ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amazon Layoff: ಅಮೇಜಾನ್‌ ಉದ್ಯೋಗಿಗಳಿ ಭಾರೀ ಶಾಕ್‌; ಏಕಾಏಕಿ 30 ಸಾವಿರ ಸಿಬ್ಬಂದಿ ಕಡಿತ!

ಇ ಕಾಮರ್ಸ್‌ ದೈತ್ಯ ಕಂಪನಿ ತನ್ನ ಉದ್ಯೋಗಿಗಳಿಗೆ ಭಾರೀ ಶಾಕ್‌ ನೀಡಿದೆ. ಮಾಹಿತಿಯ ಪ್ರಕಾರ, 30,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಅಮೆಜಾನ್ ತನ್ನ ಡಿವೈಸ್‌ಗಳು, ಸಂವಹನ, ಪಾಡ್‌ಕಾಸ್ಟಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸಣ್ಣ ಪ್ರಮಾಣದ ಉದ್ಯೋಗ ಕಡಿತಗಳನ್ನು ನಡೆಸುತ್ತಲೇ ಬಂದಿದೆ.

ವಾಷಿಂಗ್ಟನ್‌: ಇ ಕಾಮರ್ಸ್‌ ದೈತ್ಯ ಕಂಪನಿ ಅಮೇಜಾನ್‌ (Amazon Layoff) ತನ್ನ ಉದ್ಯೋಗಿಗಳಿಗೆ ಭಾರೀ ಶಾಕ್‌ ನೀಡಿದೆ. ಮಾಹಿತಿಯ ಪ್ರಕಾರ, 30,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ಯೋಜನೆ ರೂಪಿಸಿದೆ. ಅಮೆಜಾನ್‌ನ ಒಟ್ಟು 15.5 ಲಕ್ಷ ಉದ್ಯೋಗಿಗಳಿಗೆ ಹೋಲಿಸಿದರೆ ಸಣ್ಣ ಪ್ರಮಾಣದ್ದಾದರೂ, ಕಂಪನಿಯ ಸುಮಾರು 3.5 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಶೇ. 10ರಷ್ಟು ಭಾಗವನ್ನು ಪ್ರತಿನಿಧಿಸುತ್ತದೆ. 2022 ರಲ್ಲಿ ಕಂಪನಿ 27, 000 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಕಳೆದ ಎರಡು ವರ್ಷಗಳಲ್ಲಿ ಅಮೆಜಾನ್ ತನ್ನ ಡಿವೈಸ್‌ಗಳು, ಸಂವಹನ, ಪಾಡ್‌ಕಾಸ್ಟಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸಣ್ಣ ಪ್ರಮಾಣದ ಉದ್ಯೋಗ ಕಡಿತಗಳನ್ನು ನಡೆಸುತ್ತಲೇ ಬಂದಿದೆ. ಈ ವಾರ ಆರಂಭವಾಗಲಿರುವ ಬೃಹತ್ ವಜಾ ಪ್ರಕ್ರಿಯೆಯು ಮಾನವ ಸಂಪನ್ಮೂಲ (ಪೀಪಲ್ ಎಕ್ಸ್‌ಪೀರಿಯನ್ಸ್ ಮತ್ತು ಟೆಕ್ನಾಲಜಿ), ಡಿವೈಸ್‌ಗಳು ಮತ್ತು ಸೇವೆಗಳು ಹಾಗೂ ಕಾರ್ಯಾಚರಣೆ ಸೇರಿದಂತೆ ವಿವಿಧ ವಿಭಾಗಗಳ ಮೇಲೆ ಪರಿಣಾಮ ಬೀರಲಿದೆ.

ಕಂಪನಿಯ ಮುಖ್ಯ ಕಾರ್ಯಾಚರಣಾ ಅಧಿಕಾರಿ ಮೈಕೆಲ್ ಫಿಡೆಲ್ಕೆ ಈ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರು ಫೆಬ್ರವರಿ 1 ರಂದು ಟಾರ್ಗೆಟ್‌ನ ಮುಂದಿನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಜಾಗೊಳ್ಳಲಿರುವ ಉದ್ಯೋಗಿಗಳಿಗೆ ಮಂಗಳವಾರ ಬೆಳಿಗ್ಗೆಯಿಂದ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಸಂಬಂಧಪಟ್ಟ ತಂಡಗಳ ವ್ಯವಸ್ಥಾಪಕರಿಗೆ ಸೋಮವಾರ ತರಬೇತಿ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ: Kaneri Swamiji: ವಿಜಯಪುರ ಜಿಲ್ಲೆಗೆ ಕನೇರಿ ಶ್ರೀಗಳ ಪ್ರವೇಶ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್ ) ಸಹ ಕಳೆದ ತಿಂಗಳು ಭಾರೀ ಪ್ರಮಾಣದ ಉದ್ಯೋಗಿಗಳನ್ನು ಕಡಿತಗೊಳಿಸಿತ್ತು. ಇತ್ತೀಚೆಗಷ್ಟೇ 12,000 ಉದ್ಯೋಗ ಕಡಿತ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಬರೋಬ್ಬರಿ 80,000 ಉದ್ಯೋಗ ಕಡಿತ ಮಾಡುತ್ತಿದೆ. ಉದ್ಯೋಗಿಗಳಿಗೆ ಈಗಾಗಲೇ ಇಮೇಲ್ ಮೂಲಕ ಮಾಹಿತಿ ನೀಡಲಾಗಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. ಬರೋಬ್ಬರಿ 80 ಸಾವಿರ ಉದ್ಯೋಗ ಕಡಿತಗೊಳಿಸಲು ಟಿಸಿಎಸ್ ಮುಂದಾಗಿದೆ ಎಂದು ವರದಿ ಹೇಳುತ್ತಿದೆ.

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೇರಿದಂತೆ ಹಲವು ಕಾರಣಗಳಿಂದ ಟಿಸಿಎಸ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಲಿಸ್ಟ್‌ನಲ್ಲಿರುವ ಉದ್ಯೋಗಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿತ್ತು. ತಕ್ಷಣದಿಂದಲೇ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. 80,000 ಉದ್ಯೋಗ ಕಡಿತದ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಎಕ್ಸ್ ಬಳಕೆದಾರ ಸೋಹಮ್ ಸರ್ಕಾರ ಪೋಸ್ಟ್ ಮೂಲಕ ಹೇಳಿದ್ದಾರೆ. ಸೋಹಮ್ ಸರ್ಕಾರ ಆತ್ಮೀಯ ಗೆಳೆಯ ಹಾಗೂ ಸಹೋದ್ಯೋಗಿಗೆ ಈಗಾಗಲೇ ಟಿಸಿಎಸ್ ರಾಜೀನಾಮೆ ನೀಡಲು ಸೂಚಿಸಿದೆ ಎಂದಿದ್ದಾರೆ.