ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಡೋನೇಷ್ಯಾದಲ್ಲಿ ಭೀಕರ ಅಗ್ನಿ ದುರಂತ; 20 ಮಂದಿ ಸಜೀವ ದಹನ

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿರುವ 7 ಅಂತಸ್ತಿನ ಕಟ್ಟಡದಲ್ಲಿ ಮಂಗಳವಾರ (ಡಿಸೆಂಬರ್‌ 9) ಬೆಂಕಿ ಕಾಣಿಸಿಕೊಂಡಿದ್ದು, 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಬೆಂಕಿಯನ್ನು ನಂದಿಸಲಾಗಿದೆ ಮತ್ತು ಕಟ್ಟಡದೊಳಗೆ ಸಿಲುಕಿರುವ ಸಂತ್ರಸ್ತರನ್ನು ಹೊರ ತರಲು ಕಾರ್ಯಾಚರಣೆ ನಡೆಯುತ್ತಿದೆ.

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಸಂಭವಿಸಿದ ಅಗ್ನಿ ದುರಂತ

ಜಕಾರ್ತಾ, ಡಿ. 9: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿರುವ 7 ಅಂತಸ್ತಿನ ಕಟ್ಟಡದಲ್ಲಿ ಮಂಗಳವಾರ (ಡಿಸೆಂಬರ್‌ 9) ಬೆಂಕಿ ಕಾಣಿಸಿಕೊಂಡು, 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ (Fire Accident). ಸದ್ಯ ಬೆಂಕಿಯನ್ನು ನಂದಿಸಲಾಗಿದೆ ಮತ್ತು ಕಟ್ಟಡದೊಳಗೆ ಸಿಲುಕಿರುವ ಸಂತ್ರಸ್ತರನ್ನು ಹೊರ ತರಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೆಂಟ್ರಲ್ ಜಕಾರ್ತಾ ಪೊಲೀಸ್ ಮುಖ್ಯಸ್ಥ ಸುಸತ್ಯೊ ಪೂರ್ಣೊಮೊ ಕೊಂಡ್ರೊ ಸುದ್ದಿಗಾರರಿಗೆ ವಿವರಿಸಿದ್ದಾರೆ. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ.

ಕಟ್ಟಡದ ಮೊದಲ ಮಹಡಿಯಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು, ನಂತರ ಮೇಲಿನ ಮಹಡಿಗೆ ಹರಡಿತು ಎಂದು ಕಾಂಡ್ರೊ ಹೇಳಿದ್ದಾರೆ. ಆ ಸಮಯದಲ್ಲಿ ಕೆಲವು ಉದ್ಯೋಗಿಗಳು ಕಟ್ಟಡದಲ್ಲಿ ಊಟ ಮಾಡುತ್ತಿದ್ದರು. ಕೆಲವರು ಊಟಕ್ಕಾಗಿ ಹೊರ ಬಂದಿದ್ದರು ಎಂದು ವರದಿಯೊಂದು ಹೇಳಿದೆ.

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಸಂಭವಿಸಿದ ಅಗ್ನಿ ದುರಂತ:



ಈ ಕಟ್ಟಡವು ಟೆರ್ರಾ ಡ್ರೋನ್‌ನ ಇಂಡೋನೇಷ್ಯಾದ ಕಚೇರಿಯಾಗಿದ್ದು, ಇದು ಗಣಿಗಾರಿಕೆ ಮತ್ತು ಕೃಷಿ ವಲಯಗಳ ಡ್ರೋನ್‌ ನಿರ್ಮಿಸುತ್ತದೆ. ಈ ಕಂಪನಿಯು ಜಪಾನಿನ ಡ್ರೋನ್ ಸಂಸ್ಥೆ ಟೆರ್ರಾ ಡ್ರೋನ್ ಕಾರ್ಪೊರೇಷನ್‌ನ ಇಂಡೋನೇಷ್ಯಾದ ಘಟಕ ಎಂದು ತಿಳಿದು ಬಂದಿದೆ. ಸದ್ಯ ಇಡೀ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗಿಸುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹಾಂಗ್‌ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ; 13 ಮಂದಿ ಸಾವು: 7 ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ

ಹಾಂಗ್‌ ಕಾಂಗ್‌ ಬೆಂಕಿ ದುರಂತಕ್ಕೆ 130 ಮಂದಿ ಬಲಿ

ಕೆಲವು ದಿನಗಳ ಹಿಂದೆ ಚೀನಾದ ಹಾಂಗ್‌ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 130 ಮಂದಿ ಬಲಿಯಾಗಿದ್ದರು. ಹಾಂಗ್ ಕಾಂಗ್‌ನಲ್ಲಿ ವಸತಿ ಕಟ್ಟಡವೊಂದರಲ್ಲಿ ಈ ಭೀಕರ ಬೆಂಕಿ ಅವಘಡ ಸಂಭವಿಸಿತ್ತು. ತೈಪೋದಲ್ಲಿರುವ ಒಂದು ದೊಡ್ಡ ವಸತಿ ಸಂಕೀರ್ಣದಲ್ಲಿ ಬೆಂಕಿ ಕಾಣಿಸಿಕೊಂಡಿತು. ಕಟ್ಟಡದ ಹೊರಗೆ ಇದ್ದ ಬಿದುರು ಸ್ಕ್ಯಾಫೋಲ್ಡಿಂಗ್ ಮತ್ತು ನಿರ್ಮಾಣ ಜಾಲರಿಗೆ ಬೆಂಕಿ ಹೊತ್ತಿಕೊಂಡು ವೇಗವಾಗಿ ಹರಡಿತು. ಈ ಸಂಕೀರ್ಣದಲ್ಲಿ ಒಟ್ಟು 8 ಕಟ್ಟಡಗಳಿದ್ದು, ಸುಮಾರು 2000 ಫ್ಲ್ಯಾಟ್‌ಗಳಲ್ಲಿ 4,800ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು. ಸುಮಾರು 700 ನಿವಾಸಿಗಳನ್ನು ಸುರಕ್ಷಿತವಾಗಿ ಹೊರತಂದು ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ಕಳುಹಿಸಲಾಗಿದೆ.