ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Balochistan independence: ಪಾಕ್‌ಗೆ ಮರ್ಮಾಘಾತ; ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ

Baloch leader declares independence: ಪಾಕ್‌ನಿಂದ ಪ್ರತ್ಯೇಕಗೊಳ್ಳಲು ದಶಕಗಳಿಂದ ಹೋರಾಟ ನಡೆಸುತ್ತಿರುವ ಬಲೂಚಿಗರು, ಇದೀಗ ಪಾಕ್‌ನಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದಾರೆ ಬಲೂಚ್ ಪ್ರತಿನಿಧಿ ಮೀರ್ ಯಾರ್ ಬಲೂಚ್ ಬುಧವಾರ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿದ್ದು, ಇನ್ಮುಂದೆ ಬಲೂಚಿಸ್ತಾನ ಪಾಕ್‌ನ ಭಾಗ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಸ್ಲಮಾಬಾದ್‌: ಭಾರತದ ಆಪರೇಷನ್‌ ಸಿಂದೂರ್‌ ದಾಳಿಗೆ ತತ್ತರಿಸಿ, ಬೆಳಲಿ ಬೆಂಡಾಗಿರುವ ಪಾಕಿಸ್ತಾನಕ್ಕೆ ಅತ್ತ ಬಲೂಚ್‌ ಪ್ರತ್ಯೇಕತಾವಾದಿಗಳು ಮರ್ಮಾಘಾತ ನೀಡಿದ್ದಾರೆ. ಪಾಕ್‌ನಿಂದ ಪ್ರತ್ಯೇಕಗೊಳ್ಳಲು ದಶಕಗಳಿಂದ ಹೋರಾಟ ನಡೆಸುತ್ತಿರುವ ಬಲೂಚಿಗರು, ಇದೀಗ ಪಾಕ್‌ನಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದಾರೆ ಬಲೂಚ್ ಪ್ರತಿನಿಧಿ ಮೀರ್ ಯಾರ್ ಬಲೂಚ್ ಬುಧವಾರ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿದ್ದು, ಇನ್ಮುಂದೆ ಬಲೂಚಿಸ್ತಾನ ಪಾಕ್‌ನ ಭಾಗ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಬಲೂಚಿಸ್ತಾನದ ಜನರು ತಮ್ಮ "ರಾಷ್ಟ್ರೀಯ ತೀರ್ಪು" ನೀಡಿದ್ದಾರೆ ಮತ್ತು ಜಗತ್ತು ಇನ್ನು ಮುಂದೆ ಮೌನವಾಗಿರಬಾರದು ಎಂದು ಅವರು ಹೇಳಿದರು.



ನಾವು ಪಾಕಿಸ್ತಾನಿಗಳಲ್ಲ.. ಇನ್ನು ಮುಂದೆ ನಾವು ಬಲೂಚಿಗರು. ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದಾದ್ಯಂತ ಬಲೂಚ್ ಜನರು ಬೀದಿಗಿಳಿದಿದ್ದಾರೆ. ಇದು ಬಲೂಚಿಸ್ತಾನ್ ಪಾಕಿಸ್ತಾನವಲ್ಲ ಮತ್ತು ಜಗತ್ತು ಇನ್ನು ಮುಂದೆ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ. ಇದು ಬಲೂಚಿಗರ ರಾಷ್ಟ್ರೀಯ ತೀರ್ಪು ಎಂದು ಸ್ಪಷ್ಟಪಡಿಸಿದ್ದಾರೆ. ಪಿಒಕೆ ಬಿಟ್ಟು ತೊಲಗುವಂತೆ ಪಾಕ್‌ಗೆ ಭಾರತ ತಾಕೀತು ಮಾಡಿರುವುದನ್ನು ಬಲೂಚಿಸ್ತಾನ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಪಾಕಿಸ್ತಾನವು ತಕ್ಷಣವೇ ಪಿಒಕೆ ತೊರೆಯುವಂತೆ ಅಂತರರಾಷ್ಟ್ರೀಯ ಸಮುದಾಯವು ಒತ್ತಾಯಿಸಬೇಕು. ಭಾರತಕ್ಕೆ ಪಾಕಿಸ್ತಾನದ ಸೈನ್ಯವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎಕ್ಸ್‌ನಲ್ಲಿ ಮಿರ್‌ ಪೋಸ್ಟ್‌ ಮಾಡಿದ್ದಾರೆ.