ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉಕ್ರೇನ್‌ ವಿರುದ್ಧ ರಷ್ಯಾ ಅಣ್ವಸ್ತ್ರ ಬಳಸದಂತೆ ತಡೆದಿದ್ದು ಪ್ರಧಾನಿ ನರೇಂದ್ರ ಮೋದಿ: ಮಹತ್ವದ ಮಾಹಿತಿ ಹಂಚಿಕೊಂಡ ಪೋಲೆಂಡ್‌

Russia-Ukraine War: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ನಡೆಸಿರುವುದು ಮತ್ತೊಮ್ಮೆ ಸಾಬೀತಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಕುರಿತು ಮಾತನಾಡಿರುವ ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪರಮಾಣು ಶಸ್ತ್ರಾಸ್ತ್ರ ಬಳಸದಂತೆ ಮೋದಿ ಮನವೊಲಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ವ್ಲಾಡಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ)

ದೆಹಲಿ, ಜು. 14: ಹಿಂದಿನಿಂದಲೂ ಭಾರತ ಹಿಂಸೆ, ಯುದ್ಧವನ್ನು ವಿರೋಧಿಸುತ್ತಲೇ ಬರುತ್ತಿದೆ. ಯಾವುದೇ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಬೇಕೆಂದು ಯಾವಾಗಲೂ ಪ್ರತಿಪಾದಿಸುತ್ತಿದೆ. ರಷ್ಯಾ-ಉಕ್ರೇನ್‌, ಅಮೆರಿಕ-ಇಸ್ರೇಲ್‌-ಇರಾನ್‌ ಯುದ್ಧವನ್ನು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ಸಲಹೆ ನೀಡುತ್ತಲೇ ಬಂದಿದೆ. ಇದೀಗ ಪೋಲೆಂಡ್‌ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದೆ. 2022ರಲ್ಲಿ ರಷ್ಯಾವು ಉಕ್ರೇನ್‌ ವಿರುದ್ಧ ಅಣ್ವಸ್ತ್ರ ಬಳಸಲು ಮುಂದಾದಾಗ ಭಾರತ ತಡೆದಿತ್ತು ಎಂದು ಪೋಲೆಂಡ್ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ (Wladyslaw Teofil Bartoszewski) ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧವು ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆದ ಭಾರತದ ನಿಲುವನ್ನು ಪೋಲೆಂಡ್ ಶ್ಲಾಘಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಹಳ ಗೌರವಿಸುವ ಕೆಲವೇ ಕಲವು ವಿಶ್ವ ನಾಯಕರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಒಬ್ಬರು ಎಂದು ಹೇಳಿದ್ದಾರೆ.

ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ ಅವರ ಹೇಳಿಕೆ:



ಪ್ರಧಾನಿ ಮೋದಿ ಪಾತ್ರ

2022ರ ಅಂತ್ಯದ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ʼʼರಷ್ಯಾ-ಉಕ್ರೇನ್‌ ಯುದ್ಧದ ಸಮಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ವ್ಲಾಡಿಮಿರ್ ಪುಟಿನ್ ಮನವೊಲಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದರುʼʼ ಎಂದು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿದ ಬಾರ್ಟೋಸ್ಜೆವ್ಸ್ಕಿ, ʼʼರಷ್ಯಾದೊಂದಿಗಿನ ಭಾರತದ ದಶಕಗಳಷ್ಟು ಹಳೆಯ ಸಂಬಂಧವು ಶಾಂತಿಗಾಗಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆʼʼ ಎಂದಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ

ʼʼಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಸಿದ್ಧ ರಾಜಕಾರಣಿ. ಅವರು ಬಹಳ ಗೌರವಾನ್ವಿತರು. ಭಾರತವು ರಷ್ಯಾದ ಒಕ್ಕೂಟದೊಂದಿಗೆ ಮತ್ತು ಅದಕ್ಕೂ ಮೊದಲು, ಅಲಿಪ್ತ ರಾಷ್ಟ್ರವಾಗಿ ಸೋವಿಯತ್ ಒಕ್ಕೂಟದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದೆ. ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿ ಅವರ ಮಾತಿಗೆ ಗೌರವ ಕೊಡುತ್ತಾರೆʼʼ ಎಂದು ವಿವರಿಸಿದ್ದಾರೆ.

ರಷ್ಯಾ ಜತೆಗಿನ ಸಂವಹನ ಹೆಚ್ಚು ಕಷ್ಟವಾಗಿರುವ ಸಮಯದಲ್ಲಿ ಅಧ್ಯಕ್ಷರ ಮೇಲೆ ಪ್ರಭಾವ ಬೀರುವ ಕೆಲವೇ ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು. ಭಾರತದ ಜತೆಗೆ ರಷ್ಯಾ ಚೀನಾದ ಮಾತನ್ನೂ ಆಲಿಸುತ್ತದೆ ಎಂದು ತಿಳಿಸಿದ್ದಾರೆ. "ಪ್ರಧಾನಿ ಮೋದಿ ಅವರೊಂದಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಪುಟಿನ್‌ ಮೇಲೆ ಪ್ರಭಾವ ಬೀರುವ ನಾಯಕರುʼʼ ಎಂದು ಬಾರ್ಟೋಸ್ಜೆವ್ಸ್ಕಿ ಅಭಿಪ್ರಾಯಪಟ್ಟಿದ್ದಾರೆ.

ಪುಟಿನ್‌ ಭಾರತ ಭೇಟಿ ಬೆನ್ನಲ್ಲೇ ಮೋದಿಗೆ ಕರೆ ಮಾಡಿದ ಟ್ರಂಪ್‌! ಆಗಿದ್ದೇನು?

ಭಾರತದ ಬಗ್ಗೆ ಮೆಚ್ಚುಗೆ ಸೂಚಿಸಿದ ಪುಟಿನ್‌

ಭಾರತದ ಸ್ವತಂತ್ರ ವಿದೇಶಾಂಗ ನೀತಿಗೆ ಪುಟಿನ್ ಮೆಚ್ಚುಗೆ ಸೂಚಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. "ಪ್ರಧಾನಿ ನರೇಂದ್ರ ಮೋದಿ ಮತ್ತು ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದ ಮೇಲೆ ಒತ್ತಡ ಹೇರುವುದು ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಮಾರಕ ಎಂದು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ" ಎಂದು ಪುಟಿನ್ ತಿಳಿಸಿದ್ದರು. "ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಮುಖ್ಯವೆಂದು ಭಾವಿಸುವ ಎಲ್ಲ ದೇಶಗಳೊಂದಿಗೆ ತನ್ನ ಸಂಬಂಧವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸಂತಸ ತಂದಿದೆ" ಎಂದು ಅವರು ಹೇಳಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author