ದುಬೈ: ನ್ಯೂಯಾರ್ಕ್ ನಗರದ (New York Mayor) ಅತಂತ ಕಿರಿಯ ಮೇಯರ್ (youngest mayor) ಆಗಿ ಆಯ್ಕೆಗೊಂಡ ಮೊದಲ ಮುಸ್ಲಿಂ, ಜೋಹ್ರಾನ್ ಮಮ್ದಾನಿ (Zohran Mamdani) ಗೆಲುವಿಗೆ ದುಬೈಯಲ್ಲಿ ಸಂಭ್ರಮಿಸಲಾಗಿದೆ. ಬುರ್ಜ್ ಖಲೀಫಾದ ಹಿನ್ನೋಟವನ್ನು ಅವರ ವಿವಾಹದ ಚಿತ್ರದಲ್ಲಿ ಕಾಣಬಹುದು. ಭಾರತೀಯ ಮೂಲದ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಉಗಾಂಡಾದ ಶಿಕ್ಷಣ ತಜ್ಞ ಮಹಮೂದ್ ಮಮ್ದಾನಿ ಅವರ ಮಗನಾಗಿರುವ ಜೋಹ್ರಾನ್ ಮಮ್ದಾನಿ ಮತ್ತು ರಾಮ ದುವಾಜಿ (Syrian-American artist Rama Duwaji) ಅವರ ನಿಶ್ಚಿತಾರ್ಥ ಪಾರ್ಟಿ ಮತ್ತು ನಿಕಾಹ್ ಅನ್ನು 2024ರ ಡಿಸೆಂಬರ್ ನಲ್ಲಿ ದುಬೈನಲ್ಲಿ ಆಯೋಜಿಸಲಾಗಿತ್ತು. ಈ ನೆನಪಿನಲ್ಲಿ ಬುರ್ಜ್ ಖಲೀಫಾದ ಚಿತ್ರವೂ ಸೇರಿಕೊಂಡಿದೆ.
ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ 34 ವರ್ಷ ವಯಸ್ಸಿನ ಜೋಹ್ರಾನ್ ಮಮ್ದಾನಿ ಅವರ ವಿವಾಹ 2024ರ ಡಿಸೆಂಬರ್ ನಲ್ಲಿ ಅದ್ದೂರಿಯಾಗಿ ದುಬೈನಲ್ಲಿ ನೆರವೇರಿಸಲಾಗಿತ್ತು. ಇದರ ಚಿತ್ರದಲ್ಲಿ ಬುರ್ಜ್ ಖಲೀಫ ಕೂಡ ಇದೆ.
ಇದನ್ನೂ ಓದಿ: Zohran Mamdani:ಜೋಹ್ರಾನ್ ಮಮ್ದಾನಿಗೆ ನ್ಯೂಯಾರ್ಕ್ ನೂತನ ಮೇಯರ್ ಪಟ್ಟ! ಮಗನ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಮೀರಾ ನಾಯರ್
ಸಿರಿಯನ್- ಅಮೆರಿಕನ್ ಕಲಾವಿದೆ ರಾಮ ದುವಾಜಿ ಅವರನ್ನು ಜೋಹ್ರಾನ್ ಮಮ್ದಾನಿ 2021ರಲ್ಲಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾಗಿದ್ದರು. ಬಳಿಕ 2024ರ ಅಕ್ಟೋಬರ್ ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡರು. ಅನಂತರ 2024ರ ಡಿಸೆಂಬರ್ ತಿಂಗಳಲ್ಲಿ ಮಮ್ದಾನಿ ಮತ್ತು ರಾಮ ದುವಾಜಿ ವಿವಾಹವಾದರು. ದುವಾಜಿಯಲ್ಲಿ ಇವರಿಬ್ಬರ ನಿಶ್ಚಿತಾರ್ಥ ಪಾರ್ಟಿ ಮತ್ತು ನಿಕಾಹ್ ಅನ್ನು ಆಯೋಜಿಸಲಾಗಿತ್ತು. ದುವಾಜಿಯು ರಾಮ ದುವಾಜಿ ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದ ನಗರವಾಗಿದೆ. ಇಲ್ಲಿಯೇ ಅವರ ಕುಟುಂಬ ಈಗಲೂ ವಾಸವಾಗಿದೆ.
ಮಮ್ದಾನಿ ಮತ್ತು ರಾಮ ದುವಾಜಿ ದಂಪತಿ ತಮ್ಮ ನಿಶ್ಚಿತಾರ್ಥ ಮತ್ತು ನಿಕಾಹ್ ಸಮಾರಂಭವನ್ನು ವಿಡಾ ಕ್ರೀಕ್ ಬಂದರಿನ ಅದ್ಭುತವಾದ ಟೆರೇಸ್ ಮೇಲೆ ಆಯೋಜಿಸಲಾಗಿತ್ತು. ಇದರ ಹಿನ್ನೋಟದಲ್ಲಿ ಐಕಾನಿಕ್ ಬುರ್ಜ್ ಖಲೀಫವನ್ನು ಕಾಣಬಹುದು.
ದುಬೈ ಹೂಗಾರ ಎಲ್ ಎಂಎಫ್ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಈ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದರಲ್ಲಿ ಅತ್ಯಂತ ಸುಂದರ ಹೂಬಿಡುವ ಉದ್ಯಾನವನ್ನು ಇವರ ಮದುವೆಗಾಗಿ ರೂಪಿಸಿರುವುದನ್ನು ಕಾಣಬಹುದು. ಇದು ಅದ್ದೂರಿ ಪಾರ್ಟಿಯ ನೋಟವನ್ನು ನೀಡುತ್ತದೆ. ಮಮ್ದಾನಿ ಮತ್ತು ರಾಮ ದುವಾಜಿ ದಂಪತಿಯ ವಿವಾಹಕ್ಕಾಗಿ ಬಿಳಿ ಬಣ್ಣದ ಹೂವುಗಳನ್ನು ಬಳಸಲಾಗಿತ್ತು.
ಇದನ್ನೂ ಓದಿ: Zohran Mamdani: ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಆಯ್ಕೆ
ಇನ್ನು ಮದುವೆ ಧಿರಿಸಿನಲ್ಲಿ ರಾಮ ದುವಾಜಿ ಬಿಳಿ ಬಣ್ಣದ ಗೌನ್ ಧರಿಸಿದ್ದರು. ಜೋಹ್ರಾನ್ ಮಮ್ದಾನಿ ಕಡು ನೀಲಿ ಬಣ್ಣದ ಕುರ್ತಾ ಧರಿಸಿದ್ದರು. ಇವರ ವಿವಾಹ ಸಮಾರಂಭದ ಆಚರಣೆ ಕೇವಲ ದುಬೈನಲ್ಲಿ ಮಾತ್ರ ಆಗಿರಲಿಲ್ಲ. ಲೋವರ್ ಮ್ಯಾನ್‌ಹ್ಯಾಟನ್‌ನಲ್ಲಿರುವ ನಗರದ ಗುಮಾಸ್ತರ ಕಚೇರಿಯಲ್ಲಿ ನಡೆದ ಸರಳ ನ್ಯಾಯಾಲಯದ ವಿವಾಹದ ದಂಪತಿ ಬಳಿಕ ಉಗಾಂಡಾದಲ್ಲಿರುವ ಮಮ್ದಾನಿ ಅವರ ಕುಟುಂಬದ ಎಸ್ಟೇಟ್‌ನಲ್ಲಿ ಮೂರು ದಿನಗಳ ಅದ್ದೂರಿ ಆಚರಣೆಯನ್ನು ನಡೆಸಲಾಗಿತ್ತು.