Iran protests: ಇರಾನ್‌ನಲ್ಲಿ ವ್ಯಾಪಕ ದಂಗೆ, ಹೆಣಗಳ ರಾಶಿಯಿಂದ ತುಂಬಿಹೋದ ಆಸ್ಪತ್ರೆಗಳು
ಇರಾನ್ ಸರ್ಕಾರ ಜನರ ಸಾವಿನ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಮಾನವ ಹಕ್ಕು ಸಂಸ್ಥೆಯೊಂದರ ಪ್ರಕಾರ 116 ಜನ 14 ದಿನಗಳ ಹಿಂಸೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ ಕಳೆದ 2 ದಿನದಲ್ಲಿ 2000 ಜನರು ಬಲಿಯಾಗಿದ್ದಾರೆ ಎಂದು ಇಸ್ರೇಲ್‌ನ ‘ಜೆರುಸಲೇಂ ಪೋಸ್ಟ್’ ವರದಿ ಮಾಡಿದೆ. ಭದ್ರತಾ ಪಡೆಗಳ ಹಿಂಸಾತ್ಮಕ ಕಾರ್ಯಾಚರಣೆ ಕಾರಣ ಟೆಹ್ರಾನ್ ಸೇರಿದಂತೆ ಹಲವಾರು ನಗರಗಳ ಆಸ್ಪತ್ರೆಗಳು ಶವಗಳಿಂದ ತುಂಬಿಹೋಗಿವೆ.
ಇರಾನ್ ದಂಗೆ -
ಟೆಹ್ರಾನ್, ಜ.12: ಇರಾನ್‌ನಾದ್ಯಂತ (Iran protests) ಸರ್ವಾಧಿಕಾರಿ ಖಮೇನಿ (Seyyed Ali Hosseini Khamenei) ವಿರೋಧಿ ಪ್ರತಿಭಟನೆಗಳು ದೊಡ್ಡ ಪ್ರಮಾಣದಲ್ಲೆ ಬೆಳೆದಿರುವ ಬೆನ್ನಲ್ಲೇ, ಪ್ರತಿಭಟನಾಕಾರರನ್ನು ಸೇನಾ ಪಡೆಗಳು ನಿರ್ದಯವಾಗಿ ಸಾಯಿಸುತ್ತಿವೆ ಎಂಬ ವರದಿಗಳು ಲಭಿಸಿವೆ. ಹೀಗಾಗಿ ಇರಾನ್‌ನಾದ್ಯಂತದ ಆಸ್ಪತ್ರೆಗಳು ಸ್ಥಿತಿ ನಿಭಾಯಿಸಲು ಹೆಣಗಾಡುತ್ತಿವೆ. ಹೆಣಗಳ ರಾಶಿಯಿಂದ ಆಸ್ಪತ್ರೆಗಳು ತುಂಬಿ ಹೋಗುತ್ತಿವೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.
ಇರಾನ್ ಸರ್ಕಾರ ಜನರ ಸಾವಿನ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಮಾನವ ಹಕ್ಕು ಸಂಸ್ಥೆಯೊಂದರ ಪ್ರಕಾರ 116 ಜನ 14 ದಿನಗಳ ಹಿಂಸೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ ಕಳೆದ 2 ದಿನದಲ್ಲಿ 2000 ಜನರು ಬಲಿಯಾಗಿದ್ದಾರೆ ಎಂದು ಇಸ್ರೇಲ್‌ನ ‘ಜೆರುಸಲೇಂ ಪೋಸ್ಟ್’ ವರದಿ ಮಾಡಿದೆ. ಭದ್ರತಾ ಪಡೆಗಳ ಹಿಂಸಾತ್ಮಕ ಕಾರ್ಯಾಚರಣೆ ಕಾರಣ ಟೆಹ್ರಾನ್ ಸೇರಿದಂತೆ ಹಲವಾರು ನಗರಗಳ ಆಸ್ಪತ್ರೆಗಳ ತುರ್ತು ವಾರ್ಡ್‌ಗಳಲ್ಲೇ ಒಂದರ ಮೇಲೊಂದು ದೇಹಗಳನ್ನು ರಾಶಿ ಹಾಕಲಾಗಿದೆ ಎಂದು ವರದಿಗಳು ಹೇಳಿವೆ.
‘ಉತ್ತರ ಇರಾನ್‌ನ ರಾಶ್ಟ್‌ನಲ್ಲಿರುವ ಪೌರ್ಸಿನಾ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮಾತ್ರ 70 ಶವಗಳನ್ನು ತರಲಾಗಿದೆ. ಶವಾಗಾರವು ಪೂರ್ಣ ಸಾಮರ್ಥ್ಯವನ್ನು ತಲುಪಿದೆ. ಸ್ಥಳಾವಕಾಶ ಕಲ್ಪಿಸಲು ಸಿಬ್ಬಂದಿ ಶವಗಳನ್ನು ತೆಗೆದುಹಾಕಬೇಕಾಯಿತು. ಶವಗಳನ್ನು ಒಂದರ ಮೇಲೊಂದು ಇರಿಸಲಾಯಿತು. ಅದರಿಂದಲೂ ಶವಾಗಾರವು ತುಂಬಿದ ನಂತರ, ಶವಗಳನ್ನು ಆಸ್ಪತ್ರೆಯ ಪ್ರಾರ್ಥನಾ ಕೋಣೆಯಲ್ಲಿ ಜೋಡಿಸಲಾಯಿತು.’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
Iran protests: ಇರಾನ್‌ನಲ್ಲಿ ಬೀದಿಗಿಳಿದ ಜನ, ಭಾರಿ ಪ್ರತಿಭಟನೆ, 7 ಮಂದಿ ಸಾವು
ಟೆಹ್ರಾನ್ ಆಸ್ಪತ್ರೆಯ ವೈದ್ಯರೊಬ್ಬರು ಮಾತನಾಡಿ, ‘ಅನೇಕರು ಗುಂಡೇಟಿನಿಂದ ಆಸ್ಪತ್ರೆಗೆ ಬಂದರು. ಯುವಕರ ತಲೆಗೆ, ಅವರ ಹೃದಯಕ್ಕೂ ನೇರ ಗುಂಡುಗಳು ಬಿದ್ದಿದ್ದವು. ಗಾಯಾಳುಗಳ ಸಂಖ್ಯೆ ಹೆಚ್ಚಿದ್ದ ಕಾರಣ ಲಭ್ಯ ಇರುವ ಕೆಲವೇ ವೈದ್ಯರಿಗೆ ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ) ಮಾಡಲು ಸಹ ಸಾಧ್ಯವಾಗಲಿಲ್ಲ ಎಂದರು. ‘ಆಸ್ಪತ್ರೆಗಳಲ್ಲಿ ಗಾಯಗೊಂಡ ರೋಗಿಗಳನ್ನು ಉಪಚರಿಸಲು ಹಾಗೂ ಸರ್ಜರಿ ಮಾಡಲು ಸಾಕಷ್ಟು ಶಸ್ತ್ರಚಿಕಿತ್ಸಕರ ಕೊರತೆಯಿದೆ’ ಎಂದು ವೈದ್ಯರು ಹೇಳಿದ್ದಾರೆ.
ಆಸ್ಪತ್ರೆಯ ಕೆಲಸಗಾರನೊಬ್ಬ ಮಾತನಾಡಿ, ಮೃತರು ಹಾಗೂ ಗಾಯಾಳುಗಳಲ್ಲಿ ಹೆಚ್ಚಿನವರು 20ರಿಂದ 25 ವರ್ಷ ವಯಸ್ಸಿನವರಾಗಿದ್ದರು. ಅನೇಕ ಪ್ರತಿಭಟನಾಕಾರರ ಕಣ್ಣಿಗೆ ಗುಂಡು ಹಾರಿಸಲಾಗಿತ್ತು. ಕಣ್ಣಿಗೆ ಗುಂಡು ತಗುಲಿದ ರೋಗಿಯೊಬ್ಬರ ತಲೆಯ ಹಿಂಭಾಗದಿಂದ ಗುಂಡು ಹೊರಹೋಗಿರುವುದನ್ನು ನೋಡಿದ್ದೇನೆ’ ಎಂದರು.
ಪ್ರತಿಭಟನಾಕಾರರ ಜತೆ ಮಾತುಕತೆಗೆ ಸಿದ್ಧ: ಇರಾನ್ ಅಧ್ಯಕ್ಷ
ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧ ದಂಗೆ ಭುಗಿಲೆದ್ದಿರುವ ನಡುವೆಯೇ ಪ್ರತಿಭಟನಾಕಾರರ ಜತೆ ಮಾತುಕತೆಗೆ ಸಿದ್ಧ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಜನರಿಗೆ ಕಳವಳವಿದೆ. ನಾವು ಅವರೊಂದಿಗೆ ಕುಳಿತು ಮಾತನಾಡಬೇಕು. ಅದು ನಮ್ಮ ಕರ್ತವ್ಯ. ಅವರ ಸಮಸ್ಯೆಯನ್ನು ಬಗೆಹರಿಸಬೇಕಿದೆ’ ಎಂದರು. ಆದರೆ, ಇದೇ ವೇಳೆ, ‘ಪ್ರತಿಭಟನಾಕಾರರು ಇಡೀ ಸಮಾಜವನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಗಲಭೆಕೋರರು ಆ ರೀತಿ ಮಾಡುವುದಕ್ಕೆ ಅವಕಾಶ ನೀಡಬಾರದು’ ಎಂದೂ ಕರೆ ನೀಡಿದರು.