ವಾಷಿಂಗ್ಟನ್, ಏ.27: ಅಮೆರಿಕದ ರಾಜಧಾನಿಯಲ್ಲಿ ನಡೆದ ವರದಿಗಾರರ ಔತಣಕೂಟದಲ್ಲಿ (White House Correspondents’ Dinner) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump shooting) ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿ ಅತಿಥಿಯಾಗಿ ಹೋಟೆಲ್ ಪ್ರವೇಶ ಮಾಡಿದ್ದ ವಿಚಾರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಅಮೆರಿಕದ ಶ್ವೇತಭವನದ ಸಮೀಪ ಹಿಲ್ಟನ್ ಹೋಟೆಲ್‌ನಲ್ಲಿ(Hilton Hotel) ಆಯೋಜನೆಗೊಂಡಿದ್ದ ಡಿನ್ನರ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿಯನ್ನು ಭದ್ರತಾ ಪಡೆಗಳು ಬಂಧಿಸಿ ಈಗ ವಿಚಾರಣೆ ನಡೆಸುತ್ತಿದ್ದಾರೆ.
ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ ಮೂಲದ ಕೋಲ್ ಅಲೆನ್(31) ಬಂಧಿತ ಆರೋಪಿ. ವೃತ್ತಿಯಲ್ಲಿ ಈತ ಶಿಕ್ಷಕ ಮತ್ತು ವಿಡಿಯೋ ಗೇಮ್ ಡೆವಲಪರ್ ಆಗಿದ್ದಾನೆ. 2017 ರಲ್ಲಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಈತ 2025 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ-ಡೊಮಿಂಗ್ಯೂಜ್ ಹಿಲ್ಸ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. 2014 ರಲ್ಲಿ ನಾಸಾದಲ್ಲೂ ಇಂಟರ್ನ್‌ಶಿಪ್ ಮಾಡಿದ್ದನು. ಅಲೆನ್ ಡಿಸೆಂಬರ್ 2024 ರಲ್ಲಿ ಶಿಕ್ಷಣ ಸಂಸ್ಥೆಯೊಂದರಲ್ಲಿ ‘ತಿಂಗಳ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಯನ್ನೂ ಪಡೆದಿದ್ದ ಎಂದು ವರದಿಯಾಗಿದೆ.
ಕೋಲ್ ಅಲೆನ್(Cole Tomas Allen) ಒಬ್ಬ ನೋಂದಾಯಿತ ಡೆಮೋಕ್ರಾಟ್ ಆಗಿದ್ದು, 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಕಮಲ ಹ್ಯಾರಿಸ್ ಅವರ ಪ್ರಚಾರಕ್ಕೆ 25 ಡಾಲರ್ ದೇಣಿಗೆ ನೀಡಿದ್ದಾನೆ ಎಂದು ಫೆಡರಲ್ ಎಲೆಕ್ಷನ್ ಕಮಿಷನ್ (FEC) ದಾಖಲೆಗಳು ತಿಳಿಸಿವೆ.
ಡಿನ್ನರ್ ಆಯೋಜನೆಗೊಳ್ಳುವ ಮೊದಲೇ ಕೋಲ್ ಅಲೆನ್ ರೂಮ್ ಬುಕ್ ಮಾಡಿ ಅತಿಥಿಯಾಗಿ ಪ್ರವೇಶ ಮಾಡಿದ್ದ. ಸಾಮಾನ್ಯವಾಗಿ ಅತಿಥಿಗಳು ಪ್ರವೇಶ ಮಾಡುವಾಗ ಇಲ್ಲಿ ಬಿಗಿಯಾದ ಭದ್ರತಾ ತಪಾಸಣೆಗೆ ಒಳಪಡಿಸಿರಲಿಲ್ಲ. ಇದರಿಂದಾಗಿ ಆತ ಮೆಷಿನ್ ಗನ್, ಹ್ಯಾಂಡ್ ಗನ್ ಮತ್ತು ಚಾಕುಗಳನ್ನು ಸುಲಭವಾಗಿ ಒಳಗೆ ತಂದಿದ್ದ. ಅಷ್ಟೇ ಅಲ್ಲದೇ ಹೋಟೆಲಿನಲ್ಲಿ ಅತಿಥಿಗಳಿಗೆ ಲಾಬಿ ಮತ್ತು ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶಿಸಲು ಯಾವುದೇ ಕಠಿಣ ತಪಾಸಣೆ ಇರಲಿಲ್ಲ.
