ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಮುಂದುವರಿದ ಡೊನಾಲ್ಡ್‌ ಟ್ರಂಪ್‌ ಸುಂಕ ಸಮರ; ಅಮೆರಿಕದ ಹೊರಗೆ ನಿರ್ಮಾಣವಾದ ಸಿನಿಮಾಗಳಿಗೆ ಶೇಕಡ 100 ಟಾರಿಫ್‌

ಅಮೆರಿಕದ ಹೊರಗೆ ನಿರ್ಮಾಣವಾದ ಎಲ್ಲ ಸಿನಿಮಾಗಳಿಗೂ ಶೇ. 100 ಟಾರಿಫ್‌ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ್ದಾರೆ. ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಈ ಹೊಸ ಸುಂಕವನ್ನು ಘೋಷಿಸಿದ್ದಾರೆ. ಅದಾಗ್ಯೂ ಯಾವಾಗ ಈ ಸುಂಕವನ್ನು ಜಾರಿಗೆ ಬರಲಿದೆ ಎಂಬುದನ್ನು ಇನ್ನೂ ತಿಳಿಸಿಲ್ಲ.

ವಾಷಿಂಗ್ಟನ್‌: ಭಾರತ ಸೇರಿ ಎಲ್ಲ ದೇಶಗಳ ವಿರುದ್ಧ ಸುಂಕ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೊಂದು ಪ್ರಹಾರ ನೀಡಲು ಮುಂದಾಗಿದ್ದಾರೆ. ಅಮೆರಿಕದ ಹೊರಗೆ ನಿರ್ಮಾಣವಾದ ಎಲ್ಲ ಸಿನಿಮಾಗಳಿಗೂ (Movies) ಶೇ. 100 ಟಾರಿಫ್‌ (Tariff) ಪ್ರಕಟಿಸಿದ್ದಾರೆ. ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಈ ಹೊಸ ಸುಂಕವನ್ನು ಘೋಷಿಸಿದ್ದಾರೆ. ಅದಾಗ್ಯೂ ಯಾವಾಗ ಈ ಸುಂಕವನ್ನು ಜಾರಿಗೆ ಬರಲಿದೆ ಎಂಬುದನ್ನು ಟ್ರಂಪ್ ಇನ್ನೂ ತಿಳಿಸಿಲ್ಲ.

ಈ ಬಗ್ಗೆ ಮೇಯಲ್ಲೇ ಟ್ರಂಪ್‌ ಸೂಚನೆ ನೀಡಿದ್ದರು. ವಿದೇಶಿ ನಿರ್ಮಿತ ಚಲನಚಿತ್ರಗಳ ಮೇಲೆ ಶೇ. 100 ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದರು. ಇದೀಗ ತಮ್ಮ ಪೋಸ್ಟ್‌ನಲ್ಲಿ ಅವರು ಕ್ಯಾಲಿಫೋರ್ನಿಯಾವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ, ರಾಜ್ಯವು "ವಿಶೇಷವಾಗಿ ತೀವ್ರ ಹೊಡೆತಕ್ಕೆ ಒಳಗಾಗಿದೆ" ಎಂದು ಹೇಳಿದ್ದಾರೆ.



ʼʼಅಮೆರಿಕದ ಸಿನಿಮಾ ಬ್ಯುಸಿನೆಸ್ ಅನ್ನು ಇತರ ದೇಶಗಳು ಸುಲಭವಾಗಿ ಕದಿಯುತ್ತಿವೆ. ಬಹಳ ಅಸಮರ್ಥ ಗವರ್ನರ್ ಇರುವ ಕ್ಯಾಲಿಫೋರ್ನಿಯಾಗೆ ಇದರಿಂದ ಸಾಕಷ್ಟು ಹೊಡೆತ ಬಿದ್ದಿದೆ. ಬಹಳ ದಿನಗಳಿಂದ ಬಗೆಹರಿಯದೇ ಉಳಿದಿದ್ದ ಈ ಸಮಸ್ಯೆಗೆ ಪರಿಹಾರ ಹುಡುಕಿದ್ದೇನೆ. ಅಮೆರಿಕದ ಹೊರಗೆ ನಿರ್ಮಾಣವಾದ ಎಲ್ಲ ಸಿನಿಮಾಗಳ ಮೇಲೂ ಶೇ. 100ರಷ್ಟು ಟಾರಿಫ್‌ ಹಾಕುತ್ತಿದ್ದೇನೆʼ’ ಎಂದು ಟ್ರಂಪ್ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ. ವಿದೇಶಗಳಲ್ಲಿ ಶೂಟಿಂಗ್ ಮಾಡಲಾದ ಹಾಲಿವುಡ್ ಸಿನಿಮಾಗಳಿಗೂ ಈ ಟಾರಿಫ್ ಅನ್ವಯ ಆಗುತ್ತದಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಸುದ್ದಿಯನ್ನೂ ಓದಿ: Monetary Policy Decisions: ಟ್ರಂಪ್‌ ಟಾರಿಫ್‌ ಭವಿಷ್ಯ ಹೇಳೋದು ಕಷ್ಟ ಎಂದ RBI- ಬಡ್ಡಿ ದರ ಇಳಿಸಿಲ್ಲ ಏಕೆ?

