ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿರುದ್ಧವೇ ತಿರುಗಿಬಿದ್ದ ಸಾರ್ವಜನಿಕರು; ಪ್ರಾಂತ್ಯ ವಿಭಜನೆಗೆ ಜನಾಕ್ರೋಶ

Asim Munir: ಪಾಕಿಸ್ತಾನ ಸೇನಾ ಮುಖ್ಯಸ್ಥ, ಫೀಲ್ಡ್‌ ಮಾರ್ಷಲ್‌ ಅಸಿಮ್ ಮುನೀರ್ ವಿರುದ್ಧ ಜನಾಕ್ರೋಶ ತೀವ್ರಗೊಂಡಿದ್ದು, ಕರಾಚಿಯಲ್ಲಿ ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಅಸಿಮ್ ಮುನೀರ್ ಪಂಜಾಬ್, ಸಿಂಧ್, ಖೈಬರ್ ಪಖ್ತುಂಕ್ವಾ ಮತ್ತು ಬಲೂಚಿಸ್ತಾನ್ ಎಂಬ ನಾಲ್ಕು ಪ್ರಮುಖ ಆಡಳಿತಾತ್ಮಕ ಪ್ರಾಂತ್ಯಗಳ ನಕ್ಷೆಗಳನ್ನು ಮರುರೂಪಿಸಲು ಮುಂದಾಗಿರುವುದು ಇದಕ್ಕೆ ಕಾರಣ.

ಕರಾಚಿಯಲ್ಲಿ ಪ್ರತಿಭಟನೆ ನಡೆಯಿತು

ಇಸ್ಲಾಮಾಬಾದ್‌, ನ. 24: ಪಾಕಿಸ್ತಾನ ಸೇನಾ ಮುಖ್ಯಸ್ಥ, ಫೀಲ್ಡ್‌ ಮಾರ್ಷಲ್‌ ಅಸಿಮ್ ಮುನೀರ್ (Asim Munir) ವಿರುದ್ಧ ಜನಾಕ್ರೋಶ ತೀವ್ರಗೊಂಡಿದ್ದು, ಪ್ರಮುಖ ನಗರ ಕರಾಚಿಯಲ್ಲಿ ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಅಸಿಮ್ ಮುನೀರ್ ಪಂಜಾಬ್, ಸಿಂಧ್, ಖೈಬರ್ ಪಖ್ತುಂಕ್ವಾ ಮತ್ತು ಬಲೂಚಿಸ್ತಾನ್ ಎಂಬ ನಾಲ್ಕು ಪ್ರಮುಖ ಆಡಳಿತಾತ್ಮಕ ಪ್ರಾಂತ್ಯಗಳ ನಕ್ಷೆಗಳನ್ನು ಮರುರೂಪಿಸಲು ಮುಂದಾಗಿರುವುದು ರಾಜಕೀಯ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಿಂಧ್ ಪ್ರಾಂತ್ಯವನ್ನು ವಿಭಜಿಸುವ ಅಥವಾ ಹೊಸ ಆಡಳಿತ ಘಟಕಗಳನ್ನು ರಚಿಸುವ ಈ ಪ್ರಸ್ತಾವಿತ ಕ್ರಮವನ್ನು ವಿರೋಧಿಸಿ ಕರಾಚಿಯಲ್ಲಿ ಸಾವಿರಾರು ಸಿಂಧಿಗಳು ತಮ್ಮ ಸಾಂಪ್ರದಾಯಿಕ ಅಜ್ರಾಕ್ ಶಾಲು ಮತ್ತು ಟೋಪಿಗಳನ್ನು ಧರಿಸಿ ಬೀದಿಗಿಳಿದರು.

ಕರಾಚಿಯಲ್ಲಿ ಜೇ ಸಿಂಧ್ ರಹಬರ್ ಸಮಿತಿಯು ಈ ರ‍್ಯಾಲಿಯನ್ನು ಆಯೋಜಿಸಿತು. ಇದರಲ್ಲಿ ರಾಷ್ಟ್ರೀಯತಾವಾದಿ ನಾಯಕರು, ರಾಜಕೀಯ ಕಾರ್ಯಕರ್ತರು, ವಕೀಲರು ಮತ್ತು ನಾಗರಿಕರು ಭಾಗವಹಿಸಿದ್ದರು ಎಂದು 'ಪಾಕಿಸ್ತಾನ್ ಟುಡೇ' ವರದಿ ಮಾಡಿದೆ.

ಕರಾಚಿಯಲ್ಲಿ ತೀವ್ರಗೊಂಡ ಪ್ರತಿಭಟನೆ:



ಪ್ರತಿಭನಾಕಾರರು ಸಿಂಧ್‌ನ ಪ್ರಸ್ತುತ ಗಡಿಗಳಲ್ಲಿನ ಯಾವುದೇ ಬದಲಾವಣೆಗಳನ್ನು ವಿರೋಧಿಸುವುದಾಗಿ ಪುನರುಚ್ಚರಿಸಿದರು. ಸಿಂಧ್‌ನ ಪ್ರಾದೇಶಿಕ ಅಖಂಡತೆಯು ರಾಜಿ ಮಾಡಿಕೊಳ್ಳಲಾಗದ ವಿಷಯವಾಗಿದ್ದು, ಪ್ರಾಂತ್ಯದ ಭೌಗೋಳಿಕ ಅಥವಾ ಆಡಳಿತಾತ್ಮಕ ಘಟಕಗಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಜನರ ಇಚ್ಛೆಯಂತೆಯೇ ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಪಾಕಿಸ್ತಾನವನ್ನು 12ರಿಂದ 160 ಪ್ರಾಂತ್ಯಗಳಾಗಿ ವಿಭಜಿಸಲು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಯೋಜನೆ

ಸಿಂಧ್‌ನ ಗುರುತು ಅದರ ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯನ್ನು ಆಧರಿಸಿದೆ ಮತ್ತು ಅದನ್ನು ಆಡಳಿತಾತ್ಮಕ ಅನುಕೂಲತೆಯ ವಿಷಯವಾಗಿ ಮಾತ್ರ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಹೊಸ ಪ್ರಾಂತ್ಯಗಳು ಅಥವಾ ಆಡಳಿತ ಘಟಕಗಳ ರಚನೆಯ ಕುರಿತು ಜನಾಭಿಪ್ರಾಯ ಸಂಗ್ರಹಿಸುವುದಕ್ಕೂ ವಿರೋಧ ವ್ಯಕ್ತಪಡಿಸಿದರು.

