ಟೋಕಿಯೋ: ಜಪಾನ್(Japan)ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಟೆಕ್ಕಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣ(social media)ಗಳಲ್ಲಿ ವೈರಲ್ ಆಗಿದ್ದು, ವಿದೇಶದಲ್ಲಿ ಆತನ ಪ್ರೇರಣಾದಾಯಕ ಸಾಧನೆ ಎಲ್ಲರ ಗಮನ ಸೆಳೆಯುತ್ತಿದೆ. ಮಹಾರಾಷ್ಟ್ರ(Maharashtra)ದ ಸುಮಿತ್ ಚಿಂಚನಸುರೆ(Sumit Chinchanasure) ಎಂಬ ಇಂಜಿನಿಯರ್, ತಾನು ವರ್ಷಕ್ಕೆ 10 ಮಿಲಿಯನ್ ಯೆನ್ (ಅಂದಾಜು ₹58 ಲಕ್ಷ) ಸಂಬಳ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಅವರ ಈ ಔದ್ಯೋಗಿಕ ಪಯಣವು ತಾಂತ್ರಿಕ ಕೌಶಲ್ಯ, ನಿರ್ಧಾರಶಕ್ತಿ ಮತ್ತು ಹೊಂದಿಕೊಳ್ಳುವ ಸಹನೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿ ವೃತ್ತಿಜೀವನಕ್ಕೆ ಅವಕಾಶಗಳು ಹೇಗೆ ದೊರೆಯುತ್ತವೆ ಎಂಬುದನ್ನು ತೋರಿಸುತ್ತದೆ.
ಜಪಾನ್ ಜೀವನದ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸುಮಿತ್
ಜಪಾನ್‌ನ ಸಂಸ್ಕೃತಿ, ಭಾಷೆ ಕಲಿಯುವುದು ಮತ್ತು ಅಲ್ಲಿನ ಕೆಲಸದ ನೀತಿಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿತ್ತು ಎಂದು ಜಪಾನ್ ಜೀವನದ ಆರಂಭಿಕ ಹೋರಾಟಗಳ ಬಗ್ಗೆ ಸುಮಿತ್ ಹೇಳಿಕೊಂಡಿದ್ದಾರೆ. ಭಾರತದಲ್ಲಿನ ತಮ್ಮ ಇಂಜಿನಿಯರಿಂಗ್‌ನಲ್ಲಿ ಹೊಂದಿರುವ ಹೆಚ್ಚಿನ ಅನುಭವ ಜಪಾನ್‌ನಲ್ಲಿ ಬೇಗ ಕೆಲಸ ಗಿಟ್ಟಿಸಿಕೊಳ್ಳಲು ಹಾಗೂ ಜಪಾನ್‌ನ ಕಾರ್ಪೋರೇಟ್ ಜಗತ್ತಿನ್ನಲ್ಲಿ ಶೀಘ್ರ ಗುರುತಿಸಿಕೊಳ್ಳಲು ಸಹಾಯ ಮಾಡಿತು ಎಂದು ಅವರು ಹೇಳಿದರು.
ಈ ಸುದ್ದಿಯನ್ನು ಓದಿ: Viral Video: ಉದ್ಯೋಗಿಗಳಿಗೆ ಈ ಮಾಲೀಕ ನೀಡಿದ ಉಡುಗೊರೆ ಕೇಳಿದ್ರೆ ಶಾಕ್ ಆಗ್ತೀರಾ; ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ
ವೈರಲ್ ಆದ ವಿಡಿಯೋದಲ್ಲಿ ಜಪಾನ್‌ನಲ್ಲಿ ಭಾಷೆ, ಸಾಂಸ್ಕೃತಿ ವ್ಯತ್ಯಾಸಗಳಂತಹ ಆರಂಭಿಕ ಸಮಸ್ಯೆಗಳ ನಡುವೆಯೂ ನಾನೂ ನನ್ನ ಕೆಲಸದ ಗುಣಮಟ್ಟದ ಕಡೆಗೆ ಗಮನಹರಿಸಿದೆ. ಜಪಾನಿಗರ ಕೆಲಸ ಸಂಸ್ಕೃತಿ, ಸಮಯಪಾಲನೆ, ನಿಖರತೆ, ಟೀಮ್ ವರ್ಕ್ ಹಾಗೂ ನಿರಂತರ ಕಲಿಯುವಿಕೆಯ ಬಗ್ಗೆ ಅವರ ವಿವರಿಸಿದ್ದಾರೆ. ಅಲ್ಲದೇ ಜಪಾನ್‌ನ ಕೆಲ ಕಂಪನಿಗಳು ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕಡೆಗೆ ಹೆಚ್ಚಿನ ಗಮನಹರಿಸುತ್ತವೆ ಎಂದು ಅವರು ಹೇಳಿದ್ದಾರೆ. ಜಪಾನ್‌ನಲ್ಲಿ ಕೆಲಸ ಮಾಡುವುದರಿಂದ ಕೇವಲ ಹೆಚ್ಚಿನ ಸಂಬಳವಷ್ಟೇ ಅಲ್ಲ, ಆ ದೇಶದ ವಿಶಿಷ್ಟ ಸಂಸ್ಕೃತಿಯ ಭಾಗವಾಗುವ ಅವಕಾಶವೂ ದೊರೆತಿದೆ ಎಂದು ಸುಮಿತ್ ತಿಳಿಸಿದ್ದಾರೆ.
ಸಂಬಳ, ಕೆಲಸದ ಸಂಸ್ಕೃತಿ ಮತ್ತು ದೈನಂದಿನ ಜೀವನ
₹58 ಲಕ್ಷ ವಾರ್ಷಿಕ ಆದಾಯದೊಂದಿಗೆ, ಜಪಾನ್‌ನ ದುಬಾರಿ ಬದುಕಿನಲ್ಲಿಯೂ ಅವರು ಆರಾಮದಾಯಕ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಉದ್ಯೋಗಿಗಳು ಸಂಬಳದ ಜತೆಗೆ ಉತ್ತಮ ಸೌಲಭ್ಯ ಹಾಗೂ ಉದ್ಯೋಗ ಭದ್ರತೆಯನ್ನೂ ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.
ಜಪಾನ್‌ನಲ್ಲಿ ಕೆಲಸದ ಸಮಯ ಭಾರತ ಅಥವಾ ಪಾಶ್ಚಾತ್ಯ ರಾಷ್ಟ್ರಗಳಿಗಿಂತ ಹೆಚ್ಚಾಗಿರಬಹುದು. ಆದರೆ, ಇತ್ತೀಚಿನ ಹಲವಾರು ಮಾಡರ್ನ್ ಕಂಪನಿಗಳು ವಿಶೇಷವಾಗಿ ವಿದೇಶಿ ನೌಕರರಿಗಾಗಿ ವರ್ಕ್ ಲೈಫ್ ಬ್ಯಾಲೆನ್ಸಿಂಗ್‌ಗೆ ಹೆಚ್ಚಿನ ಮಹತ್ವ ನೀಡುತ್ತಿವೆ ಎಂದು ಸುಮಿತ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ: Navjot Sidhu: 2027ರ ವಿಶ್ವಕಪ್ ಗೆಲ್ಲಬೇಕಿದ್ದರೆ ಗಂಭೀರ್-ಅಗರ್ಕರ್ ಕಿತ್ತೊಗೆಯಬೇಕು; ವೈರಲ್ ಪೋಸ್ಟ್ ಬಗ್ಗೆ ನವಜೋತ್ ಸಿಧು ಸ್ಪಷನೆ
ಜಪಾನೀ ಭಾಷೆ ಕಲಿಯುವುದು ಕೆಲಸದಲ್ಲಿ ಯಶಸ್ಸು ಸಾಧಿಸಲು ಮಾತ್ರವಲ್ಲ, ದೈನಂದಿನ ಜೀವನ ಸುಗಮಗೊಳಿಸಲು ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಅಗತ್ಯವೆಂದು ಅವರು ಹೇಳಿದ್ದಾರೆ. ಸುಮಿತ್ ಅವರ ಈ ಕಥೆ ವಿದೇಶದಲ್ಲಿ, ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂಬ ಕನಸು ಹೊತ್ತಿರುವ ಅನೇಕ ಯುವ ಭಾರತೀಯರಿಗೆ ಸ್ಫೂರ್ತಿಯಾಗಿದೆ