Operation Sindoor: ಆಪರೇಷನ್ ಸಿಂದೂರ್‌ನಲ್ಲಿ ಮಸೂದ್ ಅಜರ್ ಕುಟುಂಬ ನಾಶ; ಕೊನೆಗೂ ಬಾಯ್ಬಿಟ್ಟ ಉಗ್ರ
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿದ್ದ (Pakistan) ಭಯೋತ್ಪಾದಕರನ್ನು ಹೊಡೆದುರುಳಿಸುವ ಸಲುವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರಗೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ ತಿಂಗಳುಗಳ ನಂತರ, ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಬಹಾವಲ್ಪುರದ ಮೇಲಿನ ದಾಳಿಯಲ್ಲಿ ಜೈಶ್ ಉನ್ನತ ಕಮಾಂಡರ್ ಮಸೂದ್ ಅಜರ್ ಕುಟುಂಬ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

-

ಇಸ್ಲಾಮಾಬಾದ್: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (Operation Sindoor) ಅಡಗಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸುವ ಸಲುವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರಗೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಭಯೋತ್ಪಾದಕ ನೆಲೆಗಳನ್ನು (Masood Azhar) ನಾಶಪಡಿಸಿದ ತಿಂಗಳುಗಳ ನಂತರ, ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಬಹಾವಲ್ಪುರದ ಮೇಲಿನ ದಾಳಿಯಲ್ಲಿ ಜೈಶ್ ಉನ್ನತ ಕಮಾಂಡರ್ ಮಸೂದ್ ಅಜರ್ ಕುಟುಂಬ ಸಾವನ್ನಪ್ಪಿದೆ ಎಂದು ಆತನೇ ಸ್ವತಃ ಹೇಳಿಕೊಂಡಿದ್ದಾನೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಜೆಇಎಂ ಕಮಾಂಡರ್ ಮಸೂದ್ ಭಾರತೀಯ ಸೇನೆ ತಮ್ಮ ಅಡಗುತಾಣಕ್ಕೆ ಹೇಗೆ ಪ್ರವೇಶಿಸಿ ದಾಳಿ ಮಾಡಿದವು ಎಂಬುದನ್ನು ವಿವರಿಸುವುದನ್ನು ಕೇಳಬಹುದು.
ಭಯೋತ್ಪಾದನೆಯನ್ನು ಸ್ವೀಕರಿಸಿ, ಈ ದೇಶದ ಗಡಿಗಳನ್ನು ರಕ್ಷಿಸುವುದಕ್ಕಾಗಿ ನಾವು ದೆಹಲಿ, ಕಾಬೂಲ್ ಮತ್ತು ಕಂದಹಾರ್ ವಿರುದ್ಧ ಹೋರಾಡಿದೆವು. ಎಲ್ಲವನ್ನೂ ತ್ಯಾಗ ಮಾಡಿದ ನಂತರ, ಮೇ 7 ರಂದು, ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ಮೌಲಾನಾ ಮಸೂದ್ ಅಜರ್ ಕುಟುಂಬವನ್ನು ನಾಶ ಮಾಡಲಾಯಿತು ಎಂದು ಉಗ್ರನೊಬ್ಬ ಹೇಳುತ್ತಿರುವುದು ಕಾಣಬಹುದು. ಆತನ ಹಿಂದೆ ಹಲವರು ಬಂದೂಕು ಹಿಡಿದಿರುವುದು ಕಾಣಬಹುದು.
🚨 #Exclusive 🇵🇰👺
— OsintTV 📺 (@OsintTV) September 16, 2025
Jaish-e-Mohamad top commander Masood ilyas kashmiri admits that On 7th May his leader Masood Azhar's family was torn into pieces in Bahawalpur attack by Indian forces.
Look at the number of gun-wielding security personnel in the background. According to ISPR… pic.twitter.com/OLls70lpFy
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ವಾರಗಳ ನಂತರ, ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂದೂರ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕರು ಹಾಗೂ ಭಯೋತ್ಪಾದಕ ನೆಲೆಗಳ ಮೇಲೆ ದಾಳಿಗಳನ್ನು ನಡೆಸಿದವು. ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಆಳವಾದ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡವು. ಬಹಾವಲ್ಪುರ್, ಕೋಟ್ಲಿ ಮತ್ತು ಮುರಿಡ್ಕೆಯಲ್ಲಿನ ಸ್ಥಳಗಳು ಸೇರಿದಂತೆ ಒಂಬತ್ತು ಸ್ಥಳಗಳು ದಾಳಿಯಲ್ಲಿ ಹಾನಿಗೊಳಗಾದವು ಎಂದು ಪಾಕಿಸ್ತಾನ ನಂತರ ಒಪ್ಪಿಕೊಂಡಿತು ಇವೆಲ್ಲವೂ ಉಗ್ರಗಾಮಿ ಚಟುವಟಿಕೆಯ ಕೇಂದ್ರಗಳಾಗಿವೆ.
ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್ ಸಿಂದೂರ್‌ಗೆ ಬಳಸಿದ್ದು ಕೇವಲ 50 ಶಸ್ತ್ರಾಸ್ತ್ರಗಳು; ಅಚ್ಚರಿಯ ಮಾಹಿತಿ ಬಹಿರಂಗ
ಪಾಕಿಸ್ತಾನದ 12ನೇ ಅತಿದೊಡ್ಡ ನಗರವಾದ ಬಹವಾಲ್ಪುರ್, ಜೆಇಎಂನ ಕೇಂದ್ರವಾಗಿತ್ತು. ಹೋರ್‌ನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಇದು, ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದೂ ಕರೆಯಲ್ಪಡುವ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್‌ನಲ್ಲಿ ಜೆಇಎಂನ ಕಾರ್ಯಾಚರಣೆಯ ಪ್ರಧಾನ ಕಚೇರಿಯನ್ನು ಹೊಂದಿದೆ. ಆಪರೇಷನ್ ಸಿಂದೂರದ ಬಳಿಕ ತನ್ನ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಮಸೂದ್ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.