ಹೈ ಸೆಕ್ಯುರಿಟಿ ಇದ್ದರೂ ಶ್ವೇತಭವನಕ್ಕೆ ಎಂಟ್ರಿ; ಟ್ರಂಪ್ ಮೇಲೆ ದಾಳಿ ಮಾಡಲು ಬಂದಿದ್ದ ವ್ಯಕ್ತಿ ಯಾರು?
ಹೋಟೆಲ್‌ನ ಸಾಮಾನ್ಯ ಪ್ರದೇಶದಿಂದ ಬಾಲ್‌ರೂಮ್ (ಹೋಟೆಲ್ ಅಥವಾ ದೊಡ್ಡ ಕಟ್ಟಡಗಳಲ್ಲಿರುವ ಒಂದು ವಿಶಾಲವಾದ ಸಭಾಂಗಣ ಅಥವಾ ಹಾಲ್) ಹೋಗುವ ದಾರಿಯಲ್ಲಿ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ನಿರ್ಮಿಸಿದ್ದ ಮ್ಯಾಗ್ನೆಟೋಮೀಟರ್ (Magnetometer) ತಪಾಸಣಾ ಕೇಂದ್ರದ ಬಳಿಗೆ ಏಕಾಏಕಿ ನುಗ್ಗಿದ್ದ. ಇದನ್ನೂ ಓದಿ: ಕೊನೆಕ್ಷಣದಲ್ಲಿ ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್- ಪೆಚ್ಚಾದ ಪಾಕಿಸ್ತಾನ
ಈ ವೇಳೆ ಭದ್ರತಾ ತಪಾಸಣಾ ಕೇಂದ್ರದ ಬಳಿ ಏಳೆಂಟು ಬಾರಿ ಗುಂಡು ಹಾರಿಸಿದರೂ, ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ತಕ್ಷಣ ಆತನನ್ನು ತಡೆದಿದ್ದಾರೆ. ಇದರಿಂದಾಗಿ ಆತ ಗಣ್ಯರು ಕುಳಿತಿದ್ದ ಬಾಲ್‌ರೂಮ್‌ನ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಏಜೆಂಟ್‌ಗಳು ಕೋಲ್ ಅಲೆನ್‌ನನ್ನು ಎದುರಿಸಿ, ಆತ ಮತ್ತಷ್ಟು ಗುಂಡು ಹಾರಿಸದಂತೆ ಕೆಳಕ್ಕೆ ತಳ್ಳಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸಂಘರ್ಷದಲ್ಲಿ ಒಬ್ಬ ಏಜೆಂಟ್‌ಗೆ ಗುಂಡು ತಗುಲಿತಾದರೂ ಬುಲೆಟ್ ಪ್ರೂಫ್ ಜಾಕೆಟ್ ಅವರನ್ನು ರಕ್ಷಿಸಿದೆ.
ಶ್ವೇತಭವನದಲ್ಲಿ ಟ್ರಂಪ್ ಡಿನ್ನರ್ ಪಾರ್ಟಿ ವೇಳೆ ಗುಂಡಿನ ದಾಳಿ; ಅರ್ಧಕ್ಕೆ ಭಾಷಣ ನಿಲ್ಲಿಸಿ ತೆರಳಿದ ಅಮೆರಿಕ ಅಧ್ಯಕ್ಷ
ಕೋಲ್ ಅಲೆನ್ ಬಳಿ ಶಾರ್ಟ್‌ಗನ್, ಹ್ಯಾಂಡ್‌ಗನ್ ಹೊರತಾಗಿ ಒಂದಕ್ಕಿಂತ ಹೆಚ್ಚು ಚಾಕುಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರನನ್ನು ತಡೆಯುತ್ತಿದ್ದಾಗಲೇ ಮತ್ತೊಂದು ತಂಡ ಅಧ್ಯಕ್ಷ ಟ್ರಂಪ್ ಅವರನ್ನು ಸುರಕ್ಷಿತವಾಗಿ ಸಭಾಂಗಣದಿಂದ ಹೊರಗೆ ಕರೆತಂದು ರಕ್ಷಣೆ ಮಾಡಿ ಶ್ವೇತ ಭವನಕ್ಕೆ ಕರೆ ತಂದಿದೆ.