Viral News: ಗಾಯಕಿ ಕೇಟಿ ಪೆರ್ರಿಗೆ ಚುಂಬಿಸಿದ ಕೆನಡಾ ಮಾಜಿ ಪ್ರಧಾನಿ ಟ್ರುಡೊ.. ಫೋಟೋ ವೈರಲ್
Former Canadian Prime Minister Trudeau: ಕಳೆದ ಕೆಲವು ದಿನಗಳಿಂದ ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಗಾಯಕಿ ಕೇಟಿ ಪೆರ್ರಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿದ್ದು ಇದನ್ನು ಅವರಿಬ್ಬರು ದೃಡೀಕರಿಸಿರಲಿಲ್ಲ. ಆದರೆ ಇದೀಗ ಅವರಿಬ್ಬರು ಪರಸ್ಪರ ಚುಂಬಿಸುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿವೆ.

-

ಕ್ಯಾಲಿಫೋರ್ನಿಯಾ: ಕೆನಡಾದ ಮಾಜಿ ಪ್ರಧಾನಿ (former Canadian Prime Minister) ಜಸ್ಟಿನ್ ಟ್ರುಡೊ (Justin Trudeau) ಮತ್ತು ಗಾಯಕಿ ಕೇಟಿ ಪೆರ್ರಿ (singer Katy Perry) ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೀಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಕಳೆದ ಜುಲೈ ತಿಂಗಳಲ್ಲಿ ಈ ಜೋಡಿ ಜೊತೆಯಾಗಿ ರೆಸ್ಟೋರೆಂಟ್ ವೊಂದರಲ್ಲಿ ಕಾಣಿಸಿಕೊಂಡಿತ್ತು. ಇದು ಬಳಿಕ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಉಹಾಪೋಹವನ್ನು ಉಂಟು ಮಾಡಿತ್ತು. ಇದೀಗ ಈ ಜೋಡಿ ವಿಹಾರ ನೌಕೆಯಲ್ಲಿ ಪರಸ್ಪರ ಚುಂಬಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral News) ಆಗಿವೆ.
ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫೈರ್‌ವರ್ಕ್ ಗಾಯಕಿ ಕೇಟಿ ಪೆರ್ರಿ ವಿಹಾರ ನೌಕೆಯಲ್ಲಿ ಚುಂಬಿಸುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿವೆ. ಕೇಟಿ ಪೆರ್ರಿ ಕಪ್ಪು ಬಣ್ಣದ ಈಜುಡುಗೆಯಲ್ಲಿ ಕಾಣಿಸಿಕೊಂಡಿದ್ದು, ಟ್ರುಡೊ ಶರ್ಟ್‌ಲೆಸ್ ಜೀನ್ಸ್ ಧರಿಸಿದ್ದರು. ಇವರಿಬ್ಬರು ತಬ್ಬಿಕೊಂಡು ಚುಂಬಿಸುತ್ತಿರುವ ಚಿತ್ರವನ್ನು ಒಳಗೊಂಡಿದ್ದು, ಈ ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ಕರಾವಳಿಯಲ್ಲಿ ತೆಗೆದಿರುವುದಾಗಿದೆ ಎಂದು ಹೇಳಲಾಗುತ್ತಿದೆ.
ಕೇಟಿ ತಾವಿದ್ದ ದೋಣಿಯನ್ನು ತಿಮಿಂಗಿಲಗಳನ್ನು ವೀಕ್ಷಿಸುವ ಸಲುವಾಗಿ ನಿಲ್ಲಿಸಿ ಅವರಿಬ್ಬರು ಬಳಿಕ ಏಕಾಂತದಲ್ಲಿ ಸಮಯ ಕಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಟ್ರುಡೊ ಅವರ ತೋಳಿನ ಮೇಲಿನ ಹಚ್ಚೆಯನ್ನು ನೋಡುವವರೆಗೂ ಕೇಟಿ ಯಾರೊಂದಿಗೆ ಇದ್ದಾಳೆಂದು ನನಗೆ ತಿಳಿದಿರಲಿಲ್ಲ. ಬಳಿಕ ಅದು ಜಸ್ಟಿನ್ ಟ್ರುಡೊ ಎಂದು ತಕ್ಷಣ ಅರಿವಾಯಿತು ಎಂದು ಅವರು ತಿಳಿಸಿದ್ದಾರೆ.
New photos have surfaced allegedly showing Katy Perry and Justin Trudeau as a couple.
— Shadow of Ezra (@ShadowofEzra) October 11, 2025
The two were seen kissing aboard a yacht off the coast of Santa Barbara, California. pic.twitter.com/xNBhV2aKwC
ಕೇಟಿ ಪೆರ್ರಿ ಮತ್ತು ಜಸ್ಟಿನ್ ಟ್ರುಡೊ ಅವರು ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಆದರೂ ವದಂತಿಗಳು ಅವರಿಬ್ಬರ ನಡುವೆ ಸಂಬಂಧವಿರುವುದನ್ನು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Viral Video: ನಿತ್ಯ ತುಂಬಿ ತುಳುಕೋ ಲೋಕಲ್ ರೈಲು- ಒಳಗೆ ಹತ್ತಲು ಮಹಿಳೆಯರ ನೂಕುನುಗ್ಗಲು! ವಿಡಿಯೊ ನೋಡಿ
ನಟ ಓರ್ಲ್ಯಾಂಡ್ ಬ್ಲೂಮ್ ಅವರಿಂದ ಈ ವರ್ಷದ ಆರಂಭದಲ್ಲಿ ಗಾಯಕಿ ಕೇಟಿ ಬೇರ್ಪಟ್ಟಿದ್ದರು. ಜಸ್ಟಿನ್ ಟ್ರುಡೊ ಅವರು ಕೂಡ ತಮ್ಮ ಪತ್ನಿ ಸೋಫಿ ಗ್ರೆಗೊಯಿರ್ ಅವರೊಂದಿಗಿನ ಸಂಬಂಧವನ್ನು 2023 ರಲ್ಲಿ ಕೊನೆಗೊಳಿಸಿದ್ದರು. ಕಳೆದ ಜುಲೈನಲ್ಲಿ ಮಾಂಟ್ರಿಯಲ್‌ನಲ್ಲಿ ಟ್ರುಡೊ ಮತ್ತು ಪೆರ್ರಿ ಭೋಜನಕೂಟದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಇವರಿಬ್ಬರ ನಡುವೆ ಡೇಟಿಂಗ್ ವದಂತಿ ಕೇಳಿ ಬಂದಿತ್ತು. ಅನಂತರ ಇಬ್ಬರೂ ಮೌಂಟ್ ರಾಯಲ್ ಪಾರ್ಕ್‌ನಲ್ಲಿ ಸುತ್ತಾಡಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.