ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Breaking News: ಅಘ್ಘಾನಿಸ್ತಾನ ಶಾಲೆ ಬಳಿ ಭೀಕರ ಸ್ಫೋಟ; 6 ಮಂದಿ ಸಾವು

Afghanistan Blast: ಅಫ್ಘಾನಿಸ್ತಾನದ ಶಾಲೆಯೊಂದರ ಪಕ್ಕದಲ್ಲಿದ್ದ ಮನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ 97 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗರ ತನಿಖೆ ನಡೆಯುತ್ತಿದೆ.

ಕಾಬೂಲ್‌, ನ. 28: ‍‍ಅಫ್ಘಾನಿಸ್ತಾನದ ಪೂರ್ವ ಕುನಾರ್ ಪ್ರಾಂತ್ಯದಲ್ಲಿ ಶನಿವಾರ (ನವೆಂಬರ್‌ 28) ಮಾಧ್ಯಮಿಕ ಶಾಲೆಯೊಂದರ ಪಕ್ಕದಲ್ಲಿದ್ದ ಮನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ (Afghanistan Blast). ಘಟನೆಯಲ್ಲಿ 97 ಮಂದಿ ಗಾಯಗೊಂಡಿದ್ದಾರೆ. ಶೈಕ್ಷಣಿಕ ಸಂಸ್ಥೆಯೊಂದರ ಸಮೀಪವೆ ಸ್ಫೋಟ ಸಂಭವಿದ್ದು ಆತಂಕಕ್ಕೆ ಕಾರಣವಾಗಿದೆ. ಅಂದರ್ ಸೆರ್ ಪ್ರದೇಶದಲ್ಲಿ ಈ ಸ್ಫೋಟ ನಡೆದಿದೆ ಎಂದು 'ಅಲ್ ಜಜೀರಾ' ಸುದ್ದಿಸಂಸ್ಥೆ ವರದಿ ಮಾಡಿದೆ.

ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ) ಈ ಸ್ಫೋಟ ಸಂಭವಿಸಿದೆ. ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಅಘ್ಘಾನಿಸ್ತಾನದಲ್ಲಿ ಭೀಕರ ಸ್ಫೋಟ:



ಆಸ್ಪತ್ರೆ ಮೂಲಗಳ ಪ್ರಕಾರ, ಕನಿಷ್ಠ 6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಮತ್ತು 97 ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆಯಲ್ಲಿ ಬದಲಾವಣೆಯಾಗಬಹುದು. ಕುನಾರ್‌ನ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮೌಲವಿ ಸಾಮಿ-ಉಲ್-ಹಕ್ ಅಲ್ ಜಜೀರಾ ಜತೆ ಮಾತನಾಡಿ, ʼʼಈ ಸ್ಫೋಟವು ಮಾಧ್ಯమిಕ ಶಾಲೆಯ ಪಕ್ಕದಲ್ಲಿದ್ದ ಮನೆಯೊಂದರಲ್ಲಿ ಸಂಭವಿಸಿದೆ. ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಗಳಿಗೆ ಸೇರಿದ ಆ ಮನೆಯಲ್ಲಿ ಡೈನಮೈಟ್‌ಗಳನ್ನು ಸಂಗ್ರಹಿಸಿ ಇಡಲಾಗಿತ್ತುʼʼ ಎಂದು ಹೇಳಿದ್ದಾರೆ. ಸ್ಫೋಟದ ಹಿಂದೆ ಪಾಕಿಸ್ತಾನದ ಕೂವಾಡ ಇರುವ ಬಗ್ಗೆಯೂ ಅನುಮಾನ ಮೂಡಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಸ್ಫೋಟದ ಕುರಿತಾದ ಹೆಚ್ಚಿನ ವಿವರಗಳನ್ನಾಗಲಿ ಅಥವಾ ಉಂಟಾದ ಹಾನಿಯ ಪ್ರಮಾಣವನ್ನಾಗಲಿ ಸಾಮಿ-ಉಲ್-ಹಕ್ ಬಹಿರಂಗಪಡಿಸಿಲ್ಲ. ಸ್ಫೋಟಕ್ಕೆ ನಿಖರ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ.

Ramesh Ballamoole

View all posts by this author