ಪಾವತಿ ಮಾಡುವ ಮೊದಲು ಕೊಂಚ ನಿಲ್ಲಿ: ವೀಸಾದ ಸಲಹೆ ಪಾಲಿಸಿ ಸುರಕ್ಷಿತವಾಗಿರಿ
ವಂಚಕರು ಮೊಬೈಲ್ ಸೇವಾ ಸಂಸ್ಥೆಗಳನ್ನು ಮೋಸಗೊಳಿಸಿ ನಿಮ್ಮ ಸಂಖ್ಯೆ ಯನ್ನು ತಮ್ಮ ಸಿಮ್ ಗೆ ಪೋರ್ಟ್ ಮಾಡಬಹುದು. ಆ ಮೂಲಕ ನಿಮಗೆ ಬರುವ ಓಟಿಪಿಗಳನ್ನು ತಾವು ಹೊಂದಬಹುದು ಮತ್ತು ನಿಮ್ಮ ಖಾತೆಗಳಿಗೆ ಸುಭವಾಗಿ ಪ್ರವೇಶಿಸಬಹುದು. ಇದನ್ನು ಸಿಮ್ ಜ್ಯಾಕಿಂಗ್ ಎಂದೂ ಕರೆಯ ಲಾಗುತ್ತದೆ.


ಸೈಬರ್ ವಂಚನೆಗಳು ಮತ್ತು ಡಿಜಿಟಲ್ ಹಗರಣಗಳು ಸಿಕ್ಕಾಪಟ್ಟೆ ಜಾಸ್ತಿಯಾಗಿವೆ. ಸರ್ಕಾರಿ ಲೆಕ್ಕದ ಪ್ರಕಾರ ಆರ್ಥಿಕ ವರ್ಷ 2024ರಲ್ಲಿ ಜನರು ಒಟ್ಟು 1.77 ಬಿಲಿಯನ್ ರೂಪಾಯಿಗಳನ್ನು ವಂಚನೆಯಲ್ಲಿ ಕಳೆದುಕೊಂಡಿದ್ದಾರೆ. ವೀಸಾ ಡಿಜಿಟಲ್ ಪಾವತಿ ವಂಚನೆಗಳನ್ನು ತಕ್ಷಣ ಗುರುತಿ ಸಲು ಮತ್ತು ಅದರಿಂದ ತಪ್ಪಿಸಿಕೊಳ್ಳಲು ಕೆಲವು ಸರಳ ಸಲಹೆಗಳನ್ನು ಈ ಕೆಳಗೆ ನೀಡುತ್ತಿದೆ: ಸಿಮ್ ಸ್ವ್ಯಾಪ್: ವಂಚಕರು ಮೊಬೈಲ್ ಸೇವಾ ಸಂಸ್ಥೆಗಳನ್ನು ಮೋಸಗೊಳಿಸಿ ನಿಮ್ಮ ಸಂಖ್ಯೆ ಯನ್ನು ತಮ್ಮ ಸಿಮ್ ಗೆ ಪೋರ್ಟ್ ಮಾಡಬಹುದು. ಆ ಮೂಲಕ ನಿಮಗೆ ಬರುವ ಓಟಿಪಿಗಳನ್ನು ತಾವು ಹೊಂದಬಹುದು ಮತ್ತು ನಿಮ್ಮ ಖಾತೆಗಳಿಗೆ ಸುಭವಾಗಿ ಪ್ರವೇಶಿಸಬಹುದು. ಇದನ್ನು ಸಿಮ್ ಜ್ಯಾಕಿಂಗ್ ಎಂದೂ ಕರೆಯಲಾಗುತ್ತದೆ. ಒಂದು ವೇಳೆ ನಿಮ್ಮ ನೆಟ್ ವರ್ಕ್ ತಕ್ಷಣ ಕಡಿತ ಗೊಂಡರೆ, ಸಿಮ್ ಬದಲಾವಣೆ ಎಚ್ಚರಿಕೆಗಳು ಅಥವಾ ಲಾಗಿನ್ ಪ್ರಯತ್ನಗಳು ನಡೆಯುತ್ತಿರುವ ಮಾಹಿತಿ ಬಂದರೆ ಮತ್ತು ಎಸ್ಎಂಎಸ್ ನೋಟಿಫಿಕೇಷನ್ ಗಳು ಬರತೊಡಗಿದರೆ ಬಯೋ ಮೆಟ್ರಿಕ್ಸ್ ನಂತಹ ಮಲ್ಟಿ ಫ್ಯಾಕ್ಟರ್ ಅಥೆಂಟಿಕೆಷನ್ ಅನ್ನು ಸಕ್ರಿಯಗೊಳಿಸಿ.
