ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cyber Fraud: ಸೈಬರ್‌ ವಂಚಕರಿಂದ 50 ಲಕ್ಷ ಕಳೆದುಕೊಂಡ ವೃದ್ಧ ದಂಪತಿ ಆತ್ಮಹತ್ಯೆ

ಸೈಬರ್ ವಂಚಕರು ಕೆಲ ದಿನಗಳ ಹಿಂದೆ ವೃದ್ಧ ಡಿಯಾಂಗೋಗೆ ವಿಡಿಯೋ ಕಾಲ್ ಮಾಡಿದ್ದು, ನಿಮ್ಮ ಫೋಟೊಗಳನ್ನು ಬಳಸಿಕೊಂಡು ಯಾರೋ ಸೈಬರ್ ವಂಚನೆ ಮಾಡಿದ್ದು ನಿಮ್ಮ ಮೇಲೆ ಕೇಸ್ ಆಗಿದೆ ಎಂದು ಹೇಳಿ ಹೆದರಿಸಿದ್ದಾರೆ. ಆ ಮೂಲಕ ದಂಪತಿ ಉಳಿತಾಯದ ಅಷ್ಟೂ ಹಣವನ್ನೂ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

ಸೈಬರ್‌ ವಂಚಕರಿಂದ 50 ಲಕ್ಷ ಕಳೆದುಕೊಂಡ ವೃದ್ಧ ದಂಪತಿ ಆತ್ಮಹತ್ಯೆ

ಡಿಯಾಂಗೊ ಜನರೆತ್‌, ಫ್ಲೇವಿಯಾನಾ ನಜರೆತ್

ಹರೀಶ್‌ ಕೇರ ಹರೀಶ್‌ ಕೇರ Mar 29, 2025 8:54 AM

ಬೆಳಗಾವಿ: ಸೈಬರ್ ವಂಚಕರ (Cyber fraud) ಕಿರುಕುಳಕ್ಕೆ ವೃದ್ಧ ದಂಪತಿ ಬಲಿಯಾದ (cyber crime) ಘಟನೆ ಬೆಳಗಾವಿ (belagvi news) ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಡಿಯಾಂಗೋ ನಜರತ್ (83) ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ (Self harming) ಶರಣಾಗಿದ್ದಾರೆ. ಇವರ ಪತ್ನಿ ಪ್ಲೇವಿಯಾನಾ ನಜರತ್ (79) ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೈಬರ್ ವಂಚಕರು ವೀಡಿಯೊ ಕರೆಗಳ ಮೂಲಕ ನಡೆಸಿದ ಮಾನಸಿಕ ಹಿಂಸೆ ಹಾಗೂ ಆರ್ಥಿಕ ನಷ್ಟದಿಂದಾಗಿ ವೃದ್ಧ ದಂಪತಿ ಗುರುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫ್ಲೇವಿಯಾನಾ ಮನೆಯೊಳಗೆ ಶವವಾಗಿ ಬಿದ್ದಿದ್ದರೆ ಡಿಯಾಂಗೋ ಅವರು ಮನೆಯ ನೀರಿನ ಟ್ಯಾಂಕ್‌ನಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹಗಳನ್ನು ಕಂಡ ನೆರೆಹೊರೆಯವರು ನಂದಗಡ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು ಶವಗಳನ್ನು ಖಾನಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಸ್ಥಳದಿಂದ ಇಂಗ್ಲಿಷ್‌ನಲ್ಲಿ ಬರೆದಿರುವ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಸೈಬರ್‌ ವಂಚನೆಯ ವಿವರಗಳನ್ನು ನೀಡಲಾಗಿದೆ.