ಶೆಹಬಾಜ್ ಷರೀಫ್ ನೇತೃತ್ವದ ಫೆಡರಲ್ ಸರ್ಕಾರ ಪ್ರಾಂತ್ಯದೊಳಗೆ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸುವ ಅಥವಾ ವಿಭಜನೆಯನ್ನು ಉಂಟುಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಹೋರಾಟಗಾರರು ಎಚ್ಚರಿಸಿದರು. ಜನರ ಒಪ್ಪಿಗೆಯನ್ನು ಪಡೆಯದೆ ಆಡಳಿತಾತ್ಮಕ ಬದಲಾವಣೆಗಳನ್ನು ಹೇರುವ ಯಾವುದೇ ಪ್ರಯತ್ನವನ್ನು ಸಾಂವಿಧಾನಿಕ, ಕಾನೂನು ಮತ್ತು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಪ್ರಶ್ನಿಸಲಾಗುವುದು ಎಂದು ಸೂಚಿಸಿದರು.

ಮುನೀರ್‌ ಯೋಜನೆ ಏನು?

ಮುನೀರ್‌ ಅವರ ಯೋಜನೆಯು ದೇಶದ ನಾಲ್ಕು ಪ್ರಾಂತ್ಯಗಳಾದ ಪಂಜಾಬ್, ಸಿಂಧ್, ಖೈಬರ್ ಪಖ್ತುಂಕ್ವಾ ಮತ್ತು ಬಲೂಚಿಸ್ತಾನ್‌ನನ್ನು 12 ಅಥವಾ ಅದಕ್ಕಿಂತ ಹೆಚ್ಚು ಭಾಗಗಳಾಗಿ ವಿಭಜಿಸುವ ಗುರಿಯನ್ನು ಹೊಂದಿದೆ. ಆಡಳಿತವನ್ನು ಸುಧಾರಿಸುವ, ಆಡಳಿತಾತ್ಮಕ ಅಧಿಕಾರವನ್ನು ವಿಕೇಂದ್ರೀಕರಿಸುವ ಮತ್ತು ಸರ್ಕಾರವನ್ನು ನಾಗರಿಕರಿಗೆ ಇನ್ನಷ್ಟು ಹತ್ತಿರವಾಗಿಸುವ ಪ್ರಯತ್ನದ ಭಾಗವೆಂದು ಇದನ್ನು ಬಣ್ಣಿಸಲಾಗಿದೆ. ಆದರೆ ಇದನ್ನು ಜಾರಿಗೆ ತಂದರೆ, ಪಾಕಿಸ್ತಾನದ ಒಕ್ಕೂಟ ರಚನೆಯೇ ಬದಲಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಕ್ಟೋಬರ್ 8ರ ಸಂಪಾದಕೀಯದಲ್ಲಿ, 'ದಿ ಎಕನಾಮಿಸ್ಟ್' ಪತ್ರಿಕೆಯು ಈ ಕ್ರಮವನ್ನು ವಿಪಕ್ಷಗಳನ್ನು ಛಿದ್ರಗೊಳಿಸುವ ಮತ್ತು ಸೇನಾ ಮುಖ್ಯಸ್ಥರ ಅಧಿಕಾರವನ್ನು ಬಲಪಡಿಸುವ ಪ್ರಯತ್ನವೆಂದು ಬಣ್ಣಿಸಿದೆ.

ನವೆಂಬರ್ 17ರಂದು, ಸಿಂಧ್ ಪ್ರಾಂತ್ಯವನ್ನು ಬಲವಂತವಾಗಿ ವಿಭಜಿಸಿದರೆ ಜನರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಎಚ್ಚರಿಕೆ ನೀಡಿದ್ದಾರೆ ಎಂದು ಪಾಕಿಸ್ತಾನ ಮೂಲದ ಜಿಯೋ ಟಿವಿ ವರದಿ ಮಾಡಿದೆ.

ಪರಮಾಣು ಶಸ್ರ್ತ ಉಪಯೋಗಿಸಿದರೆ, ಅರ್ಧ ಪ್ರಪಂಚವನ್ನೇ ನಾಶ ಮಾಡುತ್ತೇವೆ; ಭಾರತಕ್ಕೆ ಬೆದರಿಕೆ ಹಾಕಿದ ಪಾಕ್‌ ಸೇನಾ ಮುಖ್ಯಸ್ಥ

1947ರಲ್ಲಿ ಪಾಕಿಸ್ತಾನ ರಚನೆಯಾದಾಗಿನಿಂದ ದೇಶದ ನಾಲ್ಕು ಪ್ರಮುಖ ಪ್ರಾಂತ್ಯಗಳಾದ ಪಂಜಾಬ್, ಸಿಂಧ್, ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದ ಆಡಳಿತಾತ್ಮಕ ಯಾವುದೇ ಬದಲಾವಣೆ ಆಗಿಲ್ಲ.

ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author