ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Valentina Gomez: ಕ್ರಿಶ್ಚಿಯನ್ ರಾಷ್ಟ್ರಗಳಿಗೆ ಮುಸ್ಲಿಮರಿಂದ ಬೆದರಿಕೆ: ವ್ಯಾಲೆಂಟಿನಾ ಗೊಮೆಜ್

ಟೆಕ್ಸಾಸ್‌ನ 31 ನೇ ಕಾಂಗ್ರೆಸನಲ್‌ ಜಿಲ್ಲಾ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಅಭ್ಯರ್ಥಿ ವ್ಯಾಲೆಂಟಿನಾ ಗೊಮೆಜ್ ಇಸ್ಲಾಂ ಅನ್ನು ಕೊನೆಗೊಳಿಸುವುದು ತಮ್ಮ ಗುರಿ ಎಂದು ಹೇಳಿದ್ದು, ಪವಿತ್ರ ಕುರಾನ್ ಪ್ರತಿಯನ್ನು ಸುಟ್ಟುಹಾಕಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮವಾದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಟೆಕ್ಸಾಸ್‌: ಮುಸ್ಲಿಮರು (Muslims) ಹಿಂಸಾಚಾರದ ಮೂಲಕ ಕ್ರಿಶ್ಚಿಯನ್ ರಾಷ್ಟ್ರಗಳಿಗೆ (Christian nations) ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿರುವ ಟೆಕ್ಸಾಸ್‌ನ (Texas) 31ನೇ ಕಾಂಗ್ರೆಸನಲ್‌ ಜಿಲ್ಲಾ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಅಭ್ಯರ್ಥಿ (Republican candidate) ವ್ಯಾಲೆಂಟಿನಾ ಗೊಮೆಜ್ (Valentina Gomez), ಟೆಕ್ಸಾಸ್‌ನಲ್ಲಿ ಇಸ್ಲಾಂ (Islam) ಅನ್ನು ಕೊನೆಗೊಳಿಸುವುದು ತಮ್ಮ ಗುರಿ ಎಂದು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು ಪವಿತ್ರ ಕುರಾನ್ ಪ್ರತಿಯನ್ನು ಸುಟ್ಟುಹಾಕಿ ನಿಮ್ಮ ಪುತ್ರರ ಶಿರಚ್ಛೇದ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವ್ಯಾಲೆಂಟಿನಾ ಗೊಮೆಜ್ ತಮ್ಮ ಮಾತನ್ನು ಮುಂದುವರಿಸುತ್ತಾ, ಟೆಕ್ಸಾಸ್‌ನಿಂದ ಮುಸ್ಲಿಮರು ಹೊರಹೋಗಿ. 57 ಮುಸ್ಲಿಂ ರಾಷ್ಟ್ರಗಳಲ್ಲಿ ಯಾವುದಾದರೂ ಒಂದಕ್ಕೆ ನೀವು ಹೋಗಬಹುದು ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯವು ಹಿಂಸಾಚಾರದ ಮೂಲಕ ಕ್ರಿಶ್ಚಿಯನ್ ರಾಷ್ಟ್ರಗಳಿಗೆ ಬೆದರಿಕೆ ಹಾಕುತ್ತಿದೆ ಎಂದ ಅವರು ಟೆಕ್ಸಾಸ್‌ನಿಂದ ಮುಸ್ಲಿಮರು ಹೊರಹಾಕುವಲ್ಲಿ ತಮ್ಮ ಗುರಿಯನ್ನು ಸಾಧಿಸಲು ಸಹಾಯ ಮಾಡುವಂತೆ ಜನರನ್ನು ಒತ್ತಾಯಿಸಿದರು.

ಕ್ರಿಶ್ಚಿಯನ್ ರಾಷ್ಟ್ರಗಳನ್ನು ಸ್ವಾಧೀನಪಡಿಸಿಕೊಳ್ಳುವ ಹಾದಿಯಲ್ಲಿ ಮುಸ್ಲಿಮರು ಅತ್ಯಾಚಾರ ಮತ್ತು ಕೊಲೆ ಮಾಡುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್‌ಗೆ ಹೋಗಲು ನನಗೆ ಸಹಾಯ ಮಾಡಿ. ಇದರಿಂದ ನೀವು ಎಂದಿಗೂ ಅವರ ಮೂರ್ಖ ಬಂಡೆಗೆ ತಲೆಬಾಗಬೇಕಾಗಿಲ್ಲ ಎಂದು ಹೇಳಿದ್ದಾರೆ.