ಮಹಾರಾಷ್ಟ್ರ ಸರ್ಕಾರದ ಸೆಕ್ರಟರಿ ಕಚೇರಿಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಡಿಯಾಂಗೋ ನಿವೃತ್ತಿಯಾದ ಬಳಿಕ ಬೀಡಿಗೆ ಬಂದು ಸೆಟ್ಲ್ ಆಗಿದ್ದರು. ಎರಡು ಎಕರೆ ಜಮೀನು ಮತ್ತು ಮನೆ ಹಾಗೂ ನಿವೃತ್ತಿಯಾದ ಬಳಿಕ ಬರುವ ಪೆನ್ಷನ್‌ನಲ್ಲಿ ಜೀವನ ನಡೆಸುತ್ತಿದ್ದ ವೃದ್ದ ದಂಪತಿ ನಿನ್ನೆ ಆತ್ಮಹತ್ಯೆ ದಾರಿ ಹಿಡಿದಿದ್ದು ಎಲ್ಲರಿಗೂ ಶಾಕ್ ಆಗುವಂತೆ ಮಾಡಿದೆ. ಸೈಬರ್ ವಂಚಕರು ಕೆಲ ದಿನಗಳ ಹಿಂದೆ ವೃದ್ಧ ಡಿಯಾಂಗೋಗೆ ವಿಡಿಯೋ ಕಾಲ್ ಮಾಡಿದ್ದು, ನಿಮ್ಮ ಫೋಟೊಗಳನ್ನು ಬಳಸಿಕೊಂಡು ಯಾರೋ ಸೈಬರ್ ವಂಚನೆ ಮಾಡಿದ್ದು ನಿಮ್ಮ ಮೇಲೆ ಕೇಸ್ ಆಗಿದೆ ಎಂದು ಹೇಳಿ ಹೆದರಿಸಿದ್ದಾರೆ.

ವಂಚನೆಯಾದ ಹಣವನ್ನು ನೀವು ಕಟ್ಟಿದರೆ ನಿಮ್ಮನ್ನ ನಾವು ರಕ್ಷಿಸುತ್ತೇವೆ ಎಂದು ಹೇಳಿ ಆರಂಭದಲ್ಲಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ಬ್ಯಾಂಕ್ ಅಕೌಂಟ್ ನಂಬರ್ ನೀಡಿ ಅದಕ್ಕೆ ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದಾರೆ. ಹೀಗೆ ಸುಮಾರು ಬಾರಿ ಕರೆ ಮಾಡಿ ಹೆದರಿಸಿ ಸುಮಾರು 50 ಲಕ್ಷ ರೂ. ವರೆಗೂ ಹಣವನ್ನು ಹಾಕಿಸಿಕೊಂಡಿದ್ದಾರೆ. ಗೋಲ್ಡ್ ಅಡವಿಟ್ಟು ಏಳು ಲಕ್ಷ, ನಿವೃತ್ತಿಯಾದಾಗ ಬಂದಿದ್ದ ಸುಮಾರು ನಲವತ್ತು ಲಕ್ಷ ಸೇರಿ ಐವತ್ತು ಲಕ್ಷ ಹಣವನ್ನು ಸೈಬರ್ ವಂಚಕರು ಹೇಳಿದ ಹಾಗೆ ಹಾಕುತ್ತಾ ಹೋಗಿದ್ದಾರೆ. ಇದಾದ ಬಳಿಕ ತಮಗೆ ಕರೆ ಬಂದ ನಂಬರ್‌ಗೆ ಡಿಯಾಂಗೋ ಕಾಲ್ ಮಾಡಿದ್ದು, ಅವರು ರಿಸೀವ್ ಮಾಡದಿದ್ದಾಗ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಹಾಕಿದ್ದಾರೆ. ಆದರೂ ರಿಪ್ಲೈ ಬಾರದಿದ್ದಾಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೊತೆಗೆ ತಮ್ಮ ಡೆತ್ ನೋಟ್‌ನಲ್ಲಿ ದಂಪತಿಗಳು ಗೋವಾದಲ್ಲಿ ಕೆಲವು ವ್ಯಕ್ತಿಗಳಿಂದ ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ. ಅದನ್ನು ತಮ್ಮ ಆಸ್ತಿಗಳನ್ನು ಮಾರಿ ಮರುಪಾವತಿಸಬೇಕೆಂದು ಹೇಳಿದ್ದಾರೆ. ಮೃತ ಡಿಯಾಂಗೋ ಮಹಾರಾಷ್ಟ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಅನೇಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳಿಗೆ ತರಬೇತಿ ನೀಡಿದ್ದರು. ತಮ್ಮ ಆತ್ಮಹತ್ಯೆ ಪತ್ರದಲ್ಲಿ ಶವಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಅಧ್ಯಯನಕ್ಕಾಗಿ ದಾನ ಮಾಡಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ: Road Accident: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಬಳಿ ಅಪಘಾತ, ಮೂವರು ಸಾವು, ಮೂವರು ಗಂಭೀರ