ಭಾರತೀಯ ಚಿತ್ರಗಳ ಮೇಲೆ ಪರಿಣಾಮ?

ಈ ಸುಂಕ ಜಾರಿಗೆ ಬರುವ ದಿನಾಂಕದ ಬಗ್ಗೆ ವಿವರಗಳು ಇನ್ನೂ ಹೊರಬರಬೇಕಿದೆ. ಈ ಕ್ರಮವು ಅಮೆರಿಕದಲ್ಲಿ ಉತ್ತಮ ಪ್ರದರ್ಶನ ನೀಡುವ ಅನೇಕ ಭಾರತೀಯ ಚಲನಚಿತ್ರಗಳ ಬಾಕ್ಸ್ ಆಫೀಸ್ ಗಳಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ʼಆರ್‌ಆರ್‌ಆರ್ʼ, ʼಬಾಹುಬಲಿʼ, ʼಪಠಾಣ್ʼ, ʼಕೆಜಿಎಫ್‌ʼ ಮತ್ತಿತರ ಭಾರತೀಯ ಚಲನಚಿತ್ರಗಳು ಈ ಹಿಂದೆ ಅಮೆರಿಕ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ಕಂಡಿವೆ.

ಟ್ರಂಪ್ ಆಡಳಿತವು ಔಷಧೀಯ ಉತ್ಪನ್ನಗಳ ಮೇಲೆ ಸುಂಕ ವಿಧಿಸಲು ಮುಂದಾದ ಬೆನ್ನಲ್ಲೇ ಈ ನಿರ್ಧಾರ ಹೊರ ಬಿದ್ದಿದೆ. ಅಕ್ಟೋಬರ್‌ನಿಂದ ಯಾವುದೇ ಬ್ರ್ಯಾಂಡ್‌ ಅಥವಾ ಪೇಟೆಂಟ್ ಪಡೆದ ಔಷಧೀಯ ಉತ್ಪನ್ನದ ಮೇಲೆ ಅಮೆರಿಕವು ಶೇ. 100ರಷ್ಟು ಸುಂಕವನ್ನು ವಿಧಿಸುವುದಾಗಿ ತಿಳಿಸಿದೆ.

ಚೀನಾದ ಬೆಂಬಲ

ಭಾರತ ಸೇರಿ ವಿವಿಧ ದೇಶಗಳ ಔಷಧ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಶೇ.100ರಷ್ಟು ತೆರಿಗೆ ಹೇರಲು ಮುಂದಾದ ಬೆನ್ನಲ್ಲೇ ಭಾರತದ ನೆರವಿಗೆ ಚೀನಾ ಧಾವಿಸಿದೆ. ಭಾರತದ ಔಷಧ ಆಮದಿನ ಮೇಲಿದ್ದ ಶೇ. 30ರಷ್ಟು ತೆರಿಗೆಯನ್ನು ಶೂನ್ಯಕ್ಕಿಳಿಸಿ ಆದೇಶ ಹೊರಡಿಸಿದೆ. 2024ರಲ್ಲಿ 7 ಲಕ್ಷ ಕೋಟಿ ರು. ಮೌಲ್ಯದ ಔಷಧವನ್ನು ಭಾರತ ಚೀನಾ ರಫ್ತು ಮಾಡಿತ್ತು. ಚೀನಾದ ಹೊಸ ಕ್ರಮದಿಂದ ಇದು ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.