ನಾವು ಇಸ್ಲಾಂ ಅನ್ನು ಒಮ್ಮೆಗೇ ನಿಲ್ಲಿಸದಿದ್ದರೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಲಾಗುತ್ತದೆ, ಗಂಡು ಮಕ್ಕಳ ಶಿರಚ್ಛೇದ ಮಾಡಲಾಗುತ್ತದೆ ಎಂದ ಅವರು, ಅನಂತರ ಕುರಾನ್‌ ಪ್ರತಿಗೆ ಬೆಂಕಿ ಹಚ್ಚಿದರು.

ಕುರಾನ್ ಪ್ರತಿ ಸುಟ್ಟಿರುವುದಕ್ಕೆ ಯಾವುದೇ ವಿಷಾದವನ್ನೂ ವ್ಯಕ್ತಪಡಿಸದ ಅವರು, ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ನಡೆದ ದಾಳಿಗಳಿಗೆ ಧಾರ್ಮಿಕ ಪವಿತ್ರ ಗ್ರಂಥವನ್ನು ದೂಷಿಸಿದರು. ಅಬ್ಬೆ ಗೇಟ್‌ನಲ್ಲಿ 13 ಅಮೆರಿಕ ಸೇವಾ ಸದಸ್ಯರನ್ನು ಕೊಂದ ಮತ್ತು ನಮ್ಮ ಹತ್ಯೆಗೆ ಕರೆ ನೀಡುವ ಪುಸ್ತಕಕ್ಕೆ ನಾನು ಎಂದಿಗೂ ಮೊಣಕಾಲೂರುವುದಿಲ್ಲಎಂದು ಅವರು ಹೇಳಿದ್ದಾರೆ. ಮುಸ್ಲಿಮರನ್ನು ತುಂಬಾ ಪ್ರೀತಿಸುವವರು ತಮ್ಮ ದೇಶದ ಗಡಿಗಳನ್ನು ತೆರೆಯಲಿ. ಮುಸ್ಲಿಮರು ಇಸ್ರೇಲ್ ಅನ್ನು ವಶಪಡಿಸಿಕೊಳ್ಳಲು ಬಿಡಬಾರದು ಎಂದರು.



ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗೊಮೆಜ್, ಮುಸ್ಲಿಮ್‌ ವ್ಯಕ್ತಿಯೊಬ್ಬ ಯುರೋಪಿನಲ್ಲಿ ಚಿಕ್ಕ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿರುವುದನ್ನು ಒಬ್ಬ ಮುಸ್ಲಿಮನೂ ಖಂಡಿಸಿಲ್ಲ. ಯಾಕೆಂದರೆ ಕುರಾನ್ ಅದನ್ನೇ ಕಲಿಸುತ್ತದೆ, ಅತ್ಯಾಚಾರ ಮಾಡುವುದು ಮತ್ತು ನಂಬಿಕೆಯಿಲ್ಲದವರ ಹೃದಯದಲ್ಲಿ ಭಯವನ್ನು ತುಂಬುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ನಿವೃತ್ತಿ ಘೋಷಿಸುತ್ತಾರಾ? ಬಿಜೆಪಿಯ 75 ವರ್ಷಕ್ಕೆ ನಿವೃತ್ತಿಯ ಅಘೋಷಿತ ನಿಯಮದ ಬಗ್ಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದೇನು?

ಟೆಕ್ಸಾಸ್‌ನಲ್ಲಿ ಮುಸ್ಲಿಂ ಜನಸಂಖ್ಯೆಯ ಸುಮಾರು ಶೇ. 1ರಷ್ಟು ಇದೆ. ಗೊಮೆಜ್ ಅವರ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಕಾರ್ಯಾಚರಣೆಗಳ ವಿಶೇಷ ರಾಯಭಾರಿ ರಿಚರ್ಡ್ ಗ್ರೆನೆಲ್ ಟೀಕಿಸಿದರು. ಗೊಮೆಜ್ ಅಮೆರಿಕ ಸಂವಿಧಾನವನ್ನು ದುರ್ಬಲಗೊಳಿಸುತ್ತಿದ್ದಾರೆ. ಅಮೆರಿಕ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ನೀವು ನಮ್ಮ ಸ್ವಾತಂತ್ರ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿಲ್ಲ ಎಂದು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author