ಇದನ್ನೂ ಓದಿ: Cyber Fraud: ಸೈಬರ್ ವಂಚಕರಿಂದ 50 ಲಕ್ಷ ಕಳೆದುಕೊಂಡ ವೃದ್ಧ ದಂಪತಿ ಆತ್ಮಹತ್ಯೆ
- ಡಿಜಿಟಲ್ ಅರೆಸ್ಟ್: ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುವ ವಂಚಕರು ನೀವು ಅಪರಾಧ ದಲ್ಲಿ ಭಾಗಿಯಾಗಿದ್ದೀರಿ ಎಂದು ಹೆದರಿಸಿ, ಬಂಧನ ತಪ್ಪಿಸಲು ತಕ್ಷಣ ಮತ್ತು ತುರ್ತಾಗಿ ಹಣ ಪಾವತಿ ಮಾಡಲು ಒತ್ತಾಯಿಸುತ್ತಾರೆ. ನೆನಪಿಡಿ, ನಿಜವಾದ ಅಧಿಕಾರಿಗಳು ಎಂದಿಗೂ ಕರೆಯ ಮೂಲಕ ಪಾವತಿ ಮಾಡಲು ಕೇಳುವುದಿಲ್ಲ. ಕರೆ ಮಾಡುವವರ ಸತ್ಯಾಸತ್ಯತೆಯನ್ನು ಪರಿಶೀ ಲಿಸಲು ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ನಲ್ಲಿ ಭಾರತ ಸರ್ಕಾರದ ಐ4ಸಿ ಆನ್ ಲೈನ್ ಡೇಟಾಬೇಸ್ ಅನ್ನು ಬಳಸಿ.
- ಸ್ಕಿಮ್ಮಿಂಗ್ ವಂಚನೆಗಳು: ಹ್ಯಾಕರ್ ಗಳು ಪಿಓಎಸ್ ಅಥವಾ ಎಟಿಎಂ ಯಂತ್ರಗಳಲ್ಲಿ ಸ್ಕಿಮ್ಮರ್ ಗಳನ್ನು ಬಳಸಿ ಅಥವಾ ವೆಬ್ ಸೈಟ್ ಗಳಲ್ಲಿ ದುರುದ್ದೇಶಪೂರಿತ ಕೋಡ್ ಗಳನ್ನು ಬಳಸಿ ನಿಮ್ಮ ಕಾರ್ಡ್ ವಿವರಗಳನ್ನು ಕದಿಯಬಹುದು ಅಥವಾ ಶಾಪಿಂಗ್ ಮಾಡುವವರನ್ನು ನಕಲಿ ಚೆಕ್ ಔಟ್ ಪೇಜ್ ಗಳಿಗೆ ರೀಡೈರೆಕ್ಟ್ ಮಾಡಬಹುದು. ಎಟಿಎಂಗಳಲ್ಲಿ ಸ್ಕಿಮ್ಮರ್ ಗಳನ್ನು ಪರಿಶೀಲಿಸಿ ಮತ್ತು ಸಂಪರ್ಕರಹಿತ ಪಾವತಿ ವ್ಯವಸ್ಥೆ ಬಳಸಿ ನಿಮ್ಮ ವೀಸಾ ಕಾರ್ಡ್ ಅನ್ನು ಅಂಗಡಿಗಳಲ್ಲಿ ಟ್ಯಾಪ್ ಮಾಡಿ. ನಂಬಿಕಸ್ಥ ಆಪ್ ಗಳಲ್ಲಿ ಮಾತ್ರ ನಿಮ್ಮ ಕಾರ್ಡ್‌ಗಳನ್ನು ಸೇವ್ ಮಾಡಿ ಮತ್ತು ಟ್ಯಾಪ್ ಮಾಡುವ ಮೂಲಕ ಪಾವತಿಸಿ!
- ವಾಯ್ಸ್ ಕ್ಲೋನಿಂಗ್ ಎಐ ವಂಚನೆಗಳು: ವಂಚಕರು ಎಐ ಬಳಸಿ ನಿಮಗೆ ಪರಿಚಿತ ವ್ಯಕ್ತಿಗಳ ಧ್ವನಿಯನ್ನು ಅನುಕರಿಸಬಹುದು ಮತ್ತು ನಿಮ್ಮನ್ನು ಅಪರಿಚಿತ ಸಂಖ್ಯೆಗಳು ಅಥವಾ ಜನರಿಗೆ ಹಣ ಕಳುಹಿಸಲು ಒತ್ತಾಯಿಸಬಹುದು. ಹಾಗಾಗಿ ಎಮರ್ಜೆನ್ಸಿ ಎಂದು ತೋರಿಸಿಕೊಳ್ಳುವ ಫೋನ್ ಕರೆಗಳ ಕುರಿತು ಸಂಶಯ ಇರಲಿ ಮತ್ತು ಅವರು ಸ್ನೇಹಿತರಂತೆ ತೋರಿದರೆ, ಅವರ ಗುರುತನ್ನು ಖಚಿತಪಡಿಸಿಕೊಳ್ಳಲು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ.

ಡಿಜಿಟಲ್ ವಂಚನೆಗಳನ್ನು ಸೈಬರ್ ಕ್ರೈಮ್ ಹೆಲ್ಪ್ ಲೈನ್ ಗೆ (1930 ಡಯಲ್ ಮಾಡಿ) ವರದಿ ಮಾಡಿ ಅಥವಾ ಅವರ ಪೋರ್ಟಲ್ ನಲ್ಲಿ ಅಥವಾ ಎನ್ ಸಿ ಆರ್ ಪಿಗೆ ವರದಿ ಮಾಡಿ.