ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Modi-Trump Meet: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರದಲ್ಲಿ ಮುಂದುವರಿಯಲು ಮೋದಿ-ಟ್ರಂಪ್‌ ಸಮ್ಮತಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದು, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನಾಗರಿಕ ಪರಮಾಣು ಒಪ್ಪಂದದಡಿಯಲ್ಲಿ ಭಾರತದಲ್ಲಿ ಅಮೆರಿಕ ವಿನ್ಯಾಸಗೊಳಿಸಿದ ಪರಮಾಣು ರಿಯಾಕ್ಟರ್‌ಗಳನ್ನು ನಿರ್ಮಿಸಲು ಯೋಜನೆ ಮುಂದುವರಿಯುವುದಾಗಿ ಮೋದಿ ಹೇಳಿದ್ದಾರೆ.

ಪರಮಾಣು ಸಹಕಾರದ ಬಗ್ಗೆ ಮೋದಿ ಟ್ರಂಪ್‌ ಮಾತುಕತೆ

ಪರಮಾಣು ಸಹಕಾರಕ್ಕೆ ಮೋದಿ ಸಹಿ

Profile Vishakha Bhat Feb 14, 2025 3:24 PM

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದು, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನಾಗರಿಕ ಪರಮಾಣು ಒಪ್ಪಂದದಡಿಯಲ್ಲಿ ಭಾರತದಲ್ಲಿ ಅಮೆರಿಕ ವಿನ್ಯಾಸಗೊಳಿಸಿದ ಪರಮಾಣು ರಿಯಾಕ್ಟರ್‌ಗಳನ್ನು (Atomic Reactors) ತಯಾರಿಸಲು ಈ ಮೊದಲು ಸಹಿ ಹಾಕಿದ್ದ ಯೋಜನೆ ಮುಂದುವರಿಯುವುದಾಗಿ ಮೋದಿ ಹೇಳಿದ್ದಾರೆ.ಗುರುವಾರ ಶ್ವೇತಭವನದಲ್ಲಿ ನಡೆದ ಮಾತುಕತೆಯಲ್ಲಿ, ಉಭ.ಯ ನಾಯಕರು ಇಂಧನ ಸಹಕಾರವನ್ನು ಗಣನೀಯವಾಗಿ ವಿಸ್ತರಿಸಲು ನಿರ್ಧರಿಸಿದ್ದಾರೆ.

2008ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ ಸಹಿ ಹಾಕಲಾದ ನಾಗರಿಕ ಪರಮಾಣು ಒಪ್ಪಂದದ ಮಾತುಕತೆಯಾದ ನಂತರ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಈಗ ಭಾರತದಲ್ಲಿ ದೊಡ್ಡ ರಿಯಾಕ್ಟರ್‌ಗಳನ್ನು ತಯಾರಿಸುವುದು ಮಾತ್ರವಲ್ಲದೇ ಮುಂದುವರಿದ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳನ್ನು ನಿರ್ಮಿಸುವಲ್ಲಿ ಉಭಯ ದೇಶಗಳು ಆಸಕ್ತಿ ತೋರಿವೆ.

ಪರಮಾಣು ಶಕ್ತಿ ಕಾಯ್ದೆ ಮತ್ತು ಪರಮಾಣು ರಿಯಾಕ್ಟರ್‌ಗಳಿಗೆ ಸಂಬಂಧಿಸಿದ ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ (CLNDA)ಗೆ ತಿದ್ದುಪಡಿಗಳನ್ನು ಕೈಗೊಳ್ಳಲು ಭಾರತ ಸರ್ಕಾರವು ಇತ್ತೀಚೆಗೆ ಪ್ರಕಟಿಸಿದ ಬಜೆಟ್ ಅನ್ನು ಮೋದಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜನವರಿಯಲ್ಲಿ, ಭಾಭಾ ಪರಮಾಣು ಸಂಶೋಧನಾ ಕೇಂದ್ರ (BARC), ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ (IGCAR) ಮತ್ತು ಭಾರತೀಯ ಅಪರೂಪದ ಭೂಮಿ (IRE) ಮೇಲಿನ ನಿರ್ಬಂಧಗಳನ್ನು ಅಮೆರಿಕ ತೆಗೆದುಹಾಕಿದೆ.

ಈ ಸುದ್ದಿಯನ್ನೂ ಓದಿ: Modi-Trump Meet: ಶ್ವೇತಭವನದಲ್ಲಿ ಮೋದಿ-ಟ್ರಂಪ್ ಭೇಟಿ; ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ

ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 500 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಗುರಿಯನ್ನು ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿದ ಮೋದಿ ಇಂದು, ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. 2030 ರ ವೇಳೆಗೆ 500 ಶತಕೋಟಿ ಡಾಲರ್ ತಲುಪುತ್ತೇವೆ ಎಂದು ಹೇಳಿದ್ದಾರೆ. ಭಾರತದ ಇಂಧನ ಭದ್ರತೆ ಮತ್ತು ಇಂಧನ ಮೂಲಸೌಕರ್ಯದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮಾತನಾಡಿದರು. ಪರಮಾಣು ಇಂಧನ ಸಹಯೋಗದ ಬಗ್ಗೆ, ವಿಶೇಷವಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಬಗ್ಗೆ ಅವರು ಮಾತುಕತೆ ನಡೆಸಿದ್ದಾರೆ. ಭಾರತದ ರಕ್ಷಣಾ ಸನ್ನದ್ಧತೆಯಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸುತ್ತದೆ. ಮುಂಬರುವ ದಿನಗಳಲ್ಲಿ, ಹೊಸ ತಂತ್ರಜ್ಞಾನ ಮತ್ತು ಉಪಕರಣಗಳು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ" ಎಂದು ಅವರು ಹೇಳಿದ್ದಾರೆ.