ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿವಾಹವಾಗಿ 17 ದಿನದಲ್ಲೇ ಅಮೆರಿಕದಲ್ಲಿ ನಿಗೂಢವಾಗಿ ಮೃತಪಟ್ಟ ಭಾರತೀಯ ವ್ಯಕ್ತಿ: ಪತ್ನಿ ನಾಪತ್ತೆ, ಹೆಚ್ಚಿದ ಅನುಮಾನ

Mohammed Jaber Hussain: ವಿವಾಹವಾಗಿ ಕೇವಲ 17 ದಿನಗಳಲ್ಲೇ ಅಮೆರಿಕದಲ್ಲಿ ನೆಲೆಸಿದ್ದ ಹೈದರಾಬಾದ್‌ ಮೂಲದ ಸಿವಿಲ್ ಎಂಜಿನಿಯರ್ ಮೊಹಮ್ಮದ್ ಜಾಬರ್ ಹುಸೇನ್ (28) ತಮ್ಮ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಮಗನ ದಿಢೀರ್ ಸಾವಿನ ಆಘಾತದಲ್ಲಿರುವ ಕುಟುಂಬವು, ಆತನ ಶರೀರವನ್ನು ಭಾರತಕ್ಕೆ ತರಲು ನೆರವಾಗುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ವಿನಂತಿ ಮಾಡಿದೆ.

ಮೊಹಮ್ಮದ್ ಜಾಬರ್ ಹುಸೇನ್ (ಸಂಗ್ರಹ ಚಿತ್ರ)

ವಾಷಿಂಗ್ಟನ್‌, ಸೆ. 17: ಮನೆಯಲ್ಲಿ ಮದುವೆಯ ಸಂಭ್ರಮದ ಕಳೆ ಇನ್ನೂ ಮಾಸಿಲ್ಲ, ಹೊಸ ಬಾಳಿಗೆ ಕಾಲಿಟ್ಟ ದಂಪತಿಯ ಸಂತಸದ ಕ್ಷಣಗಳು ಮುಗಿದಿಲ್ಲ. ಅಷ್ಟರಲ್ಲೇ ಅಮೆರಿಕದಿಂದ ಬಂದ ಒಂದು ಸಣ್ಣ ಕರೆ ಆ ಕುಟುಂಬದ ಇಡೀ ಸಂತೋಷವನ್ನೇ ಕಸಿದುಕೊಂಡಿದೆ. ಉನ್ನತ ಶಿಕ್ಷಣ ಹಾಗೂ ಕೆಲಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ಮದುವೆಯಾದ ಕೇವಲ 17 ದಿನಗಳಲ್ಲಿ ತನ್ನ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ತೆಲಂಗಾಣದ ಹೈದರಾಬಾದ್ ಮೂಲದ ಸಂತೋಷ್‌ನಗರ ನಿವಾಸಿ, 28 ವರ್ಷದ ಮೊಹಮ್ಮದ್ ಜಾಬರ್ ಹುಸೇನ್ (Mohammed Jaber Hussain) ಎಂದು ಗುರುತಿಸಲಾಗಿದೆ. ಮ್ಯಾಸಚೂಸೆಟ್ಸ್‌ನ ಲೋವೆಲ್‌ ಎಂಬಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹುಸೇನ್ ಸಾವಿಗೆ ನಿಜವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಜಾಬರ್‌ ಹುಸೇನ್‌ ಆಗಸ್ಟ್‌ 28ರಂದು ಟೆಕ್ಸಾಸ್‌ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಮದುವೆಯಾದ ನಂತರ ಪತ್ನಿಯೊಂದಿಗೆ ಕೆಲವು ದಿನ ಕಳೆದು, ಕೆಲಸದ ನಿಮಿತ್ತ ಮತ್ತೆ ಲೋವೆಲ್‌ನಲ್ಲಿರುವ ತಮ್ಮ ಮನೆಗೆ ವಾಪಸಾಗಿದ್ದರು. ಸೆಪ್ಟೆಂಬರ್‌ 14ರಂದು ಕೊನೆಯ ಬಾರಿ ಕುಟುಂಬದವರೊಂದಿಗೆ ಮಾತನಾಡಿದ್ದರು. ಇದಾದ ಸುಮಾರು ಎಂಟು ಗಂಟೆಗಳ ಬಳಿಕ ಅವರ ರೂಮ್‌ಮೇಟ್‌ ಕುಟುಂಬಕ್ಕೆ ಕಾಲ್‌ ಮಾಡಿ ಜಾಬರ್‌ ಮೃತಪಟ್ಟಿರುವ ಕುರಿತು ಮಾಹಿತಿ ನೀಡಿದ್ದರು. ಕೆಲವೇ ಗಂಟೆಗಳ ಹಿಂದೆ ತಂದೆ-ತಾಯಿಯೊಂದಿಗೆ ಸಂತೋಷದಿಂದ ಮಾತನಾಡಿದ್ದ ಮಗ ಹಠಾತ್‌ ಮೃತಪಟ್ಟಿರುವುದನ್ನು ಕೇಳಿ ಕುಟುಂಬ ಆಘಾತಕ್ಕೊಳಗಾಗಿದೆ.

ಅಮ್ಜದ್ ಉಲ್ಲಾ ಖಾನ್ ಅವರ ಎಕ್ಸ್‌ ಪೋಸ್ಟ್‌:



ವಿದೇಶಾಂಗ ಸಚಿವಾಲಯಕ್ಕೆ ಕುಟುಂಬದಿಂದ ಮನವಿ

ಅಮೆರಿಕದಲ್ಲಿ ಮರಣೋತ್ತರ ಪರೀಕ್ಷೆ ಹಾಗೂ ಸ್ಥಳೀಯ ಕಾನೂನು ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದರಿಂದ, ಮೃತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕುಟುಂಬ ಪರದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಜ್ಜಿಸ್ ಬಚಾವೋ ತೆಹ್ರೀಕ್ ವಕ್ತಾರ ಅಮ್ಜದ್ ಉಲ್ಲಾ ಖಾನ್ ಅವರ ಮೂಲಕ ಕುಟುಂಬವು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ತುರ್ತು ಮನವಿ ಸಲ್ಲಿಸಿದೆ. ʼʼಮಗನ ಅಗಲಿಕೆಯಿಂದ ಕುಟುಂಬ ತೀವ್ರ ಆಘಾತದಲ್ಲಿದೆ. ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ನ್ಯೂಯಾರ್ಕ್‌ನಲ್ಲಿರುವ ಕಾನ್ಸುಲೇಟ್ ಜನರಲ್ ತಕ್ಷಣ ಸ್ಥಳೀಯ ಅಮೆರಿಕನ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಹುಸೇನ್ ಮೃತದೇಹವನ್ನು ಹೈದರಾಬಾದ್‌ಗೆ ತರಲು ಸೂಕ್ತ ವ್ಯವಸ್ಥೆ ಮಾಡಬೇಕುʼʼ ಎಂದು ಕುಟುಂಬಸ್ಥರು ಭಾರತ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.

ಅಮೆರಿಕದ ಸುರಂಗ ರೈಲು ಹಳಿಯಲ್ಲಿ ಭಾರತೀಯ ಯುವತಿ ಸೇರಿ ಇಬ್ಬರ ದಾರುಣ ಅಂತ್ಯ

ಘಟನೆಯ ಬಳಿಕ ಜಾಬರ್‌ಗೆ ಯಾವುದ ರೀತಿ ತಕ್ಷಣದ ವೈದ್ಯಕೀಯ ನೆರವು ದೊರೆತಿತ್ತೇ ಇಲ್ಲವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಘಟನೆ ನಂತರ ಜಾಬರ್‌ನ ಪತ್ನಿ ಸುಳಿವು ಸಿಗದೇ ಇರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಜಾಬರ್‌ನ ಸಾವಿಗೆ ನಿಖರ ಕಾರಣ ತಿಳಿಯಲು ಕುಟುಂಬವು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದೆ.

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಜಾಬರ್

ಜಾಬರ್‌ 2021ರಲ್ಲಿ ಕನೆಕ್ಟಿಕಟ್‌ನ ನ್ಯೂ ಹೆವನ್‌ ವಿಶ್ವವಿದ್ಯಾಲಯದಲ್ಲಿ ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕ್ಕೆ ತರಳಿದ್ದರು. 2023ರಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ ಎಸ್ಟಿಮೇಟರ್ ಎಂಬ ಸಂಸ್ಥೆಯಲ್ಲಿ ಇಂಟರ್ನ್‌ ಆಗಿ ಸೇರಿದ್ದರು. ಜಾಬರ್‌ ಮೂರು ವರ್ಷಗಳ ಕಾಲ ಗ್ರೀನ್‌ ಇಂಟರ್‌ನ್ಯಾಷನಲ್‌ ಅಫಿಲಿಯೆಟ್ಸ್‌ನ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಮತ್ತೆ ಈ ವರ್ಷದ ಜೂನ್‌ನಲ್ಲಿ ಕಂಪನಿ ಬದಲಾಯಿಸಿದ್ದರು. ಬಳಿಕ ಮ್ಯಾಸಚೊಸೆಟ್ಸ್‌ನಲ್ಲಿರುವ ಲೋಚ್ನರ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Ramesh Ballamoole

View all posts by this author