Actor Dhanush: ನಟ ಧನುಷ್ ಸಿನಿಮಾ ಪ್ರಚಾರಕ್ಕಾಗಿ ಸುಳ್ಳು ಹೇಳಿದ್ರಾ ನಟ ಧನುಷ್? ನೆಟ್ಟಿಗರು ಫುಲ್ ಗರಂ
Actor Dhanush: ನಟ ಧನುಷ್ ನಟನೆಯ ಕುಬೇರ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಗಳಿಸಿದ ಬಳಿಕ ಸದ್ಯ ಅವರು ಇಡ್ಲಿ ಕಡೈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರ ಜನಪ್ರಿಯ ವಾಗ ಬೇಕು ಎಂಬ ನೆಲೆಯಲ್ಲಿ ಮನ ಬಂದಂತೆ ಹೇಳಿಕೆ ನೀಡಿ ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುತ್ತಿದ್ದಾರೆ.

-

ನವದೆಹಲಿ: ತಮಿಳು ಸಿನಿಮಾ ರಂಗದಲ್ಲಿ ಖ್ಯಾತ ನಟರ ಸಾಲಿನಲ್ಲಿ ನಟ ಧನುಷ್ (Actor Dhanush) ಕೂಡ ಸೇರಿದ್ದಾರೆ. ಕಾಲಿವುಡ್ ಸ್ಟಾರ್ ನಟ ಧನುಷ್ ಅವರು ತಮಿಳು ಸಿನಿಮಾ ರಂಗದಲ್ಲಿ ನಟ, ನಿರ್ಮಾಪಕ, ಚಿತ್ರಕಥೆಗಾರ, ಗಾಯಕರಾಗಿದ್ದುಕೊಂಡು ತಮ್ಮ ಅದ್ಭುತ ಅಭಿ ನಯದಿಂದ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. 2002ರಲ್ಲಿ 'ತುಳ್ಳುವದೋ ಇಳಮೈ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಇವರು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಕೂಡ ಹೊಂದಿ ದ್ದಾರೆ. ವಂಡರ್ ಬಾರ್ ಫಿಲ್ಮ್ಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಇದುವರೆಗೆ ಹಲವಾರು ಚಿತ್ರ ಗಳನ್ನು ನಿರ್ಮಿಸಿದ್ದಾರೆ. ನಟ ಧನುಷ್ ಅವರು ತಮ್ಮ ಅದ್ಭುತ ಅಭಿನಯಕ್ಕೆ ರಾಷ್ಟ್ರೀಯ ಫಿಲಂ ಪ್ರಶಸ್ತಿಗಳು ಮತ್ತು ಫಿಲಂಫೇರ್ ಪ್ರಶಸ್ತಿಗಳು ಕೂಡ ಪಡೆದಿದ್ದಾರೆ. ಅವರ ನಟನೆಯ ಕುಬೇರ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಗಳಿಸಿದ ಬಳಿಕ ಸದ್ಯ ಅವರು ಇಡ್ಲಿ ಕಡೈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರ ಜನಪ್ರಿಯವಾಗಬೇಕು ಎಂಬ ನೆಲೆಯಲ್ಲಿ ಮನ ಬಂದಂತೆ ಹೇಳಿಕೆ ನೀಡಿ ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುತ್ತಿದ್ದಾರೆ.
ಕುಬೇರ ಸಿನಿಮಾದ ಯಶಸ್ಸಿನ ಬಳಿಕ ನಟ ಧನುಷ್ ಅವರು 'ಇಡ್ಲಿ ಕಡೈ' ಸಿನಿಮಾ ಮಾಡುತ್ತಿ ದ್ದಾರೆ. ಈ ಸಿನಿಮಾ ಇದೇ ಅಕ್ಟೋಬರ್ ನಲ್ಲಿ ತೆರೆ ಮೇಲೆ ಬರಲಿದ್ದು ಈ ಸಿನಿಮಾಕ್ಕಾಗಿ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಕೂಡ ಸಾಗುತ್ತಿದೆ. ಚಿತ್ರದ ಪ್ರಚಾರವನ್ನು ಮಾಡುತ್ತಿರುವ ನಟ ಧನುಷ್ ಅವರು ಕಾರ್ಯ ಕ್ರಮವೊಂದರಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿ, ನಾನು ಬಾಲ್ಯದಲ್ಲಿ ಪ್ರತಿದಿನ ಇಡ್ಲಿ ತಿನ್ನಲು ಹಂಬಲಿಸುತ್ತಿದ್ದೆ. ಆದರೆ ನನ್ನ ಬಳಿ ಇಡ್ಲಿ ತಿನ್ನಲು ಕೂಡ ಹಣ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ನಾನು ಚಿಕ್ಕವನಿದ್ದಾಗ ಇಡ್ಲಿ ತಿನ್ನಲು ನಾನು ತುಂಬಾ ಇಷ್ಟ ಪಡುತ್ತಿದ್ದೆ. ಆದರೆ ನನ್ನ ಬಳಿ ಹಣ ಇರಲಿಲ್ಲ. ಹಣ ಇರದ ಕಾರಣ ನನ್ನ ಸಹೋದರಿ ಮತ್ತು ಇತರ ಸಂಬಂಧಿಕರು ಬೆಳಿಗ್ಗೆ 4 ಗಂಟೆಗೆ ಎದ್ದು ನೆರೆಹೊರೆಯಿಂದ ಹೂವುಗಳನ್ನು ಸಂಗ್ರಹ ಮಾಡುತ್ತಿದ್ದೆವು ಬಳಿಕ ಅದನ್ನು ಮಾರು ತ್ತಿದ್ದೆವು. ನಾವು ಎಷ್ಟು ಹೂವುಗಳನ್ನು ಸಂಗ್ರಹಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಮಗೆ ಹಣ ಸಿಗುತ್ತಿತ್ತು. ಆಗಿನ ಕಾಲದಲ್ಲಿ ನಮಗೆ ಎರಡು ರೂಪಾಯಿ ಸಿಗುತ್ತಿದ್ದು ಅದರಲ್ಲಿ ಐದು ಇಡ್ಲಿ ಗಳು ಸಿಗುತ್ತಿದ್ದವು ಹೊಟ್ಟೆ ತುಂಬಾ ತಿಂದು ಖುಷಿ ಪಟ್ಟೆವು. ಬಾಲ್ಯದಲ್ಲಿ ಸವಿದ ಆ ಇಡ್ಲಿಯ ರುಚಿ ಈಗ ನನಗೆ ರೆಸ್ಟೋರೆಂಟ್‌ಗಳಲ್ಲಿ ಕೂಡ ಸಿಗುತ್ತಿಲ್ಲ ಎಂದು ಹೇಳಿದ್ದಾರೆ
ಇದನ್ನು ಓದಿ:Amulya Peekaboo Movie: ಗೋಲ್ಡನ್ ಕ್ವೀನ್ ಅಮೂಲ್ಯ ಅಭಿನಯದ 'ಪೀಕಬೂ' ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ!
ನಟ ಧನುಷ್ ಅವರ ಈ ಕಥೆ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಧನುಷ್ ತಂದೆ ಕಸ್ತೂರಿ ರಾಜ ಅವರು ತಮಿಳು ಚಿತ್ರರಂಗದ ದೊಡ್ಡ ಹೆಸರು ಸಂಪಾದಿ ಸಿದ್ದವರಾಗಿದ್ದು ನಿರ್ದೇಶಕರಾಗಿ-ನಿರ್ಮಾಪಕರಾಗಿ ಖ್ಯಾತಿ ಪಡೆದಿದ್ದಾರೆ. ಧನುಷ್ ಅಭಿನಯದ ಮೊದಲ ಚಿತ್ರವನ್ನು ಕೂಡ ಅವರ ತಂದೆ ಕಸ್ತೂರಿ ರಾಜ ಅವರೇ ನಿರ್ದೇಶನ ಮಾಡಿದ್ದರು. ಆದರೆ ಈಗ ನಟ ಧನುಷ್ ನಾನು ಚಿಕ್ಕವನಿದ್ದಾಗ ಕಡು ಬಡತನದಲ್ಲಿದ್ದೆ ತಿನ್ನಲು ಹಣ ಇಲ್ಲ ಎಂದೆಲ್ಲ ಕಥೆ ಹೇಳಿದ್ದಾರೆ. 'ಇಡ್ಲಿ ಕಡೈ'ಸಿನಿಮಾ ಪ್ರಚಾರಕ್ಕೆ ಇಷ್ಟೆಲ್ಲ ಸುಳ್ಳು ಹೇಳುವ ಅಗತ್ಯ ಇದೆಯೇ ಎಂದು ನಟ ಧನುಷ್ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಟ ಧನುಷ್ ಅವರ ಇಡ್ಲಿ ಕಡೈ ಸಿನಿಮಾವು ಇದೇ ಅಕ್ಟೋಬರ್ 1ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ನಟ ಧನುಷ್ ಅವರೇ ನಿರ್ದೇಶನವನ್ಮು ಕೂಡ ಮಾಡಿದ್ದಾರರ. ಇನ್ನೇನು ಅಕ್ಟೋಬರ್ 2ರಂದು ಸ್ಯಾಂಡಲ್ ವುಡ್ ಹೆಮ್ಮೆಯ ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರು ನಟಿಸಿ , ನಿರ್ದೇಶಿ ಸುತ್ತಿರುವ ಕಾಂತಾರಾ ಚಾಪ್ಟರ್ 1 ರಿಲೀಸ್ ಆಗಲಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಭರ್ಜರಿ ಸದ್ದು ಮಾಡುತ್ತಾ ನಿರೀಕ್ಷೆ ಹೆಚ್ಚಿಸಿದೆ. ಹೀಗಾಗಿ ನಟ ಧನುಷ್ ಅವರು ಕೂಡ ತನ್ನ ಸಿನಿಮಾ ಇಡ್ಲಿ ಕಡೈ ಗೆ ಈಗಲೇ ಪ್ರಚಾರ ಕಾರ್ಯ ನೀಡುತ್ತಾ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕಾರ್ಯ ಮಾಡುತ್ತಿದ್ದಾರೆ.