟು ತೀವ್ರ?
ಈ ಮಧ್ಯೆ ಅಮೆರಿಕ-ಚೀನಾ ನಡುವಣ ವಾಣಿಜ್ಯ ಸಂಘರ್ಷ ಇನ್ನೊಂದೇ ವಾರದಲ್ಲಿ ತಾರಕ ಸ್ವರೂಪಕ್ಕೆ ತಿರುಗುವ ಲಕ್ಷಣ ಕಾಣಿಸುತ್ತಿದೆ. ಡೊನಾಲ್ಡ್ ಟ್ರಂಪ್ 2025ರ ನವೆಂಬರ್ 1ರಿಂದ ಚೀನಾ ವಿರುದ್ಧ 155 ಪರ್ಸೆಂಟ್ ಟಾರಿಫ್ ಅನ್ನು ಜಾರಿಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಒಂದು ಕಡೆ ಬೀಜಿಂಗ್ ಜತೆಗೆ ಸೌಹಾರ್ದ ಸಂಬಂಧ ಬಯಸುತ್ತಿರುವುದಾಗಿಯೂ, ಮತ್ತೊಂದು ಕಡೆ, ಅನೂಹ್ಯ ಟಾರಿಫ್ ವಿಧಿಸುವುದಾಗಿಯೂ ಹೇಳಿದ್ದಾರೆ.