ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Russia Earthquake: ರಷ್ಯಾದಲ್ಲಿ 7.0 ತೀವ್ರತೆಯ ಭೂಕಂಪ; ಜ್ವಾಲಾಮುಖಿ ಸ್ಫೋಟ, ಸುನಾಮಿ ಸಾಧ್ಯತೆ

Tsunami Waves: ರಷ್ಯಾದ ಪೂರ್ವ ಭಾಗದ ಕುರಿಲ್‌ ದ್ವೀಪಗಳಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಇದರ ಪರಿಣಾಮವಾಗಿ ಸಣ್ಣ ಪ್ರಮಾಣದಲ್ಲಿ ಅಲೆ ಕಾಣಿಸಿಕೊಂಡಿದೆ. ಅದಾಗ್ಯೂ ಸುನಾಮಿ ಎಚ್ಚರಿಕೆ ನೀಡಿಲ್ಲ. "ಅಲೆಗಳ ಎತ್ತರ ಕಡಿಮೆಯಾಗಿದೆ. ಆದರೆ ಅಲೆ ಸಂಪೂರ್ಣವಾಗಿ ನಿಂತಿಲ್ಲ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಸ್ಕೊ: ರಷ್ಯಾದ ಪೂರ್ವ ಭಾಗದ ಕುರಿಲ್‌ ದ್ವೀಪಗಳಲ್ಲಿ (Kuril Islands) ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಇದರ ಪರಿಣಾಮವಾಗಿ ಸಣ್ಣ ಪ್ರಮಾಣದಲ್ಲಿ ಅಲೆ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ (Russia Earthquake). ಅದಾಗ್ಯೂ ಸುನಾಮಿ ಎಚ್ಚರಿಕೆ ನೀಡಿಲ್ಲ. "ಅಲೆಗಳ ಎತ್ತರ ಕಡಿಮೆಯಾಗಿದೆ. ಆದರೆ ಅಲೆ ಸಂಪೂರ್ಣವಾಗಿ ನಿಂತಿಲ್ಲ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಷ್ಯಾದ ಪೂರ್ವದ ಕಮ್ಚಡ್ಕಾ ದ್ವೀಪದ ಸಮೀಪದ 3 ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದ್ದು, ಸಮುದ್ರ ಅಲೆಗಳ ಎತ್ತರ ಕಡಿಮೆಯಾಗಿದ್ದರೂ ಕರಾವಳಿ ಪ್ರದೇಶದಿಂದ ದೂರ ಇರುವಂತೆ ಸೂಚಿಸಲಾಗಿದೆ.

ʼʼಪ್ರಬಲ ಭೂಕಂಪದ ಬಳಿಕ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ. ಆದರೆ ಈ ಪ್ರದೇಶದಲ್ಲಿ 600 ವರ್ಷಗಳಲ್ಲಿ ಮೊದಲ ಬಾರಿಗೆ ಜ್ವಾಲಾಮುಖಿ ಸ್ಫೋಟಗೊಂಡಿದೆʼʼ ಎಂದು ವರದಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಕುರಿಲ್‌ ದ್ವೀಪಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.



ಈ ಸುದ್ದಿಯನ್ನೂ ಓದಿ: Russia Tsunami: ರಷ್ಯಾದಲ್ಲಿ ಪ್ರಬಲ ಭೂಕಂಪದ ಬೆನ್ನಲ್ಲೇ ಸುನಾಮಿ! ಜಪಾನ್‌ ಮೇಲೂ ಎಫೆಕ್ಟ್‌

ಕೆಲವು ದಿನಗಳ ಹಿಂದೆ ರಷ್ಯಾದಲ್ಲಿ ಸುನಾಮಿ

ರಷ್ಯಾದಲ್ಲಿ ಜುಲೈ 30ರ ಬೆಳ್ಳಂಬೆಳಗ್ಗೇ ಪ್ರಬಲ ಭೂಕಂಪ ಸಂಭವಿಸಿದ್ದು, ಪರಿಣಾಮವಾಗಿ ಉತ್ತರ ಪೆಸಿಫಿಕ್ ಪ್ರದೇಶದಲ್ಲಿ ಸುನಾಮಿ ಉಂಟಾಗಿತ್ತು. ಮುಂಜಾನೆ ರಷ್ಯಾದಲ್ಲಿ 8.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅಲಾಸ್ಕಾ, ಹವಾಯಿ ಮತ್ತು ದಕ್ಷಿಣಕ್ಕೆ ನ್ಯೂಜಿಲೆಂಡ್‌ಗೆ ಎಚ್ಚರಿಕೆ ನೀಡಲಾಗಿತ್ತು. ಸುನಾಮಿ ಎಚ್ಚರಿಕೆ ಸೈರನ್‌ಗಳು ಮೊಳಗಿ ಹಿನ್ನೆಲೆಯಲ್ಲಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಇನ್ನು ಜಪಾನ್‌ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಅಲರ್ಟ್‌ ಘೋಷಿಸಲಾಗಿತ್ತು. ಸುಮಾರು 30 ಸೆಂಟಿಮೀಟರ್‌ಗಳಷ್ಟು (ಸುಮಾರು 1 ಅಡಿ) ಮೊದಲ ಸುನಾಮಿ ಅಲೆ ಹೊಕ್ಕೈಡೊದ ಪೂರ್ವ ಕರಾವಳಿಯಲ್ಲಿರುವ ನೆಮುರೊವನ್ನು ತಲುಪಿತ್ತು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿತ್ತು.

ಸುದ್ದಿಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಸುನಾಮಿ ರಷ್ಯಾದ ಕುರಿಲ್ ದ್ವೀಪಗಳು ಮತ್ತು ಜಪಾನ್‌ನ ದೊಡ್ಡ ಉತ್ತರ ದ್ವೀಪ ಹೊಕ್ಕೈಡೊದ ಕರಾವಳಿ ಪ್ರದೇಶಗಳನ್ನು ಸಹ ಅಪ್ಪಳಿಸಿದೆ. ಭೂಕಂಪವು 19.3 ಕಿಲೋಮೀಟರ್ (12 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ತಿಳಿಸಿತ್ತು. ಇದರ ಕೇಂದ್ರಬಿಂದುವು ಪೆಟ್ರೋಪಾವ್ಲೋವ್ಸ್ಕ್-ಕಾಮ್‌ಚಾಟ್ಸ್ಕಿಯ ಪೂರ್ವ-ಆಗ್ನೇಯಕ್ಕೆ ಸುಮಾರು 125 ಕಿಲೋಮೀಟರ್ (80 ಮೈಲುಗಳು) ದೂರದಲ್ಲಿದೆ.