ಇಸ್ಲಾಮಾಬಾದ್, ಮಾ. 22: ಶತ್ರು ರಾಷ್ಟ್ರ ಪಾಕಿಸ್ತಾನದಿಂದ ಭಾರತಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಉಗ್ರ ಸಂಘಟನೆ ಲಷ್ಕರ್-ಎ-ತೋಯ್ಬಾದ (Lashkar-e-Taiba) ಕಮಾಂಡರ್ ಬಿಲಾಲ್ ಆರಿಫ್ ಸರಾಫಿಯ (Bilal Arif Sarafi) ಹತ್ಯೆಯಾಗಿದೆ. ಕುಟುಂಬಸ್ಥರೇ ಆತನನ್ನು ಕೊಲೆಗೈದಿದ್ದಾರೆ. ಇರಿದು, ಗುಂಡಿಟ್ಟು ಆತನನ್ನು ಕೊಲೆ ಮಾಡಲಾಗಿದೆ. ಈದ್ ಆಚರಣೆಯ ಬಳಿಕ ಶನಿವಾರ (ಮಾರ್ಚ್ 21) ಈ ಹತ್ಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಭಾರತದ ಯಾವುದೇ ಪ್ರಯತ್ನವಿಲ್ಲದೆಯೇ ಶತ್ರು ಸಂಹಾರವಾದಂತಾಗಿದೆ.
ಪಾಕಿಸ್ತಾನದ ಮುರಿಡ್ಕೆಯ ಮರ್ಕಝ್ ಬಳಿಯ ನಾಶವಾದ ಲಷ್ಕರ್-ಎ-ತೊಯ್ಬಾ ಪ್ರಧಾನ ಕಚೇರಿಯ ಬಳಿ ಈ ಘಟನೆ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಹತ್ಯೆಯ ನಿಜವಾದ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ ಕುಟುಂಬದೊಳಗಿನ ಕಲಹದಿಂದ ಈ ಕೊಲೆ ನಡೆದಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಮುರಿಡ್ಕೆಯ ಉಗ್ರ ತಾಣವನ್ನು ಕಳೆದ ವರ್ಷ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ನಾಶಪಡಿಸಲಾಗಿತ್ತು.
ಲಷ್ಕರ್-ಎ-ತೋಯ್ಬಾದ ಉಗ್ರನ ಹತ್ಯೆ:
ʼʼಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಈಗಾಗಲೇ ಬಂಧಿಸಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಬಿಲಾಲ್ ಆರಿಫ್ ಸರಾಫಿ ನೆಲೆದ ಮೇಲೆ ಬಿದ್ದುಕೊಂಡಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತನ ಶವವನ್ನು ತೋರಿಸುವ ವಿಡಿಯೊ ಸದ್ದು ಮಅಡುತ್ತಿದೆ. ಅದಾಗ್ಯೂ ಈ ವಿಡಿಯೊದ ಅಸಲಿಯತ್ತು ಇನ್ನೂ ದೃಢಪಟ್ಟಿಲ್ಲ.
ಲಷ್ಕರ್-ಇ-ತೋಯ್ಬಾದ ನಾಲ್ಕು ಮಂದಿ ಉಗ್ರರು ಮಟಾಶ್
ವರದಿಗಳ ಪ್ರಕಾರ, ಲಷ್ಕರ್-ಎ-ತೊಯ್ಬಾದ ಮುರಿಡ್ಕೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿಲಾಲ್ ಉಗ್ರ ಗುಂಪಿಗೆ ಯುವಕರನ್ನು ನೇಮಿಸುತ್ತಿದ್ದ ಎನ್ನಲಾಗಿದೆ. ಜನರ ತಲೆಗೆ ಉಗ್ರವಾದವನ್ನು ತುಂಬುವ ಮೂಲಕ ಬ್ರೈನ್ ವಾಶ್ ಮಾಡುತ್ತಿದ್ದ. ಅದಾಗ್ಯೂ ಆತ ಭಾರತದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಯಲ್ಲಿ ನೇರವಾಗಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಭಾರತ ಆತನನ್ನು ಪತ್ತೆಗೆ ಮುಂದಾಗಿರಲಿಲ್ಲ.
ಯಾರು ಈ ಬಿಲಾಲ್?
ಬಿಲಾಲ್ ಆರಿಫ್ ಸರಾಫಿ 2005ರಿಂದ ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲ್ಪಟ್ಟ ಲಷ್ಕರ್-ಎ-ತೊಯ್ಬಾ ಜತೆ ಸಂಬಂಧ ಹೊಂದಿದ್ದ. ನಿಧಿ ಸಂಗ್ರಹಣೆ, ಶಸ್ತ್ರಾಸ್ತ್ರಗಳ ಖರೀದಿ, ಉಗ್ರರ ನೇಮಕಾತಿ, ತರಬೇತಿ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಆತ ಭಾಗಿಯಾಗಿದ್ದ. ಆತ ತೈಬಾ ಕಾಲೋನಿಯಲ್ಲಿ ಇತರ ಹಿರಿಯ ಕಮಾಂಡರ್‌ಗಳೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆ
ಭಯೋತ್ಪಾದನೆಯ ತವರೂರು ಎಂದೇ ಗುರುತಿಸ್ಪಡುವ ಪಾಕಿಸ್ತಾನದಲ್ಲಿ ಹಲವು ವರ್ಷಗಳಿಂದ ಉಗ್ರ ಚಟುವಟಿಕೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಸದ್ಯ ಭಯೋತ್ಪಾದನೆಯೇ ಆ ದೇಶಕ್ಕೆ ಮುಳುವಾಗಿ ಪರಿಣಮಿಸಿದೆ. 2025ರಲ್ಲಿ ಅಲ್ಲಿ 1,045 ಉಗ್ರ ದಾಳಿ ನಡೆದು, 1,139 ಸಾವಿಗೆ ಕಾರಣವಾಯಿತು. ಒಟ್ಟು 1,595 ಜನರು ಗಾಯಗೊಂಡಿದ್ದರು.
ಕಾಬೂಲ್ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿದ ಪಾಕಿಸ್ತಾನ
ಪಾಕಿಸ್ತಾನದಲ್ಲಿ ಅತಿ ಹೆಚ್ಚು ಭಯೋತ್ಪಾದಕ ದಾಳಿಗೆ ಎರಡು ಪ್ರಾಂತ್ಯಗಳು ಸಾಕ್ಷಿಯಾಗಿವೆ. ಅವುಗಳೆಂದರೆ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್. ಇಲ್ಲೇ ಶೇಕಡಾ 74ರಷ್ಟು ದಾಳಿ ಮತ್ತು ಶೇಕಡಾ 67ರಷ್ಟು ಸಾವು ಸಂಭವಿಸಿದೆ. ಪ್ರಬಲ ಭಯೋತ್ಪಾದಕ ಗುಂಪು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ - ಇದು 595 ದಾಳಿಗಳನ್ನು ನಡೆಸಿ ಮೊದಲ ಸ್ಥಾನದಲ್ಲಿದೆ ಮತ್ತು 637 ಸಾವುಗಳಿಗೆ ಕಾರಣವಾಗಿದೆ.